ಸಮಂತಾ ರುತ್ ಪ್ರಭು (Samantha Rut Prabhu)
ಜನಪ್ರಿಯ ನಟಿ ಸಮಂತಾ ರುತ್ ಪ್ರಭು ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದ್ದಾರೆ. ನಟಿಯ ಲುಕ್ ತುಂಬಾ ಆಕರ್ಷಕವಾಗಿದೆ. ವರದಿಗಳ ಪ್ರಕಾರ, ನಟಿ ಪ್ಲಾಸ್ಟಿಕ್ ಸರ್ಜರಿ ಮಾಡುವ ಮೂಲಕ ನೋಸ್ ಜಾಬ್ ಮಾಡಿದ್ದಾರೆ.
ತಮನ್ನಾ ಭಾಟಿಯಾ (Tamanna Bhatia):
ನಟಿ ತಮನ್ನಾ ಅನೇಕ ವರ್ಷಗಳಿಂದ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್, ಅಜಿತ್, ಸೂರ್ಯ ಮತ್ತು ವಿಕ್ರಮ್ ಮೊದಲಾದ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಇವರು ಸಹ ಸುಂದರವಾಗಿ ಕಾಣಲು ತಮ್ಮ ತುಟಿಗಳ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಾಜಲ್ ಅಗರ್ವಾಲ್ (Kajal Agarwal)
ನಟಿ ಕಾಜಲ್ ಅಗರ್ವಾಲ್ ತನ್ನ ಲುಕ್ ಬದಲಾಯಿಸಲು ನೋಸ್ ಜಾಬ್ ಪಡೆದರು. ಕಾಜಲ್ ತನ್ನ ನಟನಾ ವೃತ್ತಿ ಜೀವನವನ್ನು ಹಿಂದಿ ಚಿತ್ರ ಕ್ಯುನ್ ಹೋ ಗಯಾ ನಾ ಮೂಲಕ ಪ್ರಾರಂಭಿಸಿದರು. ಇದರ ನಂತರ, ಕಾಜಲ್ ಅಗರ್ವಾಲ್ ದಕ್ಷಿಣದ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು.
ಶ್ರುತಿ ಹಾಸನ್ (Shruthi Hasan)
ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್ ಕೂಡ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದರು. ಶ್ರುತಿ ಹಾಸನ್ ಅವರ ನಟನೆ ಮತ್ತು ಅವರ ಸೌಂದರ್ಯದಿಂದಾಗಿ ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.
ಕೀರ್ತಿ ಸುರೇಶ್ (Keerthi Suresh)
ಕೆಲವು ಮಾಧ್ಯಮ ವರದಿಗಳ ಪ್ರಕಾರ, ನಟಿ ಕೀರ್ತಿ ಸುರೇಶ್ ಅವರು ಸರ್ಕಾರು ವಾರಿ ಪಾಟಾ ಚಿತ್ರ ಬಿಡುಗಡೆಗೆ ಮೊದಲು ಲಿಪ್ ಜಾಬ್ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೀರ್ತಿ ಸುರೇಶ್ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಮಹಾನಟಿ ಚಿತ್ರಕ್ಕಾಗಿ ಅವರು ಈ ಪ್ರಶಸ್ತಿಯನ್ನು ಪಡೆದರು.
ಶ್ರೇಯಾ ಶರಣ್ (Shriya Saran):
ನಟಿ ಶ್ರೇಯಾ ಶರಣ್ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಡ್ರೀಮ್ ಗರ್ಲ್ ಆಗಿದ್ದರು. ಅವರ ನಟನೆ ಅನೇಕ ಚಲನಚಿತ್ರಗಳು ಹಿಟ್ ಆಗಿದ್ದವು. ಅಲ್ಲದೆ, ಅವರು ತಮಿಳು ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಕನ್ನಡದಂತಹ ಇತರ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತುಟಿಗಳ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಸಮೀರಾ ರೆಡ್ಡಿ (Sameera Reddy):
ಸಮೀರಾ ರೆಡ್ಡಿ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. 2002ರಲ್ಲಿ ಬಾಲಿವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಂತರ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದರು. ಅಲ್ಲದೆ, ಅವರು ಸೌಂದರ್ಯಕ್ಕಾಗಿ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಅನುಷ್ಕಾ ಶೆಟ್ಟಿ (Anushka Shetty):
ತೆಲುಗು ಚಿತ್ರರಂಗದ ಬಹುಬೇಡೀಕೆಯ ನಟಿ ಎಂದರೆ ಅನುಷ್ಕಾ ಶೆಟ್ಟಿ. ತನ್ನ ಸೌಂದರ್ಯ ಮತ್ತು ಅದ್ಭುತ ನಟನೆಯಿಂದ ಜನಪ್ರಿಯತೆ ಗಳಿಸಿರುವ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ತನ್ನ ಸೊಂಟ ಮತ್ತು ಹೊಕ್ಕುಳಿನ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಲಿಪೋಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ತ್ರಿಷಾ ಕೃಷ್ಣನ್ (Trisha Krishnan):
ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣದ ಸುಂದರಿ ತ್ರಿಷಾ ರೈನೋಪ್ಲಾಸ್ಟಿಗೆ ಒಳಗಾಗಿದ್ದರು. ರೈನೋಪ್ಲಾಸ್ಟಿ ಎಂಬುದು ಮೂಗಿನ ಆಕಾರವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆ. ಈ ಚಿಕಿತ್ಸೆ ಬಳಿಕ ತ್ರಿಷಾ ಸೌಂದರ್ಯ ಮತ್ತಷ್ಟು ಸುಂದರವಾಗಿದೆ ಎಂದು ಹೇಳಿದ್ರೆ ತಪ್ಪಿಲ್ಲ.
ನಯನತಾರಾ (Nayanthara)
ನಯನತಾರಾ ಅವರ ಬಗ್ಗೆ ಅನೇಕ ಬಾರಿ ಪ್ಲಾಸ್ಟಿಕ್ ಸರ್ಜರಿಯ ವರದಿಗಳು ಬಂದಿವೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ನಯನತಾರಾ ತುಟಿಯ ಸರ್ಜರಿ ಮಾಡಿಸಿದ್ದರು. ನಯನತಾರಾ 2003ರ ಮಲಯಾಳಂ ಚಲನಚಿತ್ರದ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದೀಗ ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.