Miss World 2021: ಪೋಲೆಂಡ್‌ನ Karolina Bielawska ಹೊಸ ವಿಶ್ವ ಸುಂದರಿ

First Published | Mar 18, 2022, 6:07 PM IST

2021ರ ವಿಶ್ವ ಸುಂದರಿ (Miss World 2021) ಕಿರೀಟವನ್ನು ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ Karolina Bielawska)ಪಡೆದುಕೊಂಡಿದ್ದಾರೆ. ಮತ್ತೊಂದೆಡೆ, ಭಾರತೀಯ ಮೂಲದ ಶ್ರೀಸೈನಿ (Shree Saini) ಮೊದಲ ರನ್ನರ್ ಅಪ್ ಆದರು. ಆದರೆ ಭಾರತಸ  ಮಾನಸಾ ವಾರಣಾಸಿ ಟಾಪ್-13 ತಲುಪಿದ ನಂತರ ಹೊರಹಾಕಲ್ಪಟ್ಟರು. ಮಿಸ್ ವರ್ಲ್ಡ್ 2021 ಪೋರ್ಟೊ ರಿಕೊದಲ್ಲಿ ನಡೆಯಿತು. 

ವಿಶ್ವ ಸುಂದರಿ 2021ರಂ ಅಂತಿಮ ಸ್ವರ್ಧೆ 17 ಡಿಸೆಂಬರ್ 2021 ರಂದು ನಡೆಯಬೇಕಾಗಿತ್ತು, ಆದರೆ ಕೊರೋನಾದಿಂದಾಗಿ ಇದನ್ನು 16 ಮಾರ್ಚ್ 2022 ರಂದು ಘೋಷಿಸಲಾಯಿತು. ವಿಶ್ವ ಸುಂದರಿ 2021 ವಿಜೇತರಾಗಿ  ಕರೋಲಿನಾ ಬಿಲಾವ್ಸ್ಕಾ ಅವರ ಹೆಸರನ್ನು ಘೋಷಿಸಿದಾಗ ಸಂತೋಷದಿಂದ ಅತ್ತರು. 

'ನನಗೆ ಈ ಕಿರೀಟ ಸಿಕ್ಕಿದೆ ಎಂದು ನನ್ನ ಹೆಸರನ್ನು ಕೇಳಿದಾಗ ನನಗೆ ಮೊದಲು ನಂಬಲಾಗಲಿಲ್ಲ. ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದು ಕೆರೊಲಿನಾ ಹೇಳಿದರು.

Tap to resize

ವಿಶ್ವ ಸುಂದರಿ 2021 ಕೆರೊಲಿನಾ ಬೆಲವಾಸ್ಕಾ ಪ್ರಸ್ತುತ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡುತ್ತಿದ್ದಾರೆ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಬಳಿಕ ಪಿಎಚ್‌ಡಿ ಮಾಡಲಿದ್ದಾರೆ. ಮಾಡೆಲ್‌ ಆಗಿರುವ ಕರೋಲಿನಾ ಬಿಲಾವ್ಸ್ಕಾಇದರೊಂದಿಗೆ ಪ್ರೇರಕ ಭಾಷಣಕಾರರಾಗಬೇಕೆಂಬ ಕನಸಿದೆ. 
 

ಅಮೆರಿಕ ದೇಶದ ಮೊದಲ ರನ್ನರ್ ಅಪ್ ಶ್ರೀಸೈನಿ ಭಾರತೀಯ ಮೂಲದವರು. ಇವರು ಪಂಜಾಬ್‌ನ ಲುಧಿಯಾನದಿಂದ ಬಂದವರು. ಶ್ರೀಸೈನಿ ಚಿಕ್ಕವರಿದ್ದಾಗ ಅವರ ಕುಟುಂಬ ಅಮೆರಿಕಕ್ಕೆ ಸ್ಥಳಾಂತರಗೊಂಡಿತು ಮತ್ತು ಅವರು ಈಗ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. 

ವ್ಯಾಸಂಗದ ಜೊತೆಗೆ ಸೌಂದರ್ಯ ಸ್ಪರ್ಧೆಗಳಲ್ಲಿ ಶ್ರೀಸೈನಿ ಭಾಗವಹಿಸತೊಡಗಿದರು ಮತ್ತು ಇವರು ಡ್ಯಾನ್ಸರ್ ಕೂಡ ಹೌದು. ಬಾಲ್ಯದಲ್ಲಿ ಶ್ರೀಸೈನಿ ಅವರ ಹೃದಯ ಬಡಿತ ಕಡಿಮೆಯಾಗಿತ್ತು, ಅದಕ್ಕಾಗಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 12ನೇ ವಯಸ್ಸಿನಲ್ಲಿ ಅವರಿಗೆ ಪೇಸ್ ಮೇಕರ್ ಅಳವಡಿಸಲಾಯಿತು.

Image: Manasa VaranasiInstagram

ಭಾರತದ ಮಾನಸಾ ವಾರಣಾಸಿ ಟಾಪ್-13 ತಲುಪಿದ ನಂತರ ಹೊರಹಾಕಲ್ಪಟ್ಟರು. ಮಾನಸಾ ವಾರಣಾಸಿ ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದನ್ನು ಹೊರತುಪಡಿಸಿ, ಕಸೂತಿ ಮಾಡಲು ಇಷ್ಟಪಡುತ್ತಾರೆ. ವಾಸ್ತವವಾಗಿ, ಲಾಕ್‌ಡೌನ್ ಸಮಯದಲ್ಲಿ, ಮಾನಸಾ ತನ್ನ ಹಳೆಯ ಕಸೂತಿ ಹವ್ಯಾಸವನ್ನು ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವು ನಿರತರಾಗಿಸಿಕೊಂಡಿದ್ದರು.

Image: Manasa VaranasiInstagram

23 ವರ್ಷದ ಹೈದರಾಬಾದ್ ಮೂಲದ ಮಾನಸಾ ವಾರಣಾಸಿ, ಎಂಜಿನಿಯರ್ ಮತ್ತು ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕ. ಮಾನಸಾ ತನ್ನ ಶಾಲಾ ಶಿಕ್ಷಣವನ್ನು ಗ್ಲೋಬಲ್ ಇಂಡಿಯನ್ ಸ್ಕೂಲ್‌ನಲ್ಲಿ ಮಾಡಿದರು. ವಾಸವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.ಮಾನಸಾಗೆ ಪುಸ್ತಕಗಳನ್ನು ಓದುವುದು, ಯೋಗ ಮಾಡುವುದು ತುಂಬಾ ಇಷ್ಟ. 

Image: Manasa VaranasiInstagram

ಪ್ರಿಯಾಂಕಾ ಚೋಪ್ರಾ ನನಗೆ ಬ್ಯೂಟಿ ಕ್ವೀನ್ಸ್‌ನಲ್ಲಿ ಹೆಚ್ಚು ಸ್ಫೂರ್ತಿ ನೀಡುತ್ತಾರೆ ಏಕೆಂದರೆ ಅವರು ಚಲನಚಿತ್ರ, ಸಂಗೀತ, ಸಮಾಜಸೇವೆ, ಉದ್ಯಮಶೀಲತೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಮಾನಸಾ ಹೇಳಿದ್ದರು.

Latest Videos

click me!