ಉದ್ಯಮದಲ್ಲಿ ಅಪ್ಪನನ್ನೇ ಮೀರಿಸ್ತಾಳ ಮಗಳು! ಜರ್ಮನ್ ಬ್ಯೂಟಿ ಬ್ರಾಂಡ್‌ ಜೊತೆ ಒಪ್ಪಂದ ಮಾಡ್ಕೊಂಡ ಇಶಾ ಅಂಬಾನಿ

First Published | Jan 17, 2024, 10:27 AM IST

ಮುಕೇಶ್ ಅಂಬಾನಿ ಕಂಪನಿಯ ಆಡಳಿತವನ್ನು ಇಶಾ ಅಂಬಾನಿಗೆ ಹಸ್ತಾಂತರಿಸಿದಾಗಿನಿಂದ, ಲಾಭದ ವಿಷಯದಲ್ಲಿ ಕಂಪೆನಿಯು ಎತ್ತರದ ಸ್ಥಾನಕ್ಕೇರಿದೆ.  ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್ ಈಗ ಜರ್ಮನ್‌ ಬ್ಯೂಟಿ ಬ್ರ್ಯಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ಲಾಭವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳೋ ನಿರೀಕ್ಷೆಯಲ್ಲಿದೆ.

ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯುತ್ತಮ ಕಾರ್ಯನಿರ್ವಹಣೆಯ ಅಂಗ ಸಂಸ್ಥೆಗಳಲ್ಲಿ ಒಂದಾಗಿದೆ. ಇದು  1860000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. 

ಇಶಾ ಅಂಬಾನಿ,  ರಿಲಯನ್ಸ್ ರಿಟೇಲ್‌ನ ಬಿಸಿನೆಸ್‌ನ್ನು ಮತ್ತಷ್ಟು ವಿಸ್ತರಣೆ ಮಾಡಿ ಲಾಭವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷದಲ್ಲಿ, ಕಂಪನಿಯು ಅನೇಕ ಜನಪ್ರಿಯ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡು ಅವುಗಳನ್ನು ಭಾರತಕ್ಕೆ ತಂದಿದೆ. 

Tap to resize

ಮುಕೇಶ್ ಅಂಬಾನಿ ಕಂಪನಿಯ ಆಡಳಿತವನ್ನು ಇಶಾ ಅಂಬಾನಿಗೆ ಹಸ್ತಾಂತರಿಸಿದಾಗಿನಿಂದ, ಲಾಭದ ವಿಷಯದಲ್ಲಿ ಕಂಪೆನಿಯು ಎತ್ತರದ ಸ್ಥಾನಕ್ಕೇರಿದೆ.  ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್ ಈಗ ಅಂತರಾಷ್ಟ್ರೀಯ ಸ್ಕಿನ್‌ಕೇರ್ ಬ್ರ್ಯಾಂಡ್ ಅಲೈಸ್ ಆಫ್ ಸ್ಕಿನ್‌ನ್ನು ಭಾರತಕ್ಕೆ ತರುತ್ತಿದೆ. 

Tira

ವರದಿಯ ಪ್ರಕಾರ, ಇನ್ನು ಮುಂದೆ ಜರ್ಮನ್ ಬ್ಯೂಟಿ ಬ್ರ್ಯಾಂಡ್‌ ಬ್ರ್ಯಾಂಡ್‌ ಅಲೈಸ್ ಆಫ್ ಸ್ಕಿನ್‌ನ ಉತ್ಪನ್ನಗಳು ಇನ್ನು ರಿಲಯನ್ಸ್ ರೀಟೇಲ್‌ನ ತಿರಾ ಸ್ಟೋರ್‌ನಲ್ಲಿ ಭಾರತದಲ್ಲಿ ಲಭ್ಯವಿರುತ್ತವೆ ಎಂದು ತಿಳಿದುಬಂದಿದೆ.

ತಿರಾ ರಿಲಯನ್ಸ್‌ನ ಇತ್ತೀಚಿನ ಬ್ಯೂಟಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇಶಾ ಅಂಬಾನಿ ಒಡೆತನದಲ್ಲಿರುವ ಈ ಬ್ರ್ಯಾಂಡ್‌, ನೈಕಾ, ಟಾಟಾ ಕ್ಲಿಕ್ ಪ್ಯಾಲೆಟ್, ಮೈಂತ್ರಾ ಮತ್ತು ಇತರ ಬ್ರ್ಯಾಂಡ್‌ ವಿರುದ್ಧ ಸ್ಪರ್ಧಿಸುತ್ತದೆ.

ಕಳೆದ ಕೆಲವು ತಿಂಗಳುಗಳಿಂದ, Tira ತನ್ನ ಪೋರ್ಟ್‌ಫೋಲಿಯೊ ಅಡಿಯಲ್ಲಿ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಉತ್ಪನ್ನವನ್ನು ಸೇರಿಸಿದೆ. ಇದರಲ್ಲಿ ಅಲೈಸ್ ಆಫ್ ಸ್ಕಿನ್ ಒಂದಾಗಿದೆ.

ರಿಲಯನ್ಸ್ ರಿಟೇಲ್ ಮೆಟ್ರೋ ಪಾಲಿಟನ್‌ ನಗರಗಳಲ್ಲಿ ತನ್ನ ಬ್ರ್ಯಾಂಡ್‌ನ್ನು ವೇಗವಾಗಿ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಇಶಾ ಅಂಬಾನಿ ಅವರನ್ನು ಆಗಸ್ಟ್ 2022ರಲ್ಲಿ ಮುಕೇಶ್ ಅಂಬಾನಿ ರಿಲಯನ್ಸ್ ರಿಟೇಲ್‌ನ ಒಡತಿ ಎಂದು ಘೋಷಿಸಿದರು. ರಿಲಯನ್ಸ್ ರಿಟೇಲ್ ಪ್ರಸ್ತುತ 2.5 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. 

ಜಿಮ್ಮಿ ಚೂ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ವರ್ಸೇಸ್, ಮೈಕೆಲ್ ಕಾರ್ಸ್, ಬ್ರೂಕ್ಸ್ ಬ್ರದರ್ಸ್, ಅರ್ಮಾನಿ ಎಕ್ಸ್‌ಚೇಂಜ್, ಬರ್ಬೆರಿ ಮತ್ತು ಇತರ ಅನೇಕ ಜಾಗತಿಕ ಬ್ರ್ಯಾಂಡ್‌ಗಳು ರಿಲಯನ್ಸ್ ರಿಟೇಲ್ ಪಾಲುದಾರ ಬ್ರಾಂಡ್‌ನಂತೆ ಭಾರತದಲ್ಲಿ ಲಭ್ಯವಿದೆ.

78 ಕೋಟಿ ಸ್ಟೋರ್‌ ಫುಲ್‌ಫಾಲ್‌ ಮತ್ತು 100 ಕೋಟಿಗೂ ಹೆಚ್ಚು ವಹಿವಾಟುಗಳೊಂದಿಗೆ, ರಿಲಯನ್ಸ್ ರಿಟೇಲ್ ವಿಶ್ವದ ಅತಿ ಹೆಚ್ಚು ಭೇಟಿ ನೀಡಿದ ಟಾಪ್ 10 ಚಿಲ್ಲರೆ ವ್ಯಾಪಾರಿಗಳಲ್ಲಿ ಒಂದಾಗಿದೆ.  ಜಾಗತಿಕ ಟಾಪ್ 100 ಪಟ್ಟಿಯಲ್ಲಿನ ಏಕೈಕ ಭಾರತೀಯ ಚಿಲ್ಲರೆ ವ್ಯಾಪಾರಿಯಾಗಿದೆ.

Latest Videos

click me!