Met Gala 2026: ಸ್ಟೇನ್‌ಲೆಸ್ ಸ್ಟೀಲ್ ಉಡುಗೆಯಲ್ಲಿ ಬಂದ ಅನನ್ಯಾ ಬಿರ್ಲಾ ಎಂಟ್ರಿ ನೋಡಿ ಬೆರಗಾದ ಫ್ಯಾಷನ್ ಜಗತ್ತು

Published : May 05, 2026, 11:48 AM ISTUpdated : May 05, 2026, 11:57 AM IST

Ananya Birla Met Gala 2026: ಸಾಮಾನ್ಯವಾಗಿ ರೆಡ್ ಕಾರ್ಪೆಟ್ ಎಂದರೆ ರೇಷ್ಮೆ, ವೆಲ್ವೆಟ್ ಬಟ್ಟೆಗಳದ್ದೇ ಕಾರುಬಾರು. ಆದರೆ ಮೆಟ್ ಗಾಲಾ 2026ರಲ್ಲಿ ಅನನ್ಯಾ ಬಿರ್ಲಾ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಸಿದ್ಧವಾದ ಉಡುಗೆಯನ್ನು ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

PREV
16
ಫ್ಯಾಷನ್ ಎಂದರೆ ಕೇವಲ ಸುಂದರವಾಗಿ ಕಾಣುವುದಲ್ಲ

ವಿಶ್ವದ ಅತಿದೊಡ್ಡ ಫ್ಯಾಷನ್ ಹಬ್ಬವೆಂದೇ ಕರೆಯಲ್ಪಡುವ 'ಮೆಟ್ ಗಾಲಾ 2026'ರಲ್ಲಿ ಭಾರತೀಯ ಗಾಯಕಿ, ಉದ್ಯಮಿ ಹಾಗೂ ಆರ್‌ಸಿಬಿ ಫ್ರಾಂಚೈಸಿಯ ನೂತನ ಸಾರಥಿ ಆರ್ಯಮನ್ ಬಿರ್ಲಾ ಸಹೋದರಿ ಅನನ್ಯಾ ಬಿರ್ಲಾ ತಮ್ಮ ಚೊಚ್ಚಲ ಪ್ರವೇಶದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಫ್ಯಾಷನ್ ಎಂದರೆ ಕೇವಲ ಸುಂದರವಾಗಿ ಕಾಣುವುದಷ್ಟೇ ಅಲ್ಲ, ಅದೊಂದು ಪ್ರಬಲವಾದ ಅಭಿವ್ಯಕ್ತಿ ಎಂಬುದನ್ನು ಅವರ ಈ ಲುಕ್ ಸಾಬೀತುಪಡಿಸಿದೆ.

26
ವಿನ್ಯಾಸದ ಹಿಂದಿರುವ ಸೃಜನಶೀಲ ಶಕ್ತಿ ಇವ್ರೆ ನೋಡಿ

ಅಂದಹಾಗೆ ಅನನ್ಯಾ ಅವರ ಈ ವಿಶಿಷ್ಟ ರೂಪವು ಇಬ್ಬರು ದಿಗ್ಗಜರ ಸೃಜನಶೀಲತೆಯ ಫಲ.
ರಾಬರ್ಟ್ ವುನ್ (Robert Wun): ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಫ್ಯಾಷನ್ ವಿನ್ಯಾಸಕ. ಬಟ್ಟೆಯಲ್ಲಿ ಕಲಾತ್ಮಕ ಮೆರುಗು ಮತ್ತು ಗಾಂಭೀರ್ಯವನ್ನು ತರುವಲ್ಲಿ ಇವರು ಸಿದ್ಧಹಸ್ತರು.
ಸುಬೋಧ್ ಗುಪ್ತಾ (Subodh Gupta): ಭಾರತದ ಹೆಸರಾಂತ ಇಂದಿನ ಯುಗದ ಸೃಜನಶೀಲ ಕಲಾವಿದ. ದೈನಂದಿನ ಬಳಕೆಯ ವಸ್ತುಗಳನ್ನು (ಉದಾಹರಣೆಗೆ ಪಾತ್ರೆಗಳು) ಕಲಾಕೃತಿಗಳಾಗಿ ಪರಿವರ್ತಿಸುವಲ್ಲಿ ಇವರು ಪ್ರಸಿದ್ಧರು.
ಇವರ ಜೊತೆಗೆ ಬಾಲಿವುಡ್‌ನ ಖ್ಯಾತ ಸ್ಟೈಲಿಸ್ಟ್ ರಿಯಾ ಕಪೂರ್ ಅವರ ದೃಷ್ಠಿಕೋನ ಈ ಲುಕ್‌ಗೆ ಮತ್ತಷ್ಟು ಮೆರುಗು ನೀಡಿದೆ.

36
ಉಡುಗೆಯ ವಿಶೇಷತೆ ಏನು?

ಅನನ್ಯಾ ಧರಿಸಿದ್ದ ಉಡುಪು ಕೇವಲ ಬಟ್ಟೆಯಾಗಿರದೆ, ಅದೊಂದು 'ಜೀವಂತ ಕಲಾಕೃತಿ' (Wearable Sculpture)ಯಂತೆ ಇತ್ತು. ಸುಬೋಧ್ ಗುಪ್ತಾ ಅವರು ಸ್ಟೇನ್‌ಲೆಸ್ ಸ್ಟೀಲ್ ಅನ್ನು ಈ ಉಡುಪಿನಲ್ಲಿ ಬಳಸಿದ್ದರು. ಇದು ಅನನ್ಯಾ ಅವರಿಗೆ ಒಂದು 'ಕ್ರೋಮ್ ಫಿನಿಶ್' ನೀಡಿ, ಅವರು ಆಧುನಿಕ ಕಾಲದ ದೇವತೆಯಂತೆ ಅಥವಾ ಯುದ್ಧಕ್ಕೆ ಸಜ್ಜಾದ ಶಕ್ತಿಯುತ ಸ್ತ್ರೀಯಂತೆ ಕಾಣುವಂತೆ ಮಾಡಿತು.

46
ರಚನೆ ಮತ್ತು ವಿನ್ಯಾಸ

ಇಲ್ಲಿ ಉಡುಪಿನ ಭುಜದ ಭಾಗಗಳು ಬಲಿಷ್ಠವಾಗಿದ್ದು, ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಇದು ನೋಡಲು ಅತ್ಯಂತ ಕಲಾತ್ಮಕವಾಗಿದ್ದು, ರೆಡ್ ಕಾರ್ಪೆಟ್ ಮೇಲೆ ಒಂದು ಪ್ರಭಾವಶಾಲಿ ವ್ಯಕ್ತಿತ್ವವನ್ನು ಬಿಂಬಿಸುವಂತಿತ್ತು.

56
ನೋಟದ ಹಿಂದಿನ ಅರ್ಥ

ಈ ಬಾರಿಯ ಅನನ್ಯಾ ಅವರ ಫ್ಯಾಷನ್ ಕೇವಲ ಪ್ರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಅದು 'ರಕ್ಷಣೆ' (Protection) ಮತ್ತು 'ಗುರುತಿನ' (Identity) ಬಗ್ಗೆ ಮಾತನಾಡುತ್ತಿತ್ತು. ಲೋಹದ ರಕ್ಷಾಕವಚದಂತಹ ಈ ವಿನ್ಯಾಸವು ಒಬ್ಬ ವ್ಯಕ್ತಿ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳುತ್ತಾನೆ ಮತ್ತು ಸಮಾಜದ ಮುಂದೆ ತನ್ನ ಶಕ್ತಿಯನ್ನು ಹೇಗೆ ಪ್ರದರ್ಶಿಸುತ್ತಾನೆ ಎಂಬುದನ್ನು ಬಿಂಬಿಸುವಂತಿತ್ತು.ಬೆಳಕು ಬಿದ್ದಾಗ ಪ್ರತಿಫಲಿಸುವ ಲೋಹದ ಹೊಳಪು ಅವರ ಆತ್ಮವಿಶ್ವಾಸ ಮತ್ತು ದೃಢತೆಯನ್ನು ಎತ್ತಿ ತೋರಿಸುತ್ತಿತ್ತು.

66
ವಿಭಿನ್ನ ಹಾದಿಯನ್ನು ಆರಿಸಿಕೊಂಡ ಅನನ್ಯಾ

ಮೆಟ್ ಗಾಲಾದಂತಹ ಬೃಹತ್ ವೇದಿಕೆಯಲ್ಲಿ ಸಾಮಾನ್ಯವಾಗಿ ಜನರು ಸುರಕ್ಷಿತವಾದ ಮತ್ತು ಸುಂದರವಾದ ಉಡುಗೆಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ಅನನ್ಯಾ ಬಿರ್ಲಾ ಅವರು ಕಲೆ ಮತ್ತು ತತ್ವ ಸಾರುವ ವಿಭಿನ್ನ ಹಾದಿಯನ್ನು ಆರಿಸಿಕೊಂಡರು. ರಿಯಾ ಕಪೂರ್ ಅವರ ಸಾಹಸಮಯ ಸ್ಟೈಲಿಂಗ್ ಹಾಗೂ ರಾಬರ್ಟ್ ವುನ್-ಸುಬೋಧ್ ಗುಪ್ತಾ ಅವರ ಕಲಾತ್ಮಕ ಕೈಚಳಕದಿಂದಾಗಿ, ಅನನ್ಯಾ ಅವರ ಈ ಚೊಚ್ಚಲ ಪ್ರವೇಶವು ಮೆಟ್ ಗಾಲಾ ಇತಿಹಾಸದಲ್ಲಿ ಒಂದು ಸ್ಮರಣೀಯ ಕ್ಷಣವಾಗಿ ಉಳಿಯಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories