ಅಬ್ಬಬ್ಬಾ ಏನ್ ಚೆಂದ..ಕಿಕ್‌ ಕೊಡೋ ಲುಕ್‌ ಕೊಟ್ಟ ಮಯೂರಿ ಕ್ಯಾತರಿ..!

Published : Apr 18, 2024, 09:54 PM ISTUpdated : Apr 18, 2024, 09:56 PM IST

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ಕನ್ನಡಿಗರ ಮನಗೆದ್ದ ನಟಿ ಮಯೂರಿ ಕ್ಯಾತರಿ. ಒಂದು ಮಗುವಿನ ತಾಯಿಯಾದರೂ ಇಂದಿಗೂ ಸಖತ್ ಸ್ಟೈಲಿಶ್ ಆಗಿದ್ದಾರೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ವೈಟ್-ಪಿಂಕ್ ಸಲ್ವಾರ್ ತೊಟ್ಟು ಮಿಂಚಿದ್ದಾರೆ.  

PREV
19
ಅಬ್ಬಬ್ಬಾ ಏನ್ ಚೆಂದ..ಕಿಕ್‌ ಕೊಡೋ ಲುಕ್‌ ಕೊಟ್ಟ ಮಯೂರಿ ಕ್ಯಾತರಿ..!

ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾದ ನಟಿ ಮಯೂರಿ ಕ್ಯಾತರಿ. ಆ ನಂತರ ಬಿಗ್‌ಬಾಸ್‌ನಲ್ಲಿಯೂ ತಮ್ಮ ಮುಗ್ಧತೆ ಹಾಗೂ ಸ್ಮಾರ್ಟ್‌ ಆಟದಿಂದ ಎಲ್ಲರ ಗಮನ ಸೆಳೆದಿದ್ದರು. ಒಂದು ಮಗುವಿನ ತಾಯಿಯಾದರೂ ಇಂದಿಗೂ ಸಖತ್ ಸ್ಟೈಲಿಶ್ ಆಗಿದ್ದಾರೆ.

29

ಆಗಾಗ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ವೈಟ್-ಪಿಂಕ್ ಸಲ್ವಾರ್ ತೊಟ್ಟು ಮಿಂಚಿದ್ದಾರೆ. ಅದಕ್ಕೆ ಸುಂದರವಾದ ಆಕ್ಸಿಡೈಸಡ್ ಜ್ಯುವೆಲ್ಲರಿ ಸೆಟ್‌ನ್ನು ಸಹ ಪೇರ್ ಮಾಡಿದ್ದಾರೆ.

39

ನೆಟ್ಟಿಗರು ಈ ಫೋಟೋ ನೋಡಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸಖತ್ ಬ್ಯೂಟಿ, ಕಲಿಯುಗದ ಅಪ್ಸರೆ, ವಾವ್‌, ಸೂಪರ್‌ ಎಂದೆಲ್ಲಾ ಹೊಗಳಿದ್ದಾರೆ.

49

ಅದೆಷ್ಟೋ ನಟಿಯರು ತಮ್ಮ ಮೊದಲಿಗೆ ಸೀರಿಯಲ್ ಮೂಲಕವೇ ನಟನೆಗೆ ಎಂಟ್ರಿ ಕೊಟ್ಟು ನಂತರ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ, ಅಂತವರಲ್ಲಿ ಮಯೂರಿ ಕ್ಯಾತರಿ ಕೂಡಾ ಒಬ್ಬರು. ನಟಿಸಿದ್ದು ಒಂದೇ ಸೀರಿಯಲ್ ಆದರೂ ಇಂದಿಗೂ ಅಶ್ವಿನಿ ನಕ್ಷತ್ರ ಸೀರಿಯಲ್‌ನ್ನು ಜನರು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

59

ಸೀರಿಯಲ್ ಬಳಿಕ ಸಿನಿಮಾರಂಗಕ್ಕೆ ಮುಖ ಮಾಡಿದ ಮಯೂರಿ ಕೃಷ್ಣ ಲೀಲಾ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ಕನ್ನಡದಲ್ಲಿ ಇವರು ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2 ಸೇರಿ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. 

69

ಮಯೂರಿ 2020 ರಲ್ಲಿ ತಮ್ಮ ಬಹುದಿನಗಳ ಗೆಳೆಯ ಅರುಣ್ ರಾಜು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ಮುದ್ದಾದ ಮಗುವೂ ಇದೆ.

79

2022 ರಲ್ಲಿ ಒಂದು ಮಗುವಿನ ತಾಯಿಯಾದ ಬಳಿಕ ನಟನೆಯಿಂದ ದೂರವೇ ಉಳಿದಿದ್ದರು. ಅಶ್ವಿನಿ ಕೊನೆಯದಾಗಿ ವೀಲ್ ಚೇರ್ ರೋಮಿಯೋ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.

89

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಮಯೂರಿ, ಫೋಟೋ ಗಳನ್ನು ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ತಮ್ಮ ಪ್ರವಾಸದ ಫೋಟೋಗಳು, ಸ್ನೇಹಿತರ ಜೊತೆಗಿನ ಫೋಟೋಗಳು, ವಿವಿಧ ಕಾರ್ಯಕ್ರಮಗಳ, ಮಾಡೆಲಿಂಗ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

99

ಇತ್ತೀಚೆಗೆ ಮಯೂರಿ ವೈಟ್ ಸಲ್ವಾರ್ ಹಾಗೂ ಪಿಂಕ್ ದುಪ್ಪಟ್ಟಾ ಧರಿಸಿ ಸುಂದರವಾಗಿ ಫೋಸ್ ಕೊಟ್ಟಿದ್ದಾರೆ. ಒಂದು ಮಗುವಿನ ಅಮ್ಮನಾಗಿದ್ದರೂ, ಫಿಟ್ ಆಗಿರುವ ಮಯೂರಿ ಅವರ ದೇಹಸಿರಿ, ಸ್ಟೈಲ್ ಮತ್ತು ಫಿಟ್ನೆಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Read more Photos on
click me!

Recommended Stories