Met Gala 2026: 6 ಅಡಿ ಉದ್ದದ ಕೇಪ್, 85 ದಿನದ ಕಠಿಣ ಶ್ರಮ.. ರಾಜಾ ರವಿವರ್ಮನ ಕಲೆಗೆ ಕರಣ್ ಜೋಹರ್ ಗೌರವ

Published : May 06, 2026, 03:18 PM IST

Karan Johar Met Gala 2026: ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಈ ವಿಶೇಷ ಉಡುಪು ಭಾರತದ ಶ್ರೇಷ್ಠ ಕಲಾವಿದ ರಾಜಾ ರವಿವರ್ಮ ಅವರ ಕಲಾಕೃತಿಗಳಿಂದ ಪ್ರೇರಿತವಾಗಿತ್ತು. ಸುಮಾರು 80ಕ್ಕೂ ಹೆಚ್ಚು ಕುಶಲಕರ್ಮಿಗಳು ಸೇರಿ 85 ದಿನಗಳ ಕಾಲ ಸಿದ್ಧಪಡಿಸಿದ ಇದು 'ಹ್ಯಾಂಡ್-ಪೇಂಟೆಡ್' ವಸ್ತ್ರ. 

PREV
16
ಚೊಚ್ಚಲ ಪ್ರವೇಶ

ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ನ್ಯೂಯಾರ್ಕ್‌ನಲ್ಲಿ ನಡೆದ ತಮ್ಮ ಚೊಚ್ಚಲ ಮೆಟ್ ಗಾಲಾ ಪ್ರವೇಶದ ವೇಳೆ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ರಾಜಾ ರವಿವರ್ಮನ ಕೃತಿಗಳಿಂದ ಪ್ರೇರಿತವಾದ ಉಡುಪನ್ನು ಧರಿಸಿದ್ದರು. ಕರಣ್ ಜೋಹರ್ ಅವರು ಮೊದಲ ಬಾರಿಗೆ ಮೆಟ್ ಗಾಲಾದಂತಹ ಜಾಗತಿಕ ವೇದಿಕೆಯಲ್ಲಿ ಕಾಣಿಸಿಕೊಂಡಾಗ, ಸಾಮಾನ್ಯ ಫ್ಯಾಶನ್ ಉಡುಪುಗಳ ಬದಲಿಗೆ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರವನ್ನು ಆರಿಸಿಕೊಂಡರು.

ಈ ವರ್ಷದ ಕಾರ್ಯಕ್ರಮದ ಥೀಮ್ 'ಕಾಸ್ಟ್ಯೂಮ್ ಆರ್ಟ್' ಮತ್ತು ಡ್ರೆಸ್ ಕೋಡ್ 'ಫ್ಯಾಶನ್ ಈಸ್ ಆರ್ಟ್' ಆಗಿದ್ದು, ಇದಕ್ಕೆ ಅನುಗುಣವಾಗಿ ಅವರು ಮನೀಶ್ ಮಲ್ಹೋತ್ರಾ ಅವರ ಬೆಸ್ಪೋಕ್ ಉಡುಪನ್ನು ಧರಿಸಿದ್ದರು.

26
'ಫ್ರೇಮ್ಡ್ ಇನ್ ಎಟರ್ನಿಟಿ' (Framed in Eternity)

ಈ ಉಡುಪಿಗೆ 'ಫ್ರೇಮ್ಡ್ ಇನ್ ಎಟರ್ನಿಟಿ' ಎಂದು ಹೆಸರಿಸಲಾಗಿದ್ದು, ಇದು ಆರು ಅಡಿ ಉದ್ದದ ಕೈಯಿಂದ ಚಿತ್ರಿಸಿದ ಕೇಪ್ (Cape) ಮತ್ತು ಪವರ್-ಶೋಲ್ಡರ್ ವಿಂಟೇಜ್ ಜಾಕೆಟ್ ಅನ್ನು ಒಳಗೊಂಡಿತ್ತು. ಈ ಕೇಪ್ ಅನ್ನು 80ಕ್ಕೂ ಹೆಚ್ಚು ಕುಶಲಕರ್ಮಿಗಳ ತಂಡ ಸುಮಾರು 85 ದಿನಗಳ ಕಾಲ ಶ್ರಮಪಟ್ಟು ತಯಾರಿಸಿದೆ. ಈ ಲುಕ್ ಪರ್ಫೆಕ್ಟ್ ಆಗಿ ಬರಲು ಅವರು ತಮ್ಮದೇ ಆದ 'ತ್ಯಾನಿ' (Tyaani) ಜ್ಯುವೆಲ್ಲರಿ ಲೇಬಲ್‌ನ ಮಲ್ಟಿ-ಜೆಮ್‌ಸ್ಟೋನ್ ನೆಕ್ಲೇಸ್ ಮತ್ತು ಉಂಗುರಗಳನ್ನು ಧರಿಸಿದ್ದರು.

