ಸಶಾ ಲುಸ್ ( Sasha Luss) ರಷ್ಯಾದ ಟಾಪ್ ಸೂಪರ್ ಮಾಡೆಲ್. ಅವರು ಮಾಸ್ಕೋದಲ್ಲಿ ಜನಿಸಿದರು. ಸಶಾ ಬ್ಯಾಲೆ ನರ್ತಕಿಯಾಗಲು ಬಯಸಿದ್ದರು. ಆದರೆ ಪಾದದ ಗಾಯದಿಂದಾಗಿ ಅವರು ತಮ್ಮ ಕನಸನ್ನು ತ್ಯಜಿಸಬೇಕಾಯಿತು. ಸಶಾ 13 ವರ್ಷದವಳಿದ್ದಾಗ, ತಾಯಿ ಅವರನ್ನು ಮಾಡೆಲಿಂಗ್ ಏಜೆನ್ಸಿಗೆ ಕರೆದೊಯ್ದರು. ಅಲ್ಲಿ ಅವರು ಕ್ಯಾಟ್‌ವಾಕ್ ನಡೆಯಲು ಕಲಿಸಿದರು. ಹಲವು ವರ್ಷಗಳ ನಂತರ, ಮಾಸ್ಕೋ ಫ್ಯಾಶನ್ ವೀಕ್‌ನಲ್ಲಿ ತನ್ನ ಮೊದಲ ಕ್ಯಾಟ್‌ವಾಕ್ ಮಾಡುವ ಮೂಲಕ ಎಲ್ಲರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಿಕೊಂಡರು.