ಮಾರುಕಟ್ಟೆಗೆ ಸನ್‌ಸ್ಕ್ರೀನ್‌ ಬಿಟ್ಟ ದೈತ್ಯ HUL ಟೀಕಿಸಿದ ಗಜಲ್! ಯಾರೀಕೆ?

Published : Apr 15, 2025, 06:20 PM ISTUpdated : Apr 15, 2025, 06:39 PM IST

ಮಾಮಅರ್ಥ್‌ನ ಗಜಲ್ ಅಲಘ್, ಹಿಂದೂಸ್ತಾನ್ ಯೂನಿಲಿವರ್‌ನೊಂದಿಗೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಸನ್‌ಸ್ಕ್ರೀನ್ ಪರೀಕ್ಷಾ ಮಾನದಂಡಗಳ ಬಗ್ಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

PREV
19
ಮಾರುಕಟ್ಟೆಗೆ ಸನ್‌ಸ್ಕ್ರೀನ್‌ ಬಿಟ್ಟ ದೈತ್ಯ HUL ಟೀಕಿಸಿದ ಗಜಲ್! ಯಾರೀಕೆ?

 ಶಾರ್ಕ್ ಟ್ಯಾಂಕ್ ಇಂಡಿಯಾ  ಮೂಲಕ ಗುರುತಿಸಿಕೊಂಡಿರುವ ಮತ್ತು ಮಾಮಅರ್ಥ್ ಸಹ-ಸಂಸ್ಥಾಪಕ ಗಜಲ್ ಅಲಘ್ ಅವರು  ಮೊದಲು ಸ್ಪರ್ಧಾತ್ಮಕ ಮಾರುಕಟ್ಟೆ ಜಗತ್ತಿಗೆ ಕಾಲಿಟ್ಟಾಗ ಅವರು ಕೇವಲ ಯುವ ಉದ್ಯಮಿಯಾಗಿರಲಿಲ್ಲ. ಹೊಸ ತಾಯಿಯೂ ಆಗಿದ್ದರು. ಕೇವಲ 20 ವರ್ಷ ವಯಸ್ಸಿನಲ್ಲಿ, ನವಜಾತ ಶಿಶುವನ್ನು ಬೆಳೆಸುವ ರೀತಿಯಲ್ಲಿವೇ ವ್ಯವಹಾರದ ಜಗತ್ತಿನಲ್ಲಿ ಸಂಚರಿಸುತ್ತಿದ್ದರು,  ಅವರು  ಪ್ರತಿರೋಧದ ಬಿರುಗಾಳಿಯನ್ನೇ ಎದುರಿಸಿದರು. ಈಗ ಹಿಂದೂಸ್ತಾನ್ ಯೂನಿಲಿವರ್ ಬಗ್ಗೆ ಮಾತನಾಡಿ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಏನಿದು ಮಾರುಕಟ್ಟೆ ವಿವಾದ ಇಲ್ಲಿದೆ ಮಾಹಿತಿ

29

 ಅಲಘ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಆರಂಭಿಕ ದಿನಗಳ ಬಗ್ಗೆ ಬರೆದುಕೊಂಡಿದ್ದಾರೆ.  ಕಚೇರಿಯಲ್ಲಿ ನಿಗದಿತ ಸಮಯವಿಲ್ಲದ ಯುವತಿಯ ಬಳಿ  ದುಡಿಯಲು ಬಯಸದ ಕಾರಣ ಹಲವಾರು ಉದ್ಯೋಗಿಗಳು ಕಂಪನಿಯನ್ನು ಹೇಗೆ ತೊರೆದರು ಎಂಬುದನ್ನು ಅವರು ನೆನಪಿಸಿಕೊಂಡರು. ತುಂಬಾ ಚಿಕ್ಕವಳು, ಅನುಭವವಿಲ್ಲ ಮತ್ತು ಸ್ಫೂರ್ತಿದಾಯಕವಲ್ಲದ ಕ್ಯಾಂಡಿಡೇಟ್‌ ಎಂದು ಉದ್ಯೋಗಿಗಳ ಅವಳ ಬಗ್ಗೆ ಹಿಂದಿನಿಂದ ಮಾತನಾಡುತ್ತಿದ್ದರು. ಇದು ಅವರಿಗೆ ತುಂಬಾ ನೋವುಂಟು ಮಾಡಿತ್ತು. 

39

ಇವೆಲ್ಲ ಅವಮಾನಗಳನ್ನು ಮೆಟ್ಟಿನಿಲ್ಲಬೇಕೆಂದು ದೃಢ ನಿಶ್ಚಯ ಮಾಡಿಕೊಂಡರು. ನಾನು ಹೆಚ್ಚು ಶ್ರಮಿಸಿದೆ. ನನಗೆ ಸಾಧ್ಯವಾದ ಎಲ್ಲವನ್ನೂ ಕಲಿತಿದ್ದೇನೆ. ನನಗೆ ಅನಿಸದಿದ್ದರೂ ಸಹ ನಾನು ಆತ್ಮವಿಶ್ವಾಸದಿಂದ ಕಾಣಿಸಿಕೊಂಡೆ ಎಂದು ಬರೆದುಕೊಂಡಿದ್ದಾರೆ. ಕೇವಲ ಸಂಸ್ಥಾಪಕಿಯಾಗಿ ಅಲ್ಲ, ತಾಯಿ ಮತ್ತು ನಾಯಕಿಯಾಗಿ ಆತ್ಮವಿಶ್ವಾಸದಿಂದ ಬೆಳೆಯಲು ಪ್ರಾರಂಭಿಸಿದರು. ಅಲಘ್‌ಗೆ, ಒಂದು ಕಾಲದಲ್ಲಿ ವೈಫಲ್ಯದಂತೆ ಭಾವಿಸಿದ್ದದ್ದು ಈಗ ಬೆಳವಣಿಗೆಯಾಗಿ ನಿಂತಿದೆ. ಪ್ರಯಾಣವು ಕೇವಲ ವೈಯಕ್ತಿಕ ಗೆಲುವಲ್ಲ  ಇದು ಮುಂದಿನ ಪೀಳಿಗೆಯ ಮಹಿಳಾ ನಾಯಕರು ತಮ್ಮ ಧ್ವನಿಯನ್ನು ನಂಬಲು ಮತ್ತು ತಮ್ಮದೇ ಆದ ಜಾಗವನ್ನು ಹೊಂದಲು ಕಲಿಯಲು ಪ್ರೋತ್ಸಾಹವಾಗಿದೆ ಎಂದಿದ್ದಾರೆ.
 

49

 ಮಮ ಅರ್ಥ್ (MamaEarth)ನ ಸಹ-ಸಂಸ್ಥಾಪಕರಾದ ಗಜಲ್ ಅಲಾಘ್ ಅವರು ಇಂದು ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಶಾರ್ಕ್ ಟ್ಯಾಂಕ್ ಇಂಡಿಯಾ ಶೋನಲ್ಲಿ ತೀರ್ಪುಗಾರರಾದ ಕಾರಣದಿಂದಾಗಿ ಗಜಲ್ ಪ್ರಸಿದ್ಧರಾದರು, ಆದರೆ ಇದಕ್ಕೂ ಮುಂಚೆಯೇ ಅವರು ಶ್ರೀಮಂತ ಉದ್ಯಮಿಯಾಗಿದ್ದರು. MamaEarth ಎನ್ನುವುದು ವೈಯಕ್ತಿಕ ಆರೈಕೆಯ ಸ್ಪೆಕ್ಟ್ರಮ್‌ನಾದ್ಯಂತ ಸರಕುಗಳನ್ನು ಉತ್ಪಾದಿಸುವ ಬ್ರ್ಯಾಂಡ್ ಆಗಿದೆ ಮತ್ತು ತ್ವಚೆಯ ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವವರಿಗೆ ಇದು ಸಹಕಾರಿಯಾಗಿದೆ. ವರುಣ್ ಮತ್ತು ಗಜಲ್ ಸಂಸ್ಥೆಯು 25 ಲಕ್ಷ ರೂಪಾಯಿ ಹೂಡಿಕೆಯಿಂದ ಈಗ 9800 ಕೋಟಿ ರೂಪಾಯಿಗೆ ಬೆಳೆದಿದೆ. Mamaearth ಮೊದಲು ಪ್ರಾಥಮಿಕವಾಗಿ ಆನ್‌ಲೈನ್ ಮೂಲಕ ತನ್ನ ಮಾರುಕಟ್ಟೆಯನ್ನು ಬೆಳೆಸಿತು.  ಈಗ ಆಫ್‌ಲೈನ್ ನಲ್ಲೂ ಬೆಳೆಯುತ್ತಿದೆ.

59

ಹಿಂದೂಸ್ತಾನ್ ಯೂನಿಲಿವರ್ vs ಗಜಲ್ ಅಲಾಘ್!
ಕಳೆದ ಕೆಲವು ವರ್ಷಗಳಿಂದ ಭಾರತದ ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳ (FMCG) ವಲಯದಲ್ಲಿ ಪ್ರತಿಸ್ಪರ್ಧಿಗಳಿಗೆ ಟಕ್ಕರ್ ಕೊಡಲು ಆನ್‌ಲೈನ್ ಮೂಲಕ ತಮ್ಮ ಉಪಸ್ಥಿತಿಯನ್ನು ಬಳಸಿಕೊಂಡು ಹೊಸ ಯುಗದ ನೇರ-ಗ್ರಾಹಕ (D2C) ಬ್ರ್ಯಾಂಡ್‌ಗಳು ಬಹಿರಂಗವಾಗಿ ಕಂಪೆನಿಗೆ ಸ್ಪರ್ಧೆ ಒಡ್ಡುತ್ತಿದೆ. ಅಂತಹ  ಒಂದು ಕಂಪೆನಿ ಅಂದರೆ ಅದು ಜನಪ್ರಿಯ ಪರ್ಸನಲ್‌ ಕೇರ್ ಬ್ಯೂಟಿ ಬ್ರ್ಯಾಂಡ್‌ಗಳಾದ ಮಾಮಾಅರ್ಥ್ ಮತ್ತು ಡರ್ಮಾ ಕಂಪನಿಯನ್ನು ಮುನ್ನಡೆಸುತ್ತಿರುವ ಹೊನಸಾ ಕನ್ಸ್ಯೂಮರ್‌ನ ಸಹ-ಸಂಸ್ಥಾಪಕಿ ಗಜಲ್ ಅಲಾಘ್.

69

ಮಾರುಕಟ್ಟೆಯಲ್ಲಿ ನಾಯಕನಾಗಿ ಮೆರೆಯುತ್ತಿರುವ ಹಿಂದೂಸ್ತಾನ್ ಯೂನಿಲಿವರ್ (HUL) ಜೊತೆ ಮಾತಿನ ಯುದ್ಧದಲ್ಲಿದ್ದಾರೆ . ದೊಡ್ಡ ಸಾಂಪ್ರದಾಯಿಕ FMCG ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ  ಪ್ರತಿಸ್ಪರ್ಧಿ ಇಲ್ಲದ ಕಾರಣಕ್ಕಾಗಿ ಸಂತೃಪ್ತವಾಗಿವೆ ಎಂದು ಹೇಳಿಕೊಂಡಿದ್ದಾರೆ.  ಇದರ ಜೊತೆಗೆ ಇತ್ತೀಚೆಗೆ ಡಿಜಿಟಲ್‌  ಫ್ಯಾಟ್‌ಫಾರ್ಮ್ ಮೂಲಕ ತನ್ನ ಮೊದಲ ಸನ್‌ಸ್ಕ್ರೀನ್ ಬ್ರ್ಯಾಂಡ್‌ ಅನ್ನು ಪರಿಣಾಮಕಾರಿಯಯಾಗಿ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿದ  ಹಿಂದೂಸ್ತಾನ್ ಯೂನಿಲಿವರ್  ಅನ್ನು ಟೀಕಿಸಿದ್ದಾರೆ.

 

79

 ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಅಲಘ್, ಹೊನಾಸಾ ಬ್ರ್ಯಾಂಡ್ ಡರ್ಮಾ ಕಂಪನಿಯು ಈಗಾಗಲೇ ಅನುಸರಿಸಿಕೊಂಡಿರುವ SPF (ಸೂರ್ಯನ ರಕ್ಷಣೆ ಅಂಶ) ಪರೀಕ್ಷಾ ಮಾನದಂಡವನ್ನು ಅಳವಡಿಸಿಕೊಂಡಿದ್ದಕ್ಕಾಗಿ  HUL ನ Lakme ಅನ್ನು ಅಭಿನಂದನೆ ಎಂದು ಟೀಕಿಸಿದ್ದಾರೆ. ಯಾವುದೇ ಮಾರುಕಟ್ಟೆಗೆ ಉತ್ತಮ  ಪ್ರತಿಸ್ಪರ್ಧಿ ಇರುವುದು ಯಾವಾಗಲೂ ಉತ್ತಮವಾಗಿದೆ. ಇದು ಬ್ರ್ಯಾಂಡ್‌ಗಳನ್ನು ನಿದ್ರಾಹೀನತೆ, ಆಲಸ್ಯದಿಂದ ಎಚ್ಚೆತ್ತುಕೊಳ್ಳವಂತೆ ಮಾಡುತ್ತದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಹೊಸತನದ ಪ್ರೊಡಕ್ಟ್ ಅನ್ನು ತರುತ್ತದೆ.  ಲ್ಯಾಕ್ಮೆ ಅಂತಿಮವಾಗಿ ಇನ್-ವಿವೋ ಪರೀಕ್ಷಿತ SPF 50 ಕ್ಲಬ್‌ಗೆ ಸ್ವಾಗತ," ಎಂದು ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ. ಆನ್‌ಲೈನ್‌ನಲ್ಲಿ ಹೆಚ್ಚು ಮಾರಾಟವಾಗುವ ಸನ್‌ಸ್ಕ್ರೀನ್‌ಗಳು ಯಾವುದು ಎಂದು ಅಭಿಯಾನ ಮಾಡಿದ ಬಗ್ಗೆ ಸತ್ಯಾಸತ್ಯತೆಯನ್ನು ಪ್ರಶ್ನಿಸುವ HUL ನ ಇತ್ತೀಚಿನ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿ  ಈ  ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

89

 ಇದರ ಮಧ್ಯೆ HUL ನ ಸೌಂದರ್ಯ ಮತ್ತು ಯೋಗಕ್ಷೇಮದ ಕಾರ್ಯನಿರ್ವಾಹಕ ನಿರ್ದೇಶಕ ಹರ್ಮನ್ ಧಿಲ್ಲನ್  ಮಾಧ್ಯಮಕ್ಕೆ ತಿಳಿಸಿದ್ದು, ಲ್ಯಾಕ್ಮೆ 2015 ರಿಂದ ಸನ್‌ಸ್ಕ್ರೀನ್‌ನಲ್ಲಿ ಜಾಗತಿಕವಾಗಿ "ಗೋಲ್ಡ್ ಸ್ಟಾಂಡರ್ಡ್" ನಲ್ಲಿ  ಇನ್-ವಿವೋ ಪರೀಕ್ಷೆಯನ್ನು ಮಾಡುತ್ತಿದೆ. "ನಾವು ಕೆಲವು ಆನ್‌ಲೈನ್ ಬೆಸ್ಟ್ ಸೆಲ್ಲರ್‌ಗಳು ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳಲ್ಲಿ ಇನ್-ವಿವೋ ಪರೀಕ್ಷೆಗಳನ್ನು ಮಾಡಲು ಪ್ರಾರಂಭಿಸಿದಾಗ, ಅವುಗಳಲ್ಲಿ ಕೆಲವು ಅವರು ಹೇಳಿದನ್ನು ಗ್ರಾಹಕರಿಗೆ ತಲುಪಿಸುವುದಿಲ್ಲ ಎಂದು  ತಿಳಿದುಕೊಂಡೆವು. ಆಗ ನಾವು ನಮ್ಮ ಅಭಿಯಾನದೊಂದಿಗೆ ನೇರ ಪ್ರಸಾರ ಮಾಡಿದ್ದೇವೆ" ಎಂದು ಧಿಲ್ಲನ್  ಹೇಳಿದರು. ಲ್ಯಾಕ್ಮೆ ಜಾಹೀರಾತಿನ ಪ್ರಕಾರ, ಆನ್‌ಲೈನ್ ಬ್ರ್ಯಾಂಡ್‌ಗಳು ತಮ್ಮ ಸನ್‌ಸ್ಕ್ರೀನ್‌ಗಾಗಿ 50 SPF ಅನ್ನು ಪಡೆದುಕೊಂಡವು, ಆದರೆ ಪರೀಕ್ಷೆಯ ನಂತರ ಕೇವಲ 20 SPF ಎಂದು ಕಂಡುಬಂದಿದೆ.

99