ಕಳೆದ ಆರು ತಿಂಗಳಿನಿಂದ ಸ್ಪರ್ಧಿಸುತ್ತಿದ್ದ ಕೇರಳ ಮೂಲದ ಶ್ರುತಿ ಸಿತಾರಾ ಅವರಿಗೆ ಈ ವರ್ಷದ ಮಿಸ್ ಟ್ರಾನ್ಸ್ ಗ್ಲೋಬಲ್ ಪ್ರಶಸ್ತಿಯನ್ನು ನೀಡಲಾಗಿದೆ. ಸರ್ಕಾರಿ ನೌಕರಿ ಪಡೆದ ನಾಲ್ವರು ತೃತೀಯಲಿಂಗಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಸಿತಾರಾ ಅವರು ತಮ್ಮ 95 ಸಾವಿರ ಫಾಲೋವರ್ಸ್ ಜೊತೆ ಈ ಸುದ್ದಿಯನ್ನು Instagramನಲ್ಲಿ ಹಂಚಿಕೊಂಡಿದ್ದಾರೆ.
ಮಿಸ್ ಟ್ರಾನ್ಸ್ ಗ್ಲೋಬಲ್ 2021, ಈ ಸ್ಮೈಲ್ ನನಗೆ ತುಂಬಾ ಅರ್ಥಪೂರ್ಣವಾಗಿದೆ. ನನ್ನ ದೇಶಕ್ಕಾಗಿ ನನ್ನ ಸಮುದಾಯಕ್ಕಾಗಿ ಟ್ರಾನ್ಸ್‌ಗ್ಲೋಬಲ್ ಸಂಸ್ಥೆಗಾಗಿ ತುಳಿತಕ್ಕೊಳಗಾದ ಕಷ್ಟದ ಅಂಚಿನಲ್ಲಿರುವ ಎಲ್ಲರಿಗೂ ಇಲ್ಲಿ ನಾನು, ಶ್ರುತಿ ಸಿತಾರಾ, ಮಿಸ್ ಟ್ರಾನ್ಸ್ ಗ್ಲೋಬಲ್ 2021 ಶೀರ್ಷಿಕೆ ವಿಜೇತೆ ಈ ಯಶಸ್ವಿ ಪ್ರಯಾಣದ ಹಿಂದೆ ಇರುವ ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಬರೆದಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ಲಂಡನ್‌ನಲ್ಲಿ ನಡೆಯಬೇಕಿದ್ದ ಭೌತಿಕ ಕಾರ್ಯಕ್ರಮವನ್ನು ಈ ವರ್ಷ ರದ್ದುಗೊಳಿಸಿದ್ದರಿಂದ ಆನ್‌ಲೈನ್ ಈವೆಂಟ್‌ನಲ್ಲಿ ಟೈಟಲ್‌ಗಳನ್ನು ನೀಡಲಾಯಿತು.
25 ವರ್ಷದ ಸಿತಾರಾ ಕೇರಳ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯಲ್ಲಿ ಯೋಜನಾ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಮಾಡೆಲ್-ಕಲಾವಿದರನ್ನು ಕೇರಳದ ಉನ್ನತ ಶಿಕ್ಷಣ ಸಚಿವೆ ಡಾ ಆರ್ ಬಿಂದು ಅವರು ಅಭಿನಂದಿಸಿದ್ದಾರೆ.
ಅವರು ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಕೇರಳೀಯರಾದ ಶ್ರುತಿ ಸಿತಾರಾ ಅವರು ಮಿಸ್ ಟ್ರಾನ್ಸ್ ಗ್ಲೋಬಲ್ 2021 ಆಗಿ ಆಯ್ಕೆಯಾಗಿದ್ದಾರೆ. ಇದು ಪೂರ್ವಾಗ್ರಹಗಳ ವಿರುದ್ಧ ಸುದೀರ್ಘ ಹೋರಾಟದ ನಂತರ ಅವರು ಸಾಧಿಸಿದ ಪ್ರಶಸ್ತಿ. ನಮ್ಮ ಸಮಾಜದ ಸಂಕುಚಿತ ಮನೋಭಾವ ಮೆಟ್ಟಿ ನಿಂತ ಪ್ರಶಸ್ತಿ. ಕೇರಳಕ್ಕೆ ಅಪಾರ ಹೆಮ್ಮೆಯ ವಿಷಯ. ಅಭಿನಂದನೆಗಳು ಶ್ರುತಿ ಎಂದು ಬರೆದಿದ್ದಾರೆ.