36
ಈ ಉಡುಪನ್ನ ವಿನ್ಯಾಸ ಮಾಡಿದವರು ಯಾರು?

ಈ ಉಡುಪನ್ನು ವಿನ್ಯಾಸಕಿ ಏಕಾ ಲಖಾನಿ ಮತ್ತು ಮನೀಶ್ ಮಲ್ಹೋತ್ರಾ ಅವರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. "ಮನೀಶ್ ಜೊತೆ ಕೆಲಸ ಮಾಡುವಾಗ ಯಾವುದನ್ನೂ ವಿವರಿಸುವ ಅಗತ್ಯವಿರುವುದಿಲ್ಲ. ನಾವು ದೀರ್ಘಕಾಲದಿಂದ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ನಮ್ಮ ನಡುವೆ ಆ ತಿಳುವಳಿಕೆ ಇದೆ" ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

46
ರಾಜಾ ರವಿವರ್ಮನ ಪ್ರೇರಣೆ

ರಾಜಾ ರವಿವರ್ಮ ಅವರ ಕಲೆಗಳ ಮೇಲಿನ ದೀರ್ಘಕಾಲದ ಅಭಿಮಾನವೇ ಈ ಉಡುಪಿನ ಆಯ್ಕೆಗೆ ಸ್ಫೂರ್ತಿ ಎಂದು ಕರಣ್ ಜೋಹರ್ ತಿಳಿಸಿದ್ದಾರೆ. ಈ ಆಯ್ಕೆಯು ತಮಗೆ ಅತ್ಯಂತ ಆಪ್ತವಾಗಿರಬೇಕೆಂದು ಅವರು ಬಯಸಿದ್ದರು. ಏಕೆಂದರೆ ಯಾವುದೋ ಒಂದು ವಿಷಯ ನಮಗೆ ವೈಯಕ್ತಿಕವಾಗಿ ಹತ್ತಿರವಾದಾಗ ಅದು ಸಹಜವಾಗಿಯೇ ನಮ್ಮ ಮೂಲವಾದ ಭಾರತೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂಬುದು ಅವರ ನಂಬಿಕೆ. ರವಿವರ್ಮ ಅವರು ಚಿತ್ರಗಳಲ್ಲಿ ಭಾವನೆಗಳನ್ನು ಹೇಗೆ ಸೆರೆಹಿಡಿಯುತ್ತಿದ್ದರೋ, ತಾವೂ ಸಿನಿಮಾಗಳ ಮೂಲಕ ಅದನ್ನೇ ಮಾಡಲು ಪ್ರಯತ್ನಿಸುತ್ತಿರುವುದರಿಂದ ಈ ಉಡುಪು ತಮಗೆ ಹೆಚ್ಚು ಅರ್ಥಪೂರ್ಣವೆನಿಸಿದೆ ಎಂದು ಅವರು ಹೇಳಿದ್ದಾರೆ.

56
ಈ ಉಡುಪಿನಲ್ಲಿ ರವಿವರ್ಮನ ಪ್ರಸಿದ್ಧ ಕೃತಿಗಳಾದ

ಲೇಡಿ ವಿತ್ ದಿ ಪೀಚ್ (Lady with the Peach)
ಹಂಸ ದಮಯಂತಿ (Hamsa Damayanti)
ಕಾದಂಬರಿ (Kadambari)
ಅರ್ಜುನ ಮತ್ತು ಸುಭದ್ರಾ (Arjuna and Subhadra)
ದೇರ್ ಕಮ್ಸ್ ಪಾಪಾ (There Comes Papa) ಇವುಗಳ ದೃಶ್ಯ ಉಲ್ಲೇಖಗಳನ್ನು ಬಳಸಲಾಗಿದೆ.

66
ಮೊದಲ ಮೆಟ್ ಗಾಲಾ ಅನುಭವದ ಬಗ್ಗೆ ಮಾತು

ತಮ್ಮ ಮೊದಲ ಮೆಟ್ ಗಾಲಾ ಅನುಭವದ ಬಗ್ಗೆ ಮಾತನಾಡಿದ ಅವರು, "ನಾನು ಇಲ್ಲಿ ಭಾರತವನ್ನು ವಿವರಿಸಲು ಬರಲಿಲ್ಲ, ಬದಲಾಗಿ ನಾನು ನಾನಾಗಿಯೇ ಕಾಣಿಸಿಕೊಳ್ಳಲು ಬಯಸಿದ್ದೆ. ನನ್ನ ಪೂರ್ವಜರು ಅಥವಾ ದೇಶ ನೀಡಿದ ಕಲೆಯ ಉಡುಪನ್ನು ಧರಿಸುವ ಮೂಲಕ ನಾನು ನನ್ನ ಸಂಸ್ಕೃತಿಗೆ ಗೌರವ ಸಲ್ಲಿಸುತ್ತಿದ್ದೇನೆ" ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories