Wedding Jewelry: ಚಿನ್ನ ಕೊಳ್ಳೋ ಮುನ್ನ ಇರಲಿ ಈ ವಿಷಯಗಳು ಮನದಲ್ಲಿ ಇನ್ನ

First Published | Nov 29, 2021, 5:38 PM IST

ಮದುವೆ (Wedding) ಎಂಬುದು ಇಬ್ಬರು ತಮ್ಮ ಜೀವನದುದ್ದಕ್ಕೂ ಒಟ್ಟಿಗೆ ವಾಸಿಸಲು ಬದ್ಧರಾಗಿರುವ ದಿನ. ಈ ದಿನದಂದು, ಪ್ರತಿಯೊಬ್ಬರೂ ಮದುವೆ ದಿನ ಚೆನ್ನಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಮದುವೆಯ ಉಡುಪನ್ನು ಆಯ್ಕೆ ಮಾಡುವಾಗ, ಬ್ರೈಡಲ್ ಆಭರಣ ಶಾಪಿಂಗ್ (Wedding Jewelry Shopping) ಮಾಡುವುದು ವಿಶೇಷವಾಗಿದೆ. 

ಮದುವೆಯಲ್ಲಿ ಧರಿಸುವ ಆಭರಣ ವಧುವಿನ ಅಕ್ಸೆಸರಿಗಳನ್ನು ಕ್ಲಾಸ್ಟಿಮಾಡುತ್ತದೆ ಮತ್ತು ವಧುವನ್ನು (Bridal) ಇನ್ನಷ್ಟು ಸುಂದರಗೊಳಿಸುತ್ತದೆ. ಆದ್ದರಿಂದ, ಮದುವೆಯ ಆಭರಣಗಳಿಗಾಗಿ ಶಾಪಿಂಗ್ ಮಾಡುವಾಗ ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡುವುದು ಮುಖ್ಯ. ಮದುವೆಗೆ ಸರಿಯಾದ ಆಭರಣಗಳನ್ನು ಆಯ್ಕೆ ಮಾಡಲು ಇಲ್ಲಿದೆ ನಿಮಗಾಗಿ ಸಲಹೆಗಳು.  

ಕೆಲವೊಮ್ಮೆ ವೆಡ್ಡಿಂಗ್ ಶಾಪಿಂಗ್'ನಲ್ಲಿ (wedding shopping) ನಾವು ಲೆಹೆಂಗಾ, ಸೀರೆಗಳನ್ನು ಖರೀದಿಸುವ ಸಮಸ್ಯೆ ಇರುತ್ತದೆ, ಆದರೆ ಮದುವೆಯ ಆಭರಣಗಳ (ವೆಡ್ಡಿಂಗ್ ಜ್ಯುವೆಲ್ಲರಿ ಶಾಪಿಂಗ್) ವಿಷಯಕ್ಕೆ ಬಂದಾಗ, ಯಾವ ಆಭರಣಗಳನ್ನು ಖರೀದಿಸುವುದು ಉತ್ತಮ ತಿಳಿದಿರುವುದಿಲ್ಲ. ಅಂತಹ ಗೊಂದಲದಲ್ಲಿ, ಜನರು ವೆಡ್ಡಿಂಗ್ ಡ್ರೆಸ್ ಗೆ ಹೊಂದಿಕೆಯಾಗದ ಆಭರಣಗಳನ್ನು ಸಹ ಖರೀದಿಸುತ್ತಾರೆ ಮತ್ತು ಇದು ವಧುವಿನ ಸಂಪೂರ್ಣ ಲುಕ್ ಹಾಳು ಮಾಡುತ್ತದೆ. ಸಮಸ್ಯೆಗಳನ್ನು ತಪ್ಪಿಸಲು, ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ. 

Tap to resize

ವೆಡ್ಡಿಂಗ್ ಜ್ಯುವೆಲ್ಲರಿ ಶಾಪಿಂಗ್ ಸಲಹೆಗಳು

1.ಮೊದಲು ಆಭರಣ ಖರೀದಿಸಿ (But jewellery) 
ನೀವು ಮದುವೆಯ ಶಾಪಿಂಗ್ ಪ್ರಾರಂಭಿಸಿದಾಗ ಮೊದಲು ವಧುವಿನ ಆಭರಣಗಳನ್ನು ಖರೀದಿಸಿ. ಆಭರಣಗಳನ್ನು ಖರೀದಿಸಿದ ನಂತರ ನಿಮ್ಮ ಲೆಹೆಂಗಾ, ಸೀರೆ ತೆಗೆದುಕೊಳ್ಳಿ. ಇದರಿಂದ ಸರಿಯಾದ ಬಜೆಟ್ ಗೆ ಸೀರೆಗೆ ಸರಿಯಾದ ಆಭರಣ ಆಯ್ಕೆ ಮಾಡಿ. 
 

2.ಮೊದಲು ಬಜೆಟ್ ನಿರ್ಧರಿಸಿ (decide your budjet)
ಮದುವೆಗಾಗಿ ಶಾಪಿಂಗ್ ಮಾಡುವ ಮೊದಲು ಬಜೆಟ್ ಮಾಡಿ. ಹಾಗೆ ಮಾಡುವುದರಿಂದ ನೀವು ಸರಿಯಾದ ರೀತಿಯಲ್ಲಿ ಖರ್ಚು ಮಾಡಲು ಅನುವು ಮಾಡಿಕೊಡುತ್ತದೆ. ಬಜೆಟ್ ತಯಾರಿಸುವಾಗ, ಬಜೆಟ್ ಒಳಗೆ ಶಾಪಿಂಗ್ ಮಾಡಲು ಪ್ರಯತ್ನಿಸಿ ಮತ್ತು ಅದರ ಹೊರಗೆ ಖರ್ಚು ಮಾಡಬಾರದು.

3.ಮದುವೆಯ ದಿನಾಂಕ ಅಂತಿಮಗೊಂಡ ನಂತರವೇ ಆಭರಣಗಳನ್ನು ಆಯ್ಕೆ ಮಾಡಿ
ಮದುವೆಯ ದಿನಾಂಕ ಅಂತಿಮವಾದ ನಂತರ ನೀವು ಆಭರಣಗಳಿಗಾಗಿ ಶಾಪಿಂಗ್ ಮಾಡಿದರೆ ಉತ್ತಮ. ವಾಸ್ತವವಾಗಿ ಶಾಪಿಂಗ್ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀವು ಕೆಲವು ಕಸ್ಟಮ್-ಮೇಡ್ (custom made) ಆಯ್ಕೆಗಳ ಬಗ್ಗೆ ಯೋಚಿಸುತ್ತಿದ್ದರೆ, ನೀವು ಈಗಾಗಲೇ ಖರೀದಿಸಿದ ಆಭರಣಕ್ಕೆ ಕೆಲವು ಬದಲಾವಣೆಗಳನ್ನು ಮಾಡಲು ಬಯಸಿದರೆ, ನಿಮಗೆ ಕನಿಷ್ಠ ಒಂದು ಅಥವಾ ಎರಡು ತಿಂಗಳುಇರುತ್ತದೆ.

4.ಹಳೆಯ ಆಭರಣಗಳನ್ನು ಬಳಸಿ (Use Old ornaments)
ನೀವು ನಿಮ್ಮ ತಾಯಿ ಅಥವಾ ಅಜ್ಜಿಯ ಆಭರಣಗಳನ್ನು ಹೊಂದಿದ್ದರೆ, ನೀವು ಮದುವೆಯಲ್ಲಿ ಈ ಆಭರಣಗಳನ್ನು ಬಳಸಬಹುದು. ಈ ಆಭರಣಗಳು ಹಳೆಯದಾಗಿರಬಹುದು, ಆದರೆ ಅವುಗಳ ಆಕರ್ಷಣೆ ಎಂದಿಗೂ ಕಡಿಮೆಯಾಗುವುದಿಲ್ಲ. ಇದು ನಿಮಗೆ ಅನನ್ಯ ಸ್ಪರ್ಶವನ್ನು ನೀಡಬಹುದು.

गोल्ड रेट

5.ಡಿಟ್ಯಾಚೇಬಲ್ ಆಭರಣ (detachable Jewellery)
ಬೇರ್ಪಡಿಸಬಹುದಾದ ಆಭರಣಗಳನ್ನು ತೆಗೆದುಕೊಂಡರೆ, ನೀವು ಅವುಗಳನ್ನು ನಂತರ ಬಳಸಲು ಸಾಧ್ಯವಾಗುತ್ತದೆ. ದೊಡ್ಡ ಭಾರವಾದ ನೆಕ್ಲೇಸ್ ಗಳು, ಕಿವಿಯೋಲೆಗಳು ಮತ್ತು ಬ್ರೇಸ್ ಲೆಟ್ ಗಳು ಇತ್ಯಾದಿಗಳು ಲಾಕರ್ ನಲ್ಲೆ ಉಳಿಯುತ್ತವೆ. ಆದುದರಿಂದ ಅದನ್ನು ಬಳಕೆ ಮಾಡಿ.  ಈ ಸಂದರ್ಭದಲ್ಲಿ, ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ಮದುವೆಯ ಆಭರಣಗಳಿಗಾಗಿ ಶಾಪಿಂಗ್ ಮಾಡಬೇಕು.

6.ಮುಖಕ್ಕೆ ತಕ್ಕಂತಹ ಆಭರಣಗಳು
ನೀವು ಆಭರಣಗಳನ್ನು ಖರೀದಿಸಿದಾಗಲೆಲ್ಲಾ, ನತ್ತು, ಕಿವಿಯೋಲೆಗಳು, ಮುಂದಾಲೆ ಇತ್ಯಾದಿಗಳನ್ನು ಖರೀದಿಸುವ ಮೊದಲು ಅದನ್ನು ಧರಿಸಿ ಟ್ರಯಲ್ ನೋಡಿ. ಇದು ಸುಂದರವಾಗಿ ಕಂಡರೂ ನಿಮ್ಮ ಮುಖಕ್ಕೆ ಹೊಂದದಿದ್ದರೆ, ಅದನ್ನು ತೆಗೆದುಕೊಳ್ಳಬೇಡಿ.

7. ಒಳ್ಳೆಯ ಸ್ಥಳದಲ್ಲಿ ಚಿನ್ನವನ್ನು ಶಾಪಿಂಗ್ ಮಾಡಿ
ನೀವು ಮದುವೆಯ ಶಾಪಿಂಗ್ ಗಾಗಿ ಚಿನ್ನವನ್ನು ಖರೀದಿಸುತ್ತಿದ್ದರೆ, ಅದನ್ನು ಉತ್ತಮ ಮತ್ತು ವಿಶ್ವಾಸಾರ್ಹ ಸ್ಥಳದಿಂದ ಖರೀದಿಸಿ. ಇಲ್ಲವಾದರೆ ಅವರು ಹೆಚ್ಚಿನ ಬೆಲೆಯನ್ನು ಹೇಳಿ ನಿಮ್ಮಿಂದ ಹೆಚ್ಚು ದುಡ್ಡು ಪಡೆಯುತ್ತಾರೆ. ಇದರಿಂದ ನಿಮಗೆ ನಷ್ಟ ಉಂಟಾಗುತ್ತದೆ. 

Latest Videos

click me!