2022ರಲ್ಲಿ ಮತ್ತೆ ಬಂದಿದ್ದ ಲೆದರ್ ಟ್ರೆಂಡ್: ಸೆಲೆಬ್ರಿಟಿಗಳ ಲುಕ್ ಹೇಗಿತ್ತು ನೋಡಿ

Published : Dec 23, 2022, 07:06 PM IST

2022 ರ ವರ್ಷವು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಹಾಗಾಗಿ  ಈ ವರ್ಷ ಹೆಚ್ಚು ಟ್ರೆಂಡಿಂಗ್ ಆಗಿದ್ದ ವಿಷಯಗಳನ್ನು ಹೇಳೊದಾದ್ರೆ ಮತ್ತು ಫ್ಯಾಷನ್ ಬಗ್ಗೆ ಮಾತನಾಡೋದಾದ್ರೆ, ಈ ವರ್ಷ ಲೆದರ್ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಲೆದರ್ ಬೂಟು ಅಥವಾ ಬೆಲ್ಟ್ ಗಳು ಮಾತ್ರವಲ್ಲದೆ, ಲೆದರ್ ಉಡುಪುಗಳು ಸಹ ಸಾಕಷ್ಟು ಟ್ರೆಂಡಿಯಾಗಿದ್ದವು. ಸೆಲೆಬ್ರೆಟಿಗಳು ಅತ್ಯುತ್ತಮ ರೀತಿಯಲ್ಲಿ ಲೆದರ್ನಲ್ಲೆ ಸ್ಟೈಲ್ ಮಾಡುತ್ತಿದ್ದಾರೆ. ಈ ವರ್ಷ ಲೆದರ್ ಹೇಗೆ ಟ್ರೆಂಡ್ ನಲ್ಲಿತ್ತು ಎಂಬುದನ್ನು ಇಲ್ಲಿ ನೋಡೋಣ..

PREV
17
2022ರಲ್ಲಿ ಮತ್ತೆ ಬಂದಿದ್ದ ಲೆದರ್ ಟ್ರೆಂಡ್: ಸೆಲೆಬ್ರಿಟಿಗಳ ಲುಕ್ ಹೇಗಿತ್ತು ನೋಡಿ

ಲೆದರ್ ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯೋದಿಲ್ಲ. ಆದರೆ ಈ ವರ್ಷ ಅದನ್ನು ಬಳಸಿದ ವಿಧಾನವು ಸಾಕಷ್ಟು ಸ್ಟೈಲಿಶ್ ಆಗಿತ್ತು. ಇತ್ತೀಚೆಗೆ, ಜಾಹ್ನವಿ ಕಪೂರ್(Jhanvi Kapoor)ಮುಂಬೈನಲ್ಲಿ ನಡೆದ ಗ್ರಾಜಿಯಾ ಯಂಗ್ ಫ್ಯಾಷನ್ ಅವಾರ್ಡ್ಸ್ 2022 ರಲ್ಲಿ ಸುಂದರವಾದ ಕಪ್ಪು ಉಡುಪನ್ನು ಧರಿಸಿದ್ದರು. ಅದರೊಂದಿಗೆ ಲೆದರ್ ಗ್ಲೌಸ್ ಸಹ ಧರಿಸಿದ್ದರು. 

27

ಬಿಗ್ ಬಾಸ್ ಸ್ಪರ್ಧಿ ಮತ್ತು ಟಿವಿಯ ಪ್ರಸಿದ್ಧ ನಟಿ ರಶ್ಮಿ ದೇಸಾಯಿ(Rashmi Desai) ಕೂಡ ಕಪ್ಪು ಬಣ್ಣದ ಲೆದರ್ ಉಡುಪಿನಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡ್ರು. ಅವರು ಸಣ್ಣ ಮತ್ತು ಡೀಪ್ ಕುತ್ತಿಗೆಯ ಉಡುಪನ್ನು ಧರಿಸಿದ್ದರು. ಅಲ್ಲದೆ, ಬೋಲ್ಡ್ ಐ ಮೇಕಪ್ ನೊಂದಿಗೆ ಟೈಟ್ ಪೋನಿ ಹಾಕಿದ್ರು.

37

ಜಾಕ್ವೆಲಿನ್ ಫರ್ನಾಂಡೀಸ್(Jacqueline fernandez) ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಹೆಡ್ಲೈನ್ಸ್ ಲ್ಲಿದ್ದಾರೆ. ಇದು ಧಾಗ್ ಸುಕೇಶ್ ಅವರೊಂದಿಗಿನ ಅವರ ಸಂಬಂಧದ ಸುದ್ದಿಯಾಗಿರಲಿ ಅಥವಾ ಅವರ  ಮನಮೋಹಕ ಲುಕ್ ಆಗಿರಲಿ ಒಂದಿಲ್ಲೊಂದು ಕಾರಣದಲ್ಲಿ ಅವರು ಸುದ್ದಿಯಲ್ಲಿರುತ್ತಾರೆ. ಕೆಂಪು ಬಣ್ಣದ ಸೈಡ್ ಸ್ಲಿಟ್ ಡ್ರೆಸ್ ನಲ್ಲಿ ಅವರ ಲುಕ್ ಒಮ್ಮೆ ನೋಡಿ, ಅದರಲ್ಲಿ ಅವರು ಬಾಡಿಕಾನ್ ಉಡುಪನ್ನು ಧರಿಸಿದ್ದಾರೆ. ಅವರು ಕಪ್ಪು ಬಣ್ಣದ ಹೈ ಹೀಲ್ಸ್ ನಲ್ಲಿ ಎಷ್ಟು ಹಾಟ್ ಕಾಣ್ತಾರೆ ಅಲ್ವಾ.

