ಸೆಲೆಬ್ರೆಟಿಗಳಿಂದ ಐಷಾರಾಮಿ ಉಡುಗೊರೆ ಪಡೆದ ಅನಂತ್-ರಾಧಿಕಾ ಮರ್ಚೆಂಟ್‌, 5 ಕೋಟಿ ಮೌಲ್ಯದ ಗಿಫ್ಟ್ ಕೊಟ್ಟ ಶಾರುಖ್!

First Published | Mar 10, 2024, 2:49 PM IST

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಪೂರ್ವ ವಿವಾಹದ ಹಬ್ಬಗಳು ಮಾರ್ಚ್ 3 ರಂದು ಮುಕ್ತಾಯಗೊಂಡವು. ಪ್ರಪಂಚದಾದ್ಯಂತದ ಸುಪ್ರಸಿದ್ಧ ವ್ಯಕ್ತಿಗಳು ,  ಭಾರತೀಯ ಚಿತ್ರರಂಗದ ಸ್ಟಾರ್ ಗಳು, ಕ್ರೀಡಾಪಟುಗಳು, ಉದ್ಯಮಿಗಳು ಈ ಹಬ್ಬಕ್ಕಾಗಿ ಗುಜರಾತ್‌ನಲ್ಲಿ ಜಮಾಯಿಸಿದ್ದರು. ನವ ವಧುಗಳಿಗೆ ಈ ವೇಳೆ ಏನೆಲ್ಲ ಉಡುಗೊರೆ ಸಿಕ್ಕಿತು ಗೊತ್ತಾ?

ಐಷಾರಾಮಿ ಮನೆತನದ ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಅತ್ಯಂತ ಆಕರ್ಷಕ ಉಡುಗೊರೆಗಳನ್ನು ಪಡೆದಿದ್ದಾರೆ. ವಿವಾಹಪೂರ್ವ ಈವೆಂಟ್ ನಲ್ಲಿ ಸೆಲೆಬ್ರೆಟಿಗಳು, ಗಣ್ಯರು ಬೆಲೆಬಾಳುವ ಉಡುಗೊರೆಗಳನ್ನು ನೀಡಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಇಬ್ಬರಿಗೂ ಬಾಲಿವುಡ್ ನ ಹಲವು ಗಣ್ಯರು ಮತ್ತು ಕ್ರೀಡಾ ವ್ಯಕ್ತಿಗಳು ದುಬಾರಿ ಉಡುಗೊರೆಗಳನ್ನು ನೀಡಿ, ಅವರ ವಿವಾಹ ಪೂರ್ವ ಸಮಾರಂಭಗಳಿಗೆ ಶುಭಹಾರೈಸಿದ್ದಾರೆ. 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ರಾಧಿಕಾ ಮರ್ಚೆಂಟ್‌ಗೆ ಗುಸ್ಸಿ ಬ್ರಾಂಡ್‌ನಿಂದ ವಜ್ರದಿಂದ ಮಾಡಿದ ಸುಂದರವಾದ ಕ್ಲಚ್ ಮತ್ತು ಅನಂತ್ ಅಂಬಾನಿಗೆ ಏರ್ ಜೋರ್ಡಾನ್ ಶೂಗಳನ್ನು ಉಡುಗೊರೆಯಾಗಿ ನೀಡಿದರು.  

Tap to resize

 ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಅನಂತ್ ಅಂಬಾನಿಗಾಗಿ ವಿಶೇಷವಾಗಿ ತಯಾರಿಸಿದ ದುಬಾರಿ ಕಸ್ಟಮೈಸ್ ಮಾಡಿದ ವಾಚ್ ಮತ್ತು ರಾಧಿಕಾ ಮರ್ಚೆಂಟ್‌ಗೆ ವಜ್ರದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿದರು. ಮತ್ತೊಂದೆಡೆ, ಶಾರುಖ್ ಖಾನ್ ದಂಪತಿಗೆ ಮರ್ಸಿಡಿಸ್ ಬೆಂಜ್ 300 ಎಸ್‌ಎಲ್‌ಆರ್ ಅನ್ನು ಉಡುಗೊರೆಯಾಗಿ ನೀಡಿದರು, ಇದರ ಬೆಲೆ ಸುಮಾರು 5 ಕೋಟಿ ರೂ. 

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಂಪತಿಗೆ ಚಿನ್ನ ಮತ್ತು ವಜ್ರದ ಗಣೇಶ ಮತ್ತು ಲಕ್ಷ್ಮಿ ವಿಗ್ರಹಗಳನ್ನು ಉಡುಗೊರೆಯಾಗಿ ನೀಡಿದರು. ಕಿಯಾರಾ ಅಡ್ವಾಣಿ ಇಶಾ ಅಂಬಾನಿಯ ಬಾಲ್ಯದ ಗೆಳತಿ. ಮತ್ತೊಂದೆಡೆ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಧುವಿಗೆ ಡೈಮಂಡ್ ಬ್ರೇಸ್ಲೆಟ್ ಮತ್ತು ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದರು. 

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ಕಸ್ಟಮೈಸ್ ಮಾಡಿದ ಡೈಮಂಡ್ ರೋಲೆಕ್ಸ್ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡಿದರು, ಇದರ ಮೌಲ್ಯ 1 ಕೋಟಿ ರೂ. 

ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷ ಜುಲೈ 12 ರಂದು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾಗಲಿದ್ದಾರೆ. 
 

Latest Videos

click me!