ಬೆಂಗಳೂರಿನಲ್ಲಿ ಅರಳಿ ನಿಂತ ಪಿಂಕ್ ಹೂಗಳ ಮಧ್ಯೆ 'ಸೀತಾರಾಮ' ನಟಿ ಪ್ರಿಯಾ, ಚಂದನದ ಗೊಂಬೆ ಎಂದ ಫ್ಯಾನ್ಸ್‌

First Published | Jan 16, 2024, 3:28 PM IST

ಬೆಂಗಳೂರಿನ ಹಲವು ರಸ್ತೆಗಳಲ್ಲಿ ಪಿಂಕ್‌ ಟ್ರಂಪೆಟ್ಸ್ ಹೂಗಳು ಅರಳಿ ನಿಂತಿವೆ. ಹೀಗಿರುವಾಗ ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರ ನಿರ್ವಹಿಸುತ್ತಿರುವ ನಟಿ ಮೇಘಾ ಶಂಕರಪ್ಪ ಈ ಹೂಗಳ ಮಧ್ಯೆ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ.

ಚಳಿಗಾಲ ಶುರುವಾಗಿದೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಪಿಂಕ್‌ ಟ್ರಂಪೆಟ್ಸ್ ಹೂಗಳು ಅರಳಿ ನಿಂತಿವೆ. ರಸ್ತೆಯುದ್ದಕ್ಕೂ ಪಿಂಕ್ ಪಿಂಕಾಗಿ ಅರಳಿ ನಿಂತಿರುವ ಹೂಗಳು ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿಗೆ ಹೊಸ ಕಳೆಯನ್ನೇ ತಂದು ಕೊಟ್ಟಿವೆ.

ಹೀಗಿರುವಾಗ ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರ ನಿರ್ವಹಿಸುತ್ತಿರುವ ನಟಿ ಮೇಘಾ ಶಂಕರಪ್ಪ ಈ ಹೂಗಳ ಮಧ್ಯೆ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ. ಪಿಂಕ್‌ ಸೀರೆಯುನ್ನುಟ್ಟು ಹೂಗಳಿರುವ ದಾರಿಯ ಮಧ್ಯೆ ವಾಕ್ ಮಾಡುತ್ತಾ ಫೋಸ್ ಕೊಟ್ಟಿದ್ದಾರೆ.

Latest Videos


ಸೀತಾರಾಮ್‌ ಸೀರಿಯಲ್‌ನಲ್ಲಿ ಹೀರೋಯಿನ್ ಸೀತಾಳಂತೆ ಎಲ್ಲರ ಗಮನ ಸೆಳೆದಿರುವ ಪಾತ್ರ ಆಕೆಯ ಗೆಳತಿ ಪ್ರಿಯಾಳದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವುದು ಮೇಘನಾ ಶಂಕರಪ್ಪ. ಬಬ್ಲಿ ಬಬ್ಲಿಯಾಗಿದ್ದು , ಮಾತಿನ ಮಲ್ಲಿಯಾಗಿರುವ ಮೇಘನಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಮೇಘನಾ, ಆಗಾಗ ಸೀರೆ, ಗೌನ್‌ನಲ್ಲಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದಕ್ಕೆ ಫ್ಯಾನ್ಸ್‌ ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡುತ್ತಾರೆ.

ಒಬ್ಬ ಬಳಕೆದಾರರು, 'ನಿಮ್ಮ ಫೋಟೋಗಳು ಹಳೆಯ ಬೆಂಗಳೂರನ್ನು ನೆನಪಿಸುವಂತೆ ಮಾಡಿತು. ಸೌಂದರ್ಯ ಇಷ್ಟವಾಯಿತು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಚಂದನದ ಗೊಂಬೆ ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, ಯು ಆರ್‌ ಲುಕ್ಕಿಂಗ್ ಸೋ ಬ್ಯೂಟಿಫುಲ್‌ ಎಂದು ತಿಳಿಸಿದ್ದಾರೆ.

ಕನ್ನಡ ಕಿರುತೆರೆಯ ಚಾಯಾ ಎಂದೇ ಜನಪ್ರಿಯತೆ ಪಡೆದಿದ್ದ ಮೇಘನಾ ಶಂಕರಪ್ಪ ಸೀತಾರಾಮ ಧಾರಾವಾಹಿಯಿಂದ ಎಲ್ಲರ ನೆಚ್ಚಿನ ಪ್ರಿಯಾ ಆಗಿದ್ದಾರೆ. ಸೀರಿಯಲ್‌ನಲ್ಲಿ ಮಾಡರ್ನ್ ಹುಡುಕಿ ಪ್ರಿಯಾ ಪಾತ್ರ ಮಾಡುತ್ತಿದ್ದರೂ ಧರಿಸುವ ಪ್ರತಿಯೊಂದು ಬಟ್ಟೆನೂ ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿರುತ್ತದೆ.

ಇನ್‌ಸ್ಟಾಗ್ರಾಂನಲ್ಲಿ 100 ಪೋಸ್ಟ್‌ ಶೇರ್ ಮಾಡಿರುವ ಮೇಘನಾ ಶಂಕರಪ್ಪ 55 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಜನರ ಗಮನ ಸೆಳೆಯುತ್ತಿದ್ದಾರೆ. 

ಮೇಘನಾ, ಈ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದಲ್ಲಿ ನಟಿಸಿದ್ದರು. ಪಾಸಿಟಿವ್ ಆಗಲಿ ನೆಗೆಟಿವ್ ಆಗಲಿ ಎಲ್ಲ ಪಾತ್ರಕ್ಕೂ ಮೇಘನಾ ಶಂಕರಪ್ಪ ಸೈ ಅನ್ನುತ್ತಾರೆ. 

ಕಿನ್ನರಿ, ಕೃಷ್ಣ ತುಳಸಿ, ರತ್ನಗಿರಿ ರಹಸ್ಯ, ದೇವಯಾನಿ ಮತ್ತು ಸಿಂಧೂರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮೇಘನಾ ಶಂಕರಪ್ಪ. 

click me!