ಬರೋಬ್ಬರಿ 700 ಗಂಟೆ ಕಸೂತಿ ಮಾಡಿದ ಚಿನ್ನದ ಗೌನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಇಶಾ ಅಂಬಾನಿ

Published : Jul 12, 2026, 05:04 PM IST

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಎಲ್ಲರ ಗಮನಸೆಳೆದಿದ್ದಾರೆ. ಇಶಾ ಅಂಬಾನಿ ಧರಿಸಿದ್ದ ಚಿನ್ನದ ಗೌನ್ ಎಲ್ಲರ ಕುತೂಹಲ ಕೆರಳಿಸಿದೆ. ಮನೀಶ್ ಮಲ್ಹೋತ್ರ ಡಿಸೈನ್ ಮಾಡಿರುವ ಈ ಡ್ರೆಸ್ ಹಲವು ವಿಶೇಷತೆಗಳಿಂದ ಕೂಡಿದೆ.

PREV
16
ಚಿನ್ನದ ಗೌನ್‌ನಲ್ಲಿ ಇಶಾ ಅಂಬಾನಿ

ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ. ಯಶಸ್ವಿಯಾಗಿ ಉದ್ಯಮ ಮುನ್ನಡೆಸುತ್ತಿರುವ ಇಶಾ ಅಂಬಾನಿ ಫ್ಯಾಶನ್ ಕಾರ್ಯಕ್ರಮಗಳಲ್ಲೂ ಸಕ್ರೀಯವಾಗಿದ್ದಾರೆ. ಬ್ಯೂಟಿ, ಲೈಫ್‌ಸ್ಟೈಲ್ ಸೇರಿದಂತೆ ಹಲವು ಉತ್ಪನ್ನಗಳ ಮಾಲಕಿಯಾಗಿರುವ ಇಶಾ ಅಂಬಾನಿ ಇದೀಗ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಚಿನ್ನದ ಗೌನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿರುವ ಈ ಡ್ರೆಸ್ ಇದೀಗ ಎಲ್ಲರ ಚರ್ಚೆಯ ವಸ್ತುವಾಗಿದೆ.

26
ಪ್ಯಾಶನ್ ವೀಕ್‌ನ ಭಾರತದ ಪ್ರತಿನಿಧಿಯಾಗಿ ಹೊರಹೊಮ್ಮಿದ ಇಶಾ

ರಿಲಯನ್ಸ್ ರಿಟೇಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ, ಪ್ರತಿಷ್ಠಿತ ಪ್ಯಾರಿಸ್ ಹಾಟ್ ಕೌಚರ್‌ನಲ್ಲಿ ಪಾಲ್ಗೊಂಡಿದ್ದಾರೆ. ಮನೀಶ್ ಮಲ್ಹೋತ್ರಾ ಮತ್ತು ರಾಹುಲ್ ಮಿಶ್ರಾ ಅವರ ಅದ್ಭುತ ಡಿಸೈನ್ ಮೂಲಕ ಮೂಡಿ ಬಂದ ಚಿನ್ನದ ಗೌನ್ ಧರಿಸಿದ ಇಶಾ ಇಂಬಾನಿ ಪ್ಯಾರಿಸ್ ಫ್ಯಾಶನ್ ವೀಕ್‌ನ ಪ್ರಮುಖ ಪ್ರತಿನಿಧಿಯಾಗಿ ಕಾಣಿಸಿಕೊಂಡರು.