ಈ ವರ್ಷದ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಆರ್‌ಜೆ ಅನನ್ಯಾ ಕುಮಾರಿ ಅಲೆಕ್ಸ್ ಅವರನ್ನು ಉಲ್ಲೇಖಿಸಿ ಸಿತಾರಾ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ನನ್ನ ಅಮ್ಮ ಮತ್ತು ಅನನ್ಯಾ ಚೇಚಿ ಗೆ ಅರ್ಪಿಸಿದ್ದೇನೆ ಎಂದು ಬರೆದಿದ್ದಾರೆ.
ಮಿಸ್ ಟ್ರಾನ್ಸ್ ಗ್ಲೋಬಲ್ 2021 ಗಾಗಿ ತನ್ನ ಆಡಿಷನ್ ಟೇಪ್‌ನಲ್ಲಿ ಇದು ಸ್ವಾಭಿಮಾನ, ಹೆಮ್ಮೆ ಮತ್ತು ಘನತೆಯೊಂದಿಗೆ ಜೀವನವನ್ನು ಮುನ್ನಡೆಸಲು ಮತ್ತು ಪ್ರೇರೇಪಿಸಲು ನನಗೆ ಸಹಾಯ ಮಾಡುತ್ತದೆ. ಆದರೆ ನನಗೆ ಮಾತ್ರವಲ್ಲ, ತಮ್ಮ ಮುಖಗಳನ್ನು ಮರೆಮಾಚುವ ಜನರ ಗುಂಪಿಗೆ. ರೈನ್ ಬೋ ಎಂದು ಬರೆದಿದ್ದಾರೆ.
ಮನುಷ್ಯ ಮಾಡುವ ಎಲ್ಲವನ್ನೂ ನಾವು ಮಾಡಲು ಸಮರ್ಥರಾಗಿದ್ದೇವೆ ಎಂದು ನಾನು ಜಗತ್ತಿಗೆ ತೋರಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಆಕೆಯ ನಂತರ ಫಿಲಿಪೈನ್ಸ್ ಮತ್ತು ಕೆನಡಾದ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದರು.
ಮಿಸ್ ಟ್ರಾನ್ಸ್ ಗ್ಲೋಬಲ್ ಎಂಬುದು ಟ್ರಾನ್ಸ್‌ಜೆಂಡರ್ ಮತ್ತು ಎಲ್‌ಜಿಬಿಟಿ ಸಮಸ್ಯೆಗಳ ಕುರಿತು ಪ್ರಪಂಚದಾದ್ಯಂತ ಜಾಗೃತಿ ಮೂಡಿಸಲು ಪ್ರಾರಂಭಿಸಲಾದ ಅಂತರರಾಷ್ಟ್ರೀಯ ಆನ್‌ಲೈನ್ ಸ್ಪರ್ಧೆಯಾಗಿದೆ. ಸಿತಾರಾ ಅವರು ತಮ್ಮ ಕಿರೀಟವನ್ನು ತನ್ನ ತಾಯಿ ಮತ್ತು ದಿವಂಗತ ಸ್ನೇಹಿತೆ ಅನನ್ಯಾ ಕುಮಾರಿ ಅಲೆಕ್ಸ್‌ಗೆ ಅರ್ಪಿಸಿದ್ದಾರೆ. ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಆರ್‌ಜೆ, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೊಚ್ಚಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವನ್ನು ಆ ಸಂದರ್ಭ ಆರೋಪಿಸಲಾಗಿತ್ತು. ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಲೆಕ್ಸ್ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.