ಸೀರೆ ಮೇಲೆ ಮಹಿಳೆಯರಿಗೆ ಮೋಹ ಜಾಸ್ತಿ. ಅದ್ರಲ್ಲೂ ಸಿಲ್ಕ್ ಸಾರಿ ಅಂದ್ರೆ ಹೆಚ್ಚಿನ ಆಸಕ್ತಿ ತೋರಿಸ್ತಾರೆ. ಮಾರ್ಕೆಟ್ ನಲ್ಲಿ ನಕಲಿ ಸಿಲ್ಕ್ ಸಾರಿಗಳ ಹಾವಳಿ ಹೆಚ್ಚಾಗಿದೆ. ನಿಜವಾದ ಸಿಲ್ಕ್ ಸಾರಿ ಯಾವ್ದು ಅಂತ ನೀವು ಸುಲಭವಾಗಿ ಪತ್ತೆ ಮಾಡ್ಬಹುದು.
ಸಿಲ್ಕ್ ಸಾರಿ ಮಹಿಳೆಯರ ಸೌಂದರ್ಯ ಡಬಲ್ ಮಾಡೋದಲ್ದೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತೆ. ಮದುವೆಯಲ್ಲಿ ಮಾತ್ರವಲ್ಲ ವಿಶೇಷ ಸಂದರ್ಭಗಳಲ್ಲಿ, ಹಬ್ಬ – ಪೂಜೆಯಲ್ಲಿ ಮಹಿಳೆಯರು ಹೆಚ್ಚಾಗಿ ಸಿಲ್ಕ್ ಸಾರಿ ಆಯ್ಕೆ ಮಾಡ್ಕೊಳ್ತಾರೆ. ಮಹಿಳೆಯರ ವಾರ್ಡ್ರೋಬ್ ನಲ್ಲಿ ಸೀರೆ ರಾಶಿ ಇರುತ್ತೆ. ದುಬಾರಿ ಹಣಕೊಟ್ಟೂ ಅನೇಕ ಬಾರಿ ರಾಂಗ್ ರೇಷ್ಮೆ ಸೀರೆ ಖರೀದಿ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆ ಸೀರೆ ಮೀರಿಸುವಂತ ನಕಲಿ ಸೀರೆ ಸಿದ್ಧವಾಗ್ತಿದೆ.
27
ದಾರ ಸುಟ್ಟು ನೋಡಿ
ಸೀರೆಯ ಅಂಚಿನಿಂದ ಸಣ್ಣ ದಾರವನ್ನು ಹೊರತೆಗೆದು ಅದನ್ನು ಸುಡಬೇಕು. ಅದು ಸುಟ್ಟ ಕೂದಲಿನಂತೆ ವಾಸನೆ ಬಂದ್ರೆ ಮತ್ತು ಕಪ್ಪು, ಪುಡಿಪುಡಿಯಾದ ಬೂದಿ ಕಾಣಿಸಿದ್ರೆ ನೀವು ನಿಜವಾದ ರೇಷ್ಮೆ ಸೀರೆ ಖರೀದಿ ಮಾಡಿದ್ದೀರಿ ಎಂದರ್ಥ. ಅದೇ ನೀವು ಖರೀದಿ ಮಾಡಿದ ಸೀರೆ ನಕಲಿಯಾಗಿದ್ರೆ ಅದು ಕರಗಿ, ಪ್ಲಾಸ್ಟಿಕ್ ನಂತೆ ಉಂಡೆಯಾಗುತ್ತೆ.
37
ಉಜ್ಜಿ ನೋಡಿ
ರೇಷ್ಮೆ ಸೀರೆಯನ್ನು ಉಜ್ಜಿ ಪರೀಕ್ಷೆ ಮಾಡ್ಬಹುದು. ಅಂಗೈ ಸಹಾಯದಿಂದ ನೀವು ಸೀರೆಯನ್ನು ಉಜ್ಜಿದಾಗ ಅದು ಬಿಸಿಯಾದ್ರೆ ಅಸಲಿ ಸಿಲ್ಕ್ ಎಂದರ್ಥ. ಅದೇ ಅದು ತಂಪಾಗಿದ್ದರೆ ನಕಲಿ ಎಂದರ್ಥ. ರೇಷ್ಮೆ ನೈಸರ್ಗಿಕ ನಾರಾಗಿರೋದ್ರಿಂದ ಅದು ಬಿಸಿಯಾಗುತ್ತದೆ.
ಚೈನೀಸ್ ರೇಷ್ಮೆ ಅಥವಾ ಕ್ರೇಪ್ನಂತಹ ಹಗುರವಾದ ಸೀರೆಗಳಿಗೆ ಇದು ಉತ್ತಮವಾಗಿದೆ. ಸೀರೆಯ ಒಂದು ಭಾಗವನ್ನು ನಿಮ್ಮ ಉಂಗುರದೊಳಗೆ ಹಾಕಿ. ನಿಜವಾದ ರೇಷ್ಮೆ ತುಂಬಾ ಮೃದು ಮತ್ತು ಹೊಂದಿಕೊಳ್ಳುವಂತಿದ್ದು ಅದು ಸುಲಭವಾಗಿ ಉಂಗುರದ ಮೂಲಕ ಹಾದುಹೋಗುತ್ತದೆ. ನಕಲಿ ರೇಷ್ಮೆ ಹೆಚ್ಚಾಗಿ ಸಿಲುಕಿಕೊಳ್ಳುತ್ತದೆ.
57
ಹೊಳಪು ಮತ್ತು ಬಣ್ಣ
ನಕಲಿ ರೇಷ್ಮೆ ಸಮತಟ್ಟಾದ, ಬಿಳಿ ಬಣ್ಣದ ಹೊಳಪನ್ನು ಹೊಂದಿರುತ್ತದೆ. ಅದೇ ರೇಷ್ಮೆ ಸೀರೆ ಹಾಗಲ್ಲ. ಅದನ್ನು ನೀವು ಬೇರೆ ಬೇರೆ ಕೋನದಿಂದ ನೋಡಿದಾಗ ಅದರ ಬಣ್ಣ ಭಿನ್ನವಾಗಿ ಕಾಣಿಸುತ್ತದೆ. ನೈಸರ್ಗಿಕ ಹೊಳಪು ಶುದ್ಧ ರೇಷ್ಮೆಯ ಪ್ರಾಥಮಿಕ ವಿಶಿಷ್ಟ ಲಕ್ಷಣವಾಗಿದೆ.
67
ಬೆಲೆ ಮತ್ತು ವಿನ್ಯಾಸ
ರೇಷ್ಮೆ ಹುಳುಗಳಿಂದ ನೂಲು ಉತ್ಪಾದಿಸುವ ಪ್ರಕ್ರಿಯೆಯು ದುಬಾರಿ ಮತ್ತು ಶ್ರಮದ ಕೆಲ್ಸ. ಯಾರಾದರೂ ನಿಮಗೆ ಶುದ್ಧ ಬನಾರಸಿ ಅಥವಾ ಕಾಂಜೀವರಂ ರೇಷ್ಮೆಯನ್ನು ಕೇವಲ 1000-1500 ರೂಪಾಯಿಗಳಿಗೆ ನೀಡ್ತೇನೆ ಅಂದ್ರೆ ಅದು ಬಹುಶಃ ನಕಲಿಯಾಗಿರುತ್ತೆ. ನಿಜವಾದ ರೇಷ್ಮೆ ತುಂಬಾನಯ ಮತ್ತು ಮೃದುವಾಗಿದ್ದು, ಮುಷ್ಟಿಯಲ್ಲಿ ಹಿಂಡಿದಾಗ, ಅದು ಹತ್ತಿಯಂತೆ ಸುಕ್ಕುಗಟ್ಟುವುದಿಲ್ಲ.
77
ವಾಟರ್ ಡ್ರಾಪ್ ಪರೀಕ್ಷೆ
ರೇಷ್ಮೆಯ ಒಂದು ಮೂಲೆಯಲ್ಲಿ ನೀರಿನ ಹನಿಯನ್ನು ಹಾಕಿ. ನಿಜವಾದ ರೇಷ್ಮೆ ನೀರನ್ನು ತಕ್ಷಣವೇ ಹೀರಿಕೊಳ್ಳುತ್ತದೆ. ಆದ್ರೆ ಬೇರೆ ಬಟ್ಟೆಗಳು ದೀರ್ಘಕಾಲದವರೆಗೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ಜಾರಿಸಬಹುದು. ನೀವು ರೇಷ್ಮೆ ಸೀರೆ ಖರೀದಿಗೆ ಹೋದಾಗ ಈ ಎಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಿ. ಸರಿಯಾಗಿ ಪರೀಕ್ಷೆ ಮಾಡಿ ಸೀರೆ ಖರೀದಿ ಮಾಡಿ. ಇಲ್ಲ ಅಂದ್ರೆ ನಿಮ್ಮ ಶ್ರಮದ ಹಣ ವ್ಯರ್ಥವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.