ಲಕ್ಸುರಿಯಸ್‌ ಲೈಫ್‌ಸ್ಟೈಲ್‌, ನೀತಾ ಅಂಬಾನಿಯನ್ನೇ ಮೀರಿಸ್ತಾರೆ ಮಗಳು ಇಶಾ; ಧರಿಸೋ ಜಾಕೆಟ್‌ ಬೆಲೇನೆ ಇಷ್ಟೊಂದಾ?

First Published | Dec 2, 2023, 1:17 PM IST

ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಯಾವಾಗ್ಲೂ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಾನೇ ಸುದ್ದಿಯಾಗುತ್ತಾರೆ. ಅದರಲ್ಲೂ ನೀತಾ ಅಂಬಾನಿ ಧರಿಸೋ ಬಟ್ಟೆ, ಬ್ಯಾಗ್‌, ಚಪ್ಪಲಿ  ಎಲ್ಲವೂ ಕಾಸ್ಟ್ಲೀನೆ. ಹಾಗೆಯೇ ಮಗಳು ಇಶಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದ ಅಮ್ಮನನ್ನೂ ಮೀರಿಸ್ತಾರೆ.

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಮಗಳು ಇಶಾ ಅಂಬಾನಿ. ತಮ್ಮ ಪ್ರತಿಭೆಯಿಂದ ವ್ಯಾಪಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ, ಇಶಾ ಸ್ಟೈಲ್ ಐಕಾನ್ ಆಗಿದ್ದು, ತಮ್ಮ ಫ್ಯಾಷನ್ ಆಯ್ಕೆಗಳಿಂದ ಸಾರ್ವಜನಿಕರನ್ನು ಬೆರಗುಗೊಳಿಸುತ್ತಾರೆ. ಕಾಸ್ಟ್ಲೀ ಬಟ್ಟೆ, ಆಸೆಸ್ಸರೀಸ್ ಧರಿಸುವ ಮೂಲಕ ಎಲ್ಲರ ಗಮನ ಸೆಳೆಯತ್ತಾರೆ.

ಹಾಗೆಯೇ ಇತ್ತೀಚಿಗೆ ಇಶಾ ಅಂಬಾನಿ, ತಾಯಿ ನೀತಾ ಅಂಬಾನಿಯ ಕಲ್ಚರ್ ಸೆಂಟರ್‌ಗೆ ಬಾಸ್ ಲೇಡಿ ಲುಕ್‌ನಲ್ಲಿ ಆಗಮಿಸಿದರು. ಕಲ್ಚರಲ್‌ ಸೆಂಟರ್‌ನಲ್ಲಿ ನಡೆದ ಎಕ್ಸಿಬಿಷನ್‌ನಲ್ಲಿ ವಿಶ್ವಾದ್ಯಂತ ಕಲಾವಿದರಿಂದ ಪ್ರಮುಖ ಕಲಾಕೃತಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಆಫ್‌ ವೈಟ್ ಹಾಗೂ ಪಿಂಕ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.

Tap to resize

ಇಶಾ ಅಂಬಾನಿ ಇತ್ತೀಚೆಗೆ ಅಧಿಕೃತ NMACC ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ಈ ಲುಕ್‌ನಲ್ಲಿ ಕಾಣಿಸಿಕೊಂಡರು. ಪ್ರದರ್ಶನದ ಮೇಲ್ವಿಚಾರಕರಾದ ಲಾರೆನ್ಸ್ ವ್ಯಾನ್ ಹಗೆ ಕೂಡ ಇಶಾ ಅವರೊಂದಿಗೆ ಇದ್ದರು.

ಆಫ್ ವೈಟ್ ಪ್ಯಾಂಟ್ ಮತ್ತು ಗುಲಾಬಿ ಮತ್ತು ಬಿಳಿ ಛಾಯೆಗಳಲ್ಲಿ ಪ್ಲೈಡ್ ಮಾದರಿಯೊಂದಿಗೆ ಜಾಕೆಟ್ ಧರಿಸಿ ಇಶಾ ಪಾಸಿಟಿವ್‌ ವೈಬ್ ಕ್ರಿಯೇಟ್ ಮಾಡಿದರು.

ವಜ್ರದ ಉಂಗುರ ಮತ್ತು ಸೊಗಸಾದ ವಜ್ರದ ಕಿವಿಯೋಲೆ ಧರಿಸಿದ್ದು, ಸರಳವಾಗಿ ಎಲ್ಲರ ಗಮನ ಸೆಳೆದರು. ಇಶಾ ಅವರ ಜಾಕೆಟ್ ಪ್ರತಿಯೊಂದು ಸಂದರ್ಭಕ್ಕೂ ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತದೆ. ಇದನ್ನು ಇಶಾ ಅಂಬಾನಿ ಸ್ಕರ್ಟ್‌ನೊಂದಿಗೆ, ಡ್ರೆಸ್‌ನೊಂದಿಗೆ ಧರಿಸುವುದನ್ನು ಹಲವಾರು ಬಾರಿ ನೋಡಬಹುದು. 

ಯಾವುದೇ ಸಂದೇಹವಿಲ್ಲದೆ, ಇಶಾ ಅವರ ಜಾಕೆಟ್ ಬಹುತೇಕ ಎಲ್ಲಾ ಸಂದರ್ಭಗಳಿಗೂ ಸೂಕ್ತವಾಗಿದೆ. ಪ್ರತಿ ಹುಡುಗಿ ತನ್ನ ವಾರ್ಡ್‌ರೋಬ್‌ನಲ್ಲಿ ಈ ಬಟ್ಟೆಯನ್ನು ಹೊಂದಲು ಬಯಸುತ್ತಾರೆ. ಇದನ್ನು ಇಶಾ ಅಂಬಾನಿಯಂತೆ ಡ್ರೆಸ್‌ನಿಂದ ಆರಂಭಿಸಿ ಸ್ಕರ್ಟ್‌ನೊಂದಿಗೆ ಜೋಡಿಸುವವರೆಗೆ ಹಲವು ವಿಧಗಳಲ್ಲಿ ಸ್ಟೈಲ್ ಮಾಡಬಹುದು. 

ಇಶಾ ಅಂಬಾನಿ ಹಲವಾರು ಬಾರಿ ರಿಪೀಟ್ ಮಾಡುವ ಈ ಜಾಕೆಟ್ ಶನೆಲ್ ಬ್ರಾಂಡ್‌ನಿದ್ದಾಗಿದೆ. Buyma ಪ್ರಕಾರ, ಜಾಕೆಟ್, ಅಂದಾಜು 7,89,203 ರೂ. ಬೆಲೆಬಾಳುತ್ತದೆ.

Latest Videos

click me!