ಪಿಂಕ್ ಸಲ್ವಾರ್‌ನಲ್ಲಿ ಮಿಂಚಿದ 'ಜಾಕಿ' ಭಾವನಾ, ಮಲಯಾಳಿ ಕುಟ್ಟಿಯನ್ನು ಕನ್ನಡದ ರಾಣಿ ಎಂದು ಹೊಗಳಿದ ಫ್ಯಾನ್ಸ್‌!

Published : Feb 25, 2024, 03:16 PM ISTUpdated : Feb 25, 2024, 03:45 PM IST

ದಕ್ಷಿಣಭಾರತದ ಖ್ಯಾತ ನಟಿಯರಲ್ಲೊಬ್ಬರು ಭಾವನಾ ಮೆನನ್‌. ಮೂಲತಃ ಮಲಯಾಳಿಯಾದರೂ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಛಾಪು ಮೂಡಿಸಿದ್ದಾರೆ. ಇತ್ತೀಚಿಗೆ ಭಾವನಾ ಶೇರ್ ಮಾಡಿದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

PREV
19
ಪಿಂಕ್ ಸಲ್ವಾರ್‌ನಲ್ಲಿ ಮಿಂಚಿದ 'ಜಾಕಿ' ಭಾವನಾ, ಮಲಯಾಳಿ ಕುಟ್ಟಿಯನ್ನು ಕನ್ನಡದ ರಾಣಿ ಎಂದು ಹೊಗಳಿದ ಫ್ಯಾನ್ಸ್‌!

ದಕ್ಷಿಣಭಾರತದ ಖ್ಯಾತ ನಟಿಯರಲ್ಲೊಬ್ಬರು ಭಾವನಾ ಮೆನನ್‌. ಮೂಲತಃ ಮಲಯಾಳಿಯಾದರೂ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಛಾಪು ಮೂಡಿಸಿದ್ದಾರೆ.

29

ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇತ್ತೀಚಿಗೆ ಭಾವನಾ ಶೇರ್ ಮಾಡಿದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

39

ಪಿಂಕ್‌ ಕಲರ್‌ನ ಸಲ್ವಾರ್‌ನಲ್ಲಿ ಭಾವನಾ ಮುದ್ದಾಗಿ ಫೋಸ್ ನೀಡಿದ್ದಾರೆ. ನೆಟ್ಟಿಗರು ಇದಕ್ಕೆ ಲೈಕ್ಸ್‌ ಹಾಗೂ ಹಾರ್ಟ್‌ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ.

49

ಭಾವನಾ ಅವರ ಈ ಲುಕ್ ನೋಡಿದ ನೆಟ್ಟಿಗರು ಕ್ಯೂಟ್‌, ಬ್ಯೂಟಿ, ಏಂಜೆಲ್ ಎಂದು ಹೊಗಳಿದ್ದಾರೆ. ಮತ್ತೆ ಕೆಲ ಅಭಿಮಾನಿಗಳು ಸ್ಮೈಲಿಂಗ್ ಕ್ವೀನ್ ಎಂದಿದ್ದಾರೆ. ಭಾವನಾ ತಮ್ಮ ನಟನೆ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

59

ಮತ್ತೆ ಕೆಲವು ಅಭಿಮಾನಿಗಳು, ಕನ್ನಡದ ರಾಣಿ ಎಂದು ಹೊಗಳಿದ್ದಾರೆ. ಇನ್ನೊಬ್ಬರು, 'ನಿಮ್ಮನ್ನು ನೋಡಿದರೆ 99 ಮೂವಿ ನೆನಪಾಗುತ್ತದೆ' ಎಂದು ನೆನಪಿಸಿಕೊಂಡಿದ್ದಾರೆ.

69

ಭಾವನಾ ಮೆನನ್ 16ನೇ ವಯಸ್ಸಿನಲ್ಲಿ 'ನಮ್ಮಳ್​' ಎಂಬ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. 2010ರಲ್ಲಿ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಟನೆಯ 'ಜಾಕಿ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು.

79

ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ 'ರೋಮೀಯೋ' ಹಾಗೂ '99' ಸಿನಿಮಾದಲ್ಲಿ ನಟಿಸಿ ಕರುನಾಡ ಪ್ರೇಕ್ಷಕರಿಗೆ ಮತ್ತಷ್ಟು ಸನಿಹವಾದರು. ಬಳಿಕ ಟಗರು, ಇನ್ಸ್​ಪೆಕ್ಟರ್​ ವಿಕ್ರಮ್​, ಭಜರಂಗಿ 2, ಗೋವಿಂದ ಗೋವಿಂದ, ಶ್ರೀಕೃಷ್ಣ @ಜಿಮೈಲ್​.ಕಾಮ್​ ಚಿತ್ರಗಳಲ್ಲಿ ನಟಿಸಿದರು. 

89

ಇನ್​ಸ್ಟಾದಲ್ಲಿ 2 ಮಿಲಿಯನ್​ ಫಾಲೋವರ್ಸ್​ ಸಂಪಾದಿಸಿರುವ ನಟಿ ಈವರೆಗೆ 231 ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಅವರ ಇನ್​ಸ್ಟಾ ಓಪನ್​ ಮಾಡಿದರೆ ಸಾಕು, ಬಗೆ ಬಗೆಯ ಫೋಟೋಗಳನ್ನು ಕಾಣಬಹುದು. 

99

ನಟಿ ಭಾವನಾ ಅವರು ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಮದುವೆ ಆಗಿದ್ದರು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ.

Read more Photos on
click me!

Recommended Stories