ಸ್ಪರ್ಮ್, ಪಿರಿಯಡ್ಸ್ ರಕ್ತದಿಂದಲೂ ಫೇಶಿಯಲ್… ಸುಂದರವಾಗಿ ಕಾಣಲು ಇವೆಲ್ಲಾ ಮಾಡ್ತಾರಾ ಜನ?

First Published | Jan 13, 2023, 12:07 PM IST

ನೀವು ಕೂಡ ತಿಂಗಳಿಗೆ ಒಂದು ಬಾರಿಯಾದರೂ ಫೇಶಿಯಲ್ ಮಾಡಿಸುತ್ತೀರಿ ಅಲ್ವಾ? ಸಾಮಾನ್ಯವಾಗಿ ನಾವು ಗೋಲ್ಡನ್ ಫೇಶಿಯಲ್, ಫ್ರುಟ್ ಫೇಶಿಯಲ್ ಮಾಡುತ್ತೇವೆ, ಆದರೆ ಪಿರಿಯಡ್ಸ್ ಬ್ಲಡ್ ಫೇಶಿಯಲ್, ಸ್ಪರ್ಮ್ ಫೇಶಿಯಲ್ ಯಾವತ್ತಾದ್ರೂ ಮಾಡಿಸಿದ್ದೀರಾ? ಪ್ರಪಂಚದಲ್ಲಿದೆ ಅಂತಹ ವಿಚಿತ್ರ ಫೇಶಿಯಲ್ ಗಳು. 

ಮಹಿಳೆಯರು ಬಯಸಿದರೆ, ಯಾವಾಗಲೂ ಯಂಗ್ ಆಗಿಯೇ ಕಾಣುತ್ತಾರೆ, ಜೊತೆಗೆ ಅವರ ಮುಖ ಹೊಳೆಯುವಂತೆ ಮಾಡಲು ಬ್ಯೂಟಿ ಪಾರ್ಲರ್ (Beauty Parlour) , ಫೇಶಿಯಲ್ ಮೊರೆ ಹೋಗುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು, ದುಬಾರಿ ಉತ್ಪನ್ನಗಳನ್ನು ಬಳಸುವಲ್ಲಿ ಅವರು ಯಾವತ್ತೂ ಹಿಂದೆ ಸರಿಯೋದಿಲ್ಲ. ಇಷ್ಟೇ ಅಲ್ಲ, ಅವರು ಅಜ್ಜಿಯ ಪ್ರಿಸ್ಕ್ರಿಪ್ಷನ್ ಗಳನ್ನು ಸಹ ಅಳವಡಿಸಿಕೊಳ್ಳುತ್ತಾರೆ. ಆದರೆ ಇಂದಿನ ಯುಗದಲ್ಲಿ, ಮಹಿಳೆಯರು ಕೆಲವು ವಿಚಿತ್ರ ಸೌಂದರ್ಯ ಸಲಹೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸೆಲೆಬ್ರಿಟಿಗಳು ಸಹ ಬಳಸುವ ವಿಚಿತ್ರವಾದ ಜೊತೆಗೆ ಛೀ ಎನ್ನುವಂತೆ ಮಾಡುವ ಸೌಂದರ್ಯ ಸಲಹೆಗಳು (weird beauty tricks) ಇಲ್ಲಿವೆ.

ವ್ಯಾಂಪೈರ್ ಫೇಶಿಯಲ್ (vampire facial)

ಅಮೆರಿಕದ ಮಾಧ್ಯಮ ವ್ಯಕ್ತಿತ್ವ, ಸೋಷಿಯಲ್ ವರ್ಕರ್, ರೂಪದರ್ಶಿ ಮತ್ತು ಉದ್ಯಮಿ ಕಿಮ್ ಕರ್ದಾಶಿಯನ್ ಪ್ರತಿದಿನ ಚರ್ಚೆಯಲ್ಲಿರುತ್ತಾರೆ. ಇವರು ತನ್ನ ಸೌಂದರ್ಯ ಮತ್ತು ಸೆಕ್ಸಿ ಆಕಾರದಿಂದಲೇ ಕಿಮ್ ಫೇಮಸ್. ಕಿಮ್ ಕರ್ದಾಶಿಯನ್ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ಸುಕ್ಕುಗಳನ್ನು ತಡೆಗಟ್ಟಲು ತನ್ನ ಕೈಯ ರಕ್ತವನ್ನೇ ಬಳಸುತ್ತಾರಂತೆ. ಇವರು ಪ್ಲೇಟ್ ಲೆಟ್ ಗಳನ್ನು ತೆಗೆದು ಮುಖಕ್ಕೆ ಇಂಜೆಕ್ಟ್ ಮಾಡಿ ಫೇಶಿಯಲ್ ಮಾಡಿಸುತ್ತಾರೆ. ಇದನ್ನು ವ್ಯಾಂಪೈರ್ ಫೇಶಿಯಲ್ ಎಂದು ಕರೆಯಲಾಗುತ್ತದೆ.

Tap to resize

ಪೆನೀಸ್ ಫೇಶಿಯಲ್ (penis facial)

ಹಾಲಿವುಡ್ ನಟಿ ಸಾಂಡ್ರಾ ಬುಲಕ್ ಯಂಗ್ ಆಗಿ ಕಾಣಲು ‘ಪೆನೀಸ್ ಫೇಶಿಯಲ್' ಮಾಡುತ್ತಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಯಂಗ್ ಆಗಿ ಕಾಣಲು ತಾನು ವಿಶಿಷ್ಟ ಚಿಕಿತ್ಸೆಯನ್ನು ಪಡೆಯುತ್ತೇವೆ ಎಂದು ಅವರು ಹೇಳಿದ್ದರು. ಇದರಲ್ಲಿ ಕೊರಿಯನ್ ಲ್ಯಾಬ್ ಗಳಲ್ಲಿ ಫೋರ್ ಸ್ಕಿನ್ ಕೋಶಗಳ ತದ್ರೂಪಿಗಳನ್ನು ತಯಾರಿಸಲಾಗುತ್ತದೆ. ಇದನ್ನೆ ಅವರು ಸೌಂದರ್ಯ ಹೆಚ್ಚಿಸಲು ಬಳಸ್ತಾರೆ.

ಸ್ಪರ್ಮ್ ಫೇಶಿಯಲ್  (sperm facial)

ನ್ಯೂಯಾರ್ಕ್ನಲ್ಲಿ ವಾಸಿಸುವ 26 ವರ್ಷದ ಕೆಲ್ಲಿ ಜೋಲನ್ಸ್ಕಿ, ತಾನು ಪುರುಷನ ವೀರ್ಯದಿಂದ ಫೇಶಿಯಲ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಡೈಲಿ ಮೇಲ್ ಜೊತೆಗಿನ ಸಂಭಾಷಣೆಯಲ್ಲಿ, ಜೊಲಾನ್ಸ್ಕಿ ಪುರುಷರ ವೀರ್ಯವನ್ನು ಫೇಸ್ ಕ್ರೀಮ್ ಆಗಿ ಹಚ್ಚೋದ್ರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತೆ ಎಂದು ಹೇಳಿದರು. ಆಕೆ ತನ್ನ ಬಾಯ್ ಫ್ರೆಂಡ್ ಸ್ಪರ್ಮ್ ತೆಗೆದಿಟ್ಟುಕೊಂಡು ಅದರಿಂದ ಫೇಶಿಯಲ್ ಮಾಡುತ್ತಾರೆ. ವೀರ್ಯವು ಮುಖವನ್ನು ಸುಧಾರಿಸುವ ಪೋಷಕಾಂಶಗಳು ಮತ್ತು ಪ್ರೋಟೀನ್ ಗಳನ್ನುಹೊಂದಿರುತ್ತದೆ ಎಂದು ಆಕೆ ಹೇಳುತ್ತಾರೆ.

ಜೇನುನೊಣ ವಿಷದ ಫೇಶಿಯಲ್ (honey bee poison facial)

ಫೇಸ್ ಮಾಸ್ಕ್ ಗಳಿಗೆ ಜೇನುನೊಣ ವಿಷ ಬಳಸಲಾಗುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಆದರೆ ಕೇಂಬ್ರಿಡ್ಜ್ ನ ಡಚೆಸ್, ಕೇಟ್ ಮಿಡ್ಲ್ಟನ್ ತನ್ನ ಸೌಂದರ್ಯಕ್ಕಾಗಿ ಜೇನುನೊಣ ವಿಷದ ಮಾಸ್ಕ್ ಧರಿಸುತ್ತಾಳೆ. ಈ ಫೇಸ್ ಮಾಸ್ಕ್ ಆಂಟಿ-ಏಜಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಸ್ಥಿರಗೊಳಿಸುತ್ತದೆ.

ಪ್ಲಾಸೆಂಟಾ ಫೇಶಿಯಲ್ (placenta facial)

ಹಾಲಿವುಡ್ ನಟಿ ಜೆನ್ನಿಫರ್ ಲೋಪೆಜ್ ವಯಸ್ಸಾದ್ರೂ ಕೂಡ ಇನ್ನೂ ಯಂಗ್ ಆಗಿಯೇ ಕಾಣುತ್ತಾರೆ. ಅವಳ ಸೌಂದರ್ಯದ ಹಿಂದಿನ ರಹಸ್ಯವೆಂದರೆ ಪ್ಲಾಸೆಂಟಾ ಮುಖದ ಚಿಕಿತ್ಸೆ. ಅವರು ಪ್ಲಾಸೆಂಟಾ ಫೇಶಿಯಲ್ ಬಳಸುತ್ತಾರೆ. ಇದು ಪ್ರೋಟೀನ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎನ್ನಲಾಗುತ್ತೆ. 

ಋತುಚಕ್ರದ ರಕ್ತದಿಂದ ಚರ್ಮದ ಆರೈಕೆ (periods blood facial)

ಕೋಸ್ಟಾ ರಿಕಾದ ಮಹಿಳೆಯೊಬ್ಬಳು ಋತುಚಕ್ರದ ಸಮಯದಲ್ಲಿ ಹೊರ ಬರುವ ರಕ್ತವನ್ನು ಸೌಂದರ್ಯವನ್ನು ಹೆಚ್ಚಿಸಲು ಬಳಸುತ್ತಾಳೆ. 23 ವರ್ಷದ ದರಿಯಾ ತನ್ನ ಮುಖದ ಮೇಲೆ ಮುಟ್ಟಿನ ರಕ್ತವನ್ನು ಹಚ್ಚುತ್ತಾರೆ ಎಂದು ಹೇಳುತ್ತಾರೆ. ಇದು ಸ್ಟೆಮ್ ಸೆಲ್ ಅನ್ನು ಸರಿಪಡಿಸುತ್ತೆ, ಜೊತೆಗೆ ಸೌಂದರ್ಯವೂ ಹೆಚ್ಚುತ್ತೆ ಎನ್ನುತ್ತಾರೆ ಇವರು. 

Latest Videos

click me!