36
ಬರೋಬ್ಬರಿ 700 ಗಂಟೆ ಕಸೂತಿ ಮಾಡಿದ ಗೌನ್

ಇಶಾ ಅಂಬಾನಿ ಧರಿಸಿದ ಚಿನ್ನದ ಗೌನ್ ಹಲವು ವಿಶೇಷತೆ ಹೊಂದಿದೆ. ಮುಂಬೈನಲ್ಲಿ ಈ ಡ್ರೆಸನ್ನು ಬರೋಬ್ಬರಿ 700ಕ್ಕೂ ಹೆಚ್ಚು ಗಂಟೆಗಳ ಕಾಲ ಸೂಕ್ಷ್ಮ ಕಸೂತಿ ಮಾಡಿ ತಯಾರಿಸಲಾಗಿದೆ. ಇದರಲ್ಲಿ ಭಾರತದ ಸಾಂಪ್ರದಾಯಿಕ ಜರಿ-ಜರ್ದೋಸಿ ಕರಕುಶಲತೆ ಹಾಗೂ 'ಸಾಲಿ' ಮತ್ತು 'ತಾಬನ್' ಎಂಬ ಎರಡು ಬಗೆಯ ಕಸೂತಿ ಕೆಲಸಗಳೊಂದಿಗೆ, ಕೈಯಿಂದ ಅಳವಡಿಸಲಾದ ಸ್ಫಟಿಕಗಳನ್ನು ಬಳಸಲಾಗಿದೆ.

46
ತಾಯಿ ಪರಿಕಲ್ಪನೆಯಿಂದ ಪ್ರೇರಿತವಾದ ಡಿಸೈನ್

ಮಾ' (ತಾಯಿ) ಎಂಬ ಪರಿಕಲ್ಪನೆಯಿಂದ ಪ್ರೇರಿತವಾದ ಈ ವಿನ್ಯಾಸವನ್ನು ಡಿಸೈನರ್ಸ್ ಪ್ರೀತಿ, ಶಕ್ತಿ ಮತ್ತು ಘನತೆಯ ಮೂಲಕ ಹಲವಾರು ಪೀಳಿಗೆಗಳನ್ನೇ ರೂಪಿಸಿದ ಮಹಿಳೆಯರಿಗೆ ಅರ್ಪಿಸಿದ್ದಾರೆ. ಈ ಚಿನ್ನದ ಗೌನ್ ಇಶಾ ಅಂಬಾನಿ ಅಂದವನ್ನು ಹೆಚ್ಚಿಸಿತ್ತು. ಈ ಮೂಲಕ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಇಶಾ ಅಂಬಾನಿ ಎಲ್ಲರ ಗಮನಸೆಳೆದಿದ್ದಾರೆ.

56
50 ಕ್ಯಾರೆಟ್ ವಜ್ರದ ಆಭರಣ

ಈ ಚಿನ್ನದ ಗೌನ್ ಗೆ ಪೂರಕವಾಗಿ ಇಶಾ ಅಂಬಾನಿ ಅವರು ಲೋರೆನ್ ಶ್ವಾರ್ಟ್ಜ್ 50 ಕ್ಯಾರೆಟ್ ವಜ್ರದ ಕಿವಿಯೋಲೆಗಳು ಮತ್ತು 12 ಕ್ಯಾರೆಟ್ ನ ಪಿಯರ್ ಆಕಾರದ ವಜ್ರದ ಉಂಗುರ ಧರಿಸಿದ್ದರು. ಚಿನ್ನದ ಗೌನ್ ಮತ್ತು ವಜ್ರದ ಆಭರಣಗಳ ಈ ಸಂಯೋಜನೆಯು ಪ್ಯಾರಿಸ್‌ನ ಪ್ರತಿಷ್ಠಿತ ಫ್ಯಾಷನ್ ವೇದಿಕೆಯಲ್ಲಿ ಭಾರತೀಯ ಕರಕುಶಲತೆ ಮತ್ತು ಆಧುನಿಕ ವಿನ್ಯಾಸದ ಮಿಶ್ರಣವನ್ನು ಪ್ರದರ್ಶಿಸಿತು.

66
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಸೂತಿ

ಇಶಾ ಅಂಬಾನಿ ಚೌನ್ನದ ಗೌನ್‌ನಲ್ಲಿ ಮಿಂಚುವ ಮೂಲಕ ಭಾರತದ ಡಿಸೈನ್, ವಿನ್ಯಾಸ,ಕಸೂತಿಗಳು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಣೆಯಾಗಿ ಹೊರಹೊಮ್ಮಿದೆ. ಇಶಾ ಅಂಬಾನಿಯ ಚಿನ್ನದ ಗೌನ್ ಡ್ರೆಸ್‌ಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories