ಅಂಬಾನಿ ಜಿಯೋ ಮಾಲ್‌ ಜೊತೆ ಫ್ರೆಂಚ್ ಫ್ಯಾಶನ್ ಬ್ರ್ಯಾಂಡ್ ಬಿಗ್‌ಡೀಲ್‌; ಅಬ್ಬಬ್ಬಾ ರಿಲಯನ್ಸ್‌ಗೆ ಸಿಗೋ ಲಾಭ ಇಷ್ಟೊಂದಾ?

First Published | Nov 30, 2023, 3:50 PM IST

ಮುಕೇಶ್ ಅಂಬಾನಿ ಮತ್ತು ಅವರ ಪುತ್ರಿ ಇಶಾ ಅಂಬಾನಿ 16.13 ಟ್ರಿಲಿಯನ್ ರಿಲಯನ್ಸ್ ಇಂಡಸ್ಟ್ರೀಸ್‌ನ್ನು ಲಾಭದಾಯಕವಾಗಿ ಮುನ್ನಡೆಸುತ್ತಿದ್ದಾರೆ. ಅಂಬಾನಿ ಜಿಯೋ ಮಾಲ್‌ ಜೊತೆ ಫ್ರೆಂಚ್ ಫ್ಯಾಶನ್ ಬ್ರ್ಯಾಂಡ್ ಬಿಗ್‌ಡೀಲ್‌ ಮಾಡಿಕೊಂಡಿದೆ. ಇದರಿಂದ ರಿಲಯನ್ಸ್‌ಗೆ ಸಿಗೋ ಲಾಭ ಎಷ್ಟ್‌ ಗೊತ್ತಾ?

ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಕಳೆದೆರಡು ವರ್ಷಗಳಲ್ಲಿ ಹಲವಾರು ಯುರೋಪಿಯನ್ ಮತ್ತು ಅಮೇರಿಕನ್ ಬ್ರಾಂಡ್‌ಗಳೊಂದಿಗೆ ಪಾರ್ಟ್‌ನರ್‌ ಶಿಪ್‌ ಹೊಂದಿದ್ದಾರೆ. ಮುಕೇಶ್ ಅಂಬಾನಿ ಮತ್ತು ಅವರ ಪುತ್ರಿ ಇಶಾ ಅಂಬಾನಿ 16.13 ಟ್ರಿಲಿಯನ್ ರಿಲಯನ್ಸ್ ಇಂಡಸ್ಟ್ರೀಸ್‌ನ ಫ್ಯಾಶನ್ ಕೇಂದ್ರಿತ ಅಂಗಸಂಸ್ಥೆಯನ್ನು ವೇಗವಾಗಿ ವಿಸ್ತರಿಸುತ್ತಿದ್ದಾರೆ. 

ಇದರ ಭಾಗವಾಗಿ ಮುಕೇಶ್ ಅಂಬಾನಿ ಅವರು ಫ್ರೆಂಚ್ ಫ್ಯಾಶನ್ ಲೇಬಲ್‌ಗಳಾದ ಸ್ಯಾಂಡ್ರೊ ಮತ್ತು ಮಜೆಯನ್ನು ಹೊಂದಿರುವ ಫ್ಯಾಶನ್ ಗ್ರೂಪ್ SMCPನೊಂದಿಗೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Latest Videos


ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರೀಟೈಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಬ್ರಾಂಡ್‌ಗಳು ಈಗ ಭಾರತದಲ್ಲಿ ಬ್ರಾಂಡ್‌ಗಳ ಅಧಿಕೃತ ಪಾಲುದಾರರಾಗಿದ್ದಾರೆ. ಶೀಘ್ರದಲ್ಲೇ ಅದು ಜಿಯೋ ವರ್ಲ್ಡ್ ಪ್ಲಾಜಾ ಮಾಲ್‌ನಲ್ಲಿ ತನ್ನ ಮಳಿಗೆಗಳನ್ನು ತೆರೆಯಲಿದೆ. 

ಮುಂಬೈನ BKCಯಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾ ಭಾರತದ ಅತಿದೊಡ್ಡ ಐಷಾರಾಮಿ ಮಾಲ್ ಆಗಿದೆ. ಕೆಲವು ವಾರಗಳ ಹಿಂದೆ ಉದ್ಘಾಟನೆಗೊಂಡ ಈ ಮಾಲ್ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್, ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಭಾರತದಲ್ಲಿ ವಿದೇಶಿ ಬ್ರ್ಯಾಂಡ್ ಪರಿಚಯಿಸುತ್ತಿರುವ ಬಗ್ಗೆ ಮಾತನಾಡಿದ SMCPನ ಸಿಇಒ ಇಸಾಬೆಲ್ಲೆ ಗೈಚೋಟ್, 'ಭಾರತದಲ್ಲಿ ಸಾಕಷ್ಟು ಐಷಾರಾಮಿ ಫ್ಯಾಷನ್ ಲೇಬಲ್‌ಗಳು ಲಭ್ಯವಿಲ್ಲ ಆದ್ದರಿಂದ ನಾವು ನಮ್ಮ ಬ್ರ್ಯಾಂಡ್‌ನ್ನು ಪರಿಚಯಿಸಲು ಇದು ಸರಿಯಾದ ಸಮಯ ಎಂದು ಅಂದುಕೊಂಡಿದ್ದೇವೆ' ಎಂದು ತಿಳಿಸಿದರು.

ರಿಲಯನ್ಸ್‌-SMCP ಫ್ಯಾಷನ್‌ ಬ್ರ್ಯಾಂಡ್‌ ಜೊತೆ ಮಾಡಿರುವ ಆರ್ಥಿಕ ನಿಯಮಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಆದರೆ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ SMCP ಬ್ರಾಂಡ್‌ಗಳನ್ನು ಮಾರಾಟ ಮಾಡುವ ಸುಮಾರು 10 ಮಳಿಗೆಗಳನ್ನು ತೆರೆಯಲು ರಿಲಯನ್ಸ್ ಯೋಜಿಸಿದೆ.

ಜಿಮ್ಮಿ ಚೂ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ವರ್ಸೇಸ್, ಮೈಕೆಲ್ ಕಾರ್ಸ್, ಬ್ರೂಕ್ಸ್ ಬ್ರದರ್ಸ್, ಅರ್ಮಾನಿ ಎಕ್ಸ್‌ಚೇಂಜ್, ಬರ್ಬೆರಿ ಮತ್ತು ಇತರ ಅನೇಕ ಜಾಗತಿಕ ಬ್ರ್ಯಾಂಡ್‌ಗಳು ರಿಲಯನ್ಸ್ ರಿಟೇಲ್ ಪಾಲುದಾರ ಬ್ರಾಂಡ್‌ನಂತೆ ಭಾರತದಲ್ಲಿ ಲಭ್ಯವಿದೆ.
 

78 ಕೋಟಿ ಸ್ಟೋರ್‌ ಫುಲ್‌ಫಾಲ್‌ ಮತ್ತು 100 ಕೋಟಿಗೂ ಹೆಚ್ಚು ವಹಿವಾಟುಗಳೊಂದಿಗೆ, ರಿಲಯನ್ಸ್ ರಿಟೇಲ್ ವಿಶ್ವದ ಅತಿ ಹೆಚ್ಚು ಭೇಟಿ ನೀಡಿದ ಟಾಪ್ 10 ಮಳಿಗೆಗಳಲ್ಲಿ ಒಂದಾಗಿದೆ. ಜಾಗತಿಕ ಟಾಪ್ 100 ಪಟ್ಟಿಯಲ್ಲಿನ ಏಕೈಕ ಭಾರತೀಯ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿದೆ.

ಈ ಮೈಲಿಗಲ್ಲನ್ನು ತಲುಪಲು ಕಂಪನಿಯು ಕಳೆದ 2 ವರ್ಷಗಳಲ್ಲಿ 82,646 ಕೋಟಿ ರೂ. ಹೂಡಿಕೆ ಮಾಡಿದೆ. ಎಲ್ಲಾ  ಹೂಡಿಕೆಗಳ ನಂತರ, ರಿಲಯನ್ಸ್ ರಿಟೇಲ್‌ನ ಪ್ರಸ್ತುತ ಸ್ಟೋರ್ ಆದಾಯವು 18,040 ಕೋಟಿ ರೂ. ಮೀರುತ್ತದೆ.

click me!