Published : Mar 18, 2022, 02:55 PM ISTUpdated : Mar 18, 2022, 02:57 PM IST
2021ರ ವಿಶ್ವ ಸುಂದರಿ (Miss World 2021) ಸ್ವರ್ಧೆಯ ಟಾಪ್ 13 ಪಟ್ಟಿಯಲ್ಲಿ ಭಾರತದ ಮಾನಸಾ ವಾರಣಾಸಿ (Manasa Varanasi) ಸ್ಥಾನ ಪಡೆದಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ 23 ವರ್ಷದ ಹೈದರಾಬಾದ್ ಮೂಲದ ಮಾನಸಾ ವಾರಣಾಸಿ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಅವರ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ.
ಮಿಸ್ ಇಂಡಿಯಾ ವರ್ಲ್ಡ್ 2020, ಮಾನಸಾ ವಾರಣಾಸಿ, ಮಿಸ್ ವರ್ಲ್ಡ್ 2021ರಲ್ಲಿ ತನ್ನ ತಾಯ್ನಾಡು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯ ಅಂತಿಮ ಸಮಾರಂಭವು ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಕೋಕಾ-ಕೋಲಾ ಮ್ಯೂಸಿಕ್ ಹಾಲ್‌ನಲ್ಲಿ ನಡೆಯಿತು.
26
Image: Manasa Varanasi/Instagram
ಮತ್ತು ಭಾರತದ ಮಾನಸಾ ವಾರಣಾಸಿ ಟಾಪ್ 13 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಮಾನಸಾ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು
36
Image: Manasa Varanasi/Instagram
ಮಾನಸಾ ವಾರಣಾಸಿ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿದ್ದಾರೆ. ಅ ಮಾನಸಾ ವಾರಣಾಸಿ ಭರತನಾಟ್ಯ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ.
46
Image: Manasa Varanasi/Instagram
ಮಾನಸಾ ವಾರಣಾಸಿ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಅವರು ಒಂದು ಗೋಲ್ಡನ್ ರಿಟ್ರೈವರ್ ನಾಯಿಯನ್ನು ಸಾಕುತ್ತಿದ್ದು, ಅದಕ್ಕೆ ಆಲಿ ಎಂದು ಹೆಸರಿಸಿದ್ದಾರೆ. ಆಗಾಗ್ಗೆ ಅದರ ಜೊತೆ ಇರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.
56
ಪ್ರಿಯಾಂಕಾ ಚೋಪ್ರಾ ನನಗೆ ಬ್ಯೂಟಿ ಕ್ವೀನ್ಸ್‌ನಲ್ಲಿ ಹೆಚ್ಚು ಸ್ಫೂರ್ತಿ ನೀಡುತ್ತಾರೆ ಏಕೆಂದರೆ ಅವರು ಚಲನಚಿತ್ರ, ಸಂಗೀತ, ಸಮಾಜಸೇವೆ, ಉದ್ಯಮಶೀಲತೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಮಾನಸಾ ಹೇಳಿದ್ದರು.
66
ತನ್ನ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದನ್ನು ಹೊರತುಪಡಿಸಿ, ಮಾನಸಾ ವಾರಣಾಸಿ ಕಸೂತಿ ಮಾಡಲು ಇಷ್ಟಪಡುತ್ತಾರೆ. ವಾಸ್ತವವಾಗಿ, ಲಾಕ್‌ಡೌನ್ ಸಮಯದಲ್ಲಿ, ಮಾನಸಾ ತನ್ನ ಹಳೆಯ ಹವ್ಯಾಸವಾದ ಎಂಬ್ರಾಯಿಡರಿ ಮಾಡುವ ಮೂಲಕ ತನ್ನನ್ನು ತಾನು ಬ್ಯುಸಿಯಾಗಿ ಇಟ್ಟುಕೊಂ.