47

ದೀಪಿಕಾ(Deepika Padkone) ಅವರ ಪ್ರತಿಯೊಂದು ಲುಕ್ ಸಹ  ಸೋಶಿಯಲ್ ಮೀಡಿಯಾದಲ್ಲಿ ಸ್ಪ್ಲಾಶ್ ಆಗುತ್ತಲೇ ಇರುತ್ತೆ. ಕೆಲವು ಸಮಯದ ಹಿಂದೆ, ಅವರು ಒನ್ ಶೋಲ್ಡರ್ ಕಪ್ಪು ಬಣ್ಣದ ಲೆದರ್ ಡ್ರೆಸ್ ಧರಿಸಿದ್ದರು. ಇದರೊಂದಿಗೆ, ಅವರು ಉದ್ದನೆಯ ಚೈನ್ ಇಯರಿಂಗ್ಸ್ ಧರಿಸಿದ್ದರು. ಹೀಗಿತ್ತು ನೋಡಿ ಅವರ ಲುಕ್! 

57

ದೀಪಿಕಾ ಲೆದರ್(Leather) ಡ್ರೆಸ್ ಮಾತ್ರವಲ್ಲದೆ ಲೆದರ್ ಪ್ಯಾಂಟ್ ಧರಿಸಿದ್ದರು. ಈ ವರ್ಷ, ಅವರು ಕೆಂಪು ಬಿಗಿಯಾದ ಪ್ಯಾಂಟ್ ಧರಿಸಿ ಏರ್ ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಇದರೊಂದಿಗೆ ಕೆಂಪು ಟರ್ಟಲ್ ನೆಕ್ ಸ್ವೇಟ್ ಶರ್ಟ್ ಧರಿಸಿದ್ರು. ಒಟ್ಟಲ್ಲಿ ಅವರು ಯಾವುದೇ ಡ್ರೆಸ್ ನಲ್ಲೂ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ.

67

ಬಿಗ್ ಬಾಸ್ 15 ರ ವಿಜೇತೆ ತೇಜಸ್ವಿ ಪ್ರಕಾಶ್(Thejaswi Prakash) ಕೂಡ ಯಾವಾಗಲೂ ಅವರ ಪ್ರತಿ ಲುಕ್ ನಿಂದ  ಚರ್ಚೆಯಲ್ಲಿರುತ್ತಾರೆ. ಈಗ ಈ ಚಿತ್ರವನ್ನು ನೋಡಿ, ಇದರಲ್ಲಿ ನಟಿ ಕಪ್ಪು ಬಣ್ಣದ ಕಟ್ ಔಟ್ ಸೈಡ್ ಸ್ಲಿಟ್ ಫ್ಲೋರ್ ಲೆಂತ್ ಉಡುಪನ್ನು ಧರಿಸಿದ್ದಾರೆ. ಎಷ್ಟು ಚೆನ್ನಾಗಿ ಕಾಣಿಸ್ತಿದ್ದಾರೆ ಅಲ್ವಾ?

77

ಇತ್ತೀಚೆಗೆ, ಕಿಯಾರಾ ಅಡ್ವಾಣಿ(Kiara Advani) ಅವರು ತಮ್ಮ ಗೋವಿಂದ ಮೇರಾ ನಾಮ್ ಚಿತ್ರದ ಪ್ರಚಾರದ ಸಮಯದಲ್ಲಿ ಕಪ್ಪು ಬಣ್ಣದ ಟೈಟ್ ಲೆದರ್ ಲೆಗ್ಗಿಂಗ್ ಸಹ ಧರಿಸಿದ್ದರು.ಅವರ ಲುಕ್ ಹೇಗಿತ್ತು ನೀವೇ ನೋಡಿ. ಇವೆಲ್ಲಾ ಈ ವರ್ಷ ಹೆಚ್ಚು ಟ್ರೆಂಡ್ ನಲ್ಲಿದ್ದ ಲೆದರ್ ಡ್ರೆಸ್ ಗಳು. ಮುಂದಿನ ಪಾರ್ಟಿಯಲ್ಲಿ ನೀವೂ ಕೂಡ ಇದನ್ನು ಟ್ರೈ ಮಾಡಬಹುದು. 

Read more Photos on
click me!

Recommended Stories