ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಚಂದ ಉಂಟಾ ಮಾರ್ರೆ ಎಂದು ಕೇಳಿದ ಕಾವ್ಯ ಶಾಸ್ತ್ರಿ, ಹೇಗುಂಟು ನೋಡಿ

First Published | Feb 24, 2024, 5:01 PM IST

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾಸ್ತ್ರಿ. ಇತ್ತೀಚಿಗೆ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಫೋಟೋಶೂಟ್ ಮಾಡ್ಕೊಂಡಿದ್ದಾರೆ. ಕಾವ್ಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶಾಸ್ತ್ರಿ. ನಿರೂಪಕಿಯಾಗಿಯಾಗಿಯೂ ಹಲವು ಕಾರ್ಯಕ್ರಮಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಆಕ್ಟಿವ್ ಆಗಿರುವ ನಟಿ ಇತ್ತೀಚಿಗೆ ಗ್ರ್ಯಾಂಡ್ ಕಲರ್ ಸೀರೆಯುಟ್ಟು ಫೋಟೋಶೂಟ್ ಮಾಡ್ಕೊಂಡಿದ್ದಾರೆ.

ಯೆಲ್ಲೋ, ಬ್ಲೂ, ಪಿಂಕ್‌ ಕಲರ್‌ನ ಗ್ರ್ಯಾಂಡ್‌ ರೇಷ್ಮೆ ಸೀರೆಯುಟ್ಟು ಮುದ್ದಾಗಿ ಪೋಸ್‌ ಕೊಟ್ಟಿದ್ದಾರೆ. ಇದಕ್ಕೆ ಒಪ್ಪುವಂತೆ ಲಾಂಗ್ ಅಂಡ್ ಶಾರ್ಟ್‌ ನೆಕ್ಲೇಸ್‌ನ್ನು ಧರಿಸಿ ಕಂಪ್ಲೀಟ್ ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದಾರೆ.

Tap to resize

ಇನ್‌ಸ್ಟಾಗ್ರಾಂನಲ್ಲಿ ಕಾವ್ಯಾ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಇದಕ್ಕೆ ಪಿಕ್ಸ್ ಆಫ್‌ ದಿ ಇವೆಂಟ್ ಎಂದು ಶೀರ್ಷಿಕೆಯನ್ನು ಸಹ ನೀಡಿದ್ದಾರೆ ಮಾತ್ರವಲ್ಲ ಚಂದ ಉಂಟಾ ಮಾರ್ರೆ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.

ಕಾವ್ಯಾ ಶಾಸ್ತ್ರಿ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್‌ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್‌, ಗಾರ್ಜಿಯಸ್‌, ಪ್ರೆಟ್ಟೀ ಎಂದು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಅಭಿಮಾನಿ, 'ಚೆಂದ ಇಲ್ಲ ಅಂತ ಹೇಳಿದವನಿಗೆ ಕಣ್ಣು ಕಾಣ್ಸೋಲ್ಲ' ಎಂದಿದ್ದಾನೆ. 'ಮುಖದಲ್ಲಿ ನಗು, ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣ್ತಿದ್ದೀರಾ ಮೇಡಂ' ಎಂದು ಕಾಮೆಂಟ್ ಮಾಡಿದ್ದಾನೆ.

ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ ಕಾವ್ಯಾ ಕೊನೆಯದಾಗಿ ರಾಧಿಕಾ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಸೀರಿಯಲ್ ನಿಂದ ಅರ್ಧದಲ್ಲೇ ಹೊರ ಬಂದ ನಂತರ ನಟಿ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿಲ್ಲ. 

ಸದ್ಯಕ್ಕೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ, ವಿವಿಧ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡುತ್ತಾ, ಟ್ರಾವೆಲ್ ಮಾಡುತ್ತಾ ಜೀವನ ಎಂಜಾಯ್ ಮಾಡ್ತಿದ್ದಾರೆ. 

ಕಾವ್ಯಾ ಶಾಸ್ತ್ರಿ ಇತ್ತೀಚಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪದೆದಿದ್ದು, ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಹೆಚ್ಚಾಗಿ ರಾಜ್ಯದ ಮತ್ತು ದೇಶದ ವಿವಿಧ ದೇಗುಲಗಳ ದರ್ಶನ ಪಡೆಯುತ್ತಲೆ ಇರುವ ಕಾವ್ಯಾ ಶಾಸ್ತ್ರಿ ಅವರಿಗೆ ದೇವರ ಮೇಲೆ ಭಕ್ತಿ ಜಾಸ್ತೀನೆ. ಇವರು ತಮ್ಮ ಸೋಶಿಯಲ್ ಮಿಡಿಯಾದಲ್ಲೂ ಸಹ ಹೆಚ್ಚಾಗಿ ಆಧ್ಯಾತ್ಮಿಕತೆಯ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತಾರೆ. 

Latest Videos

click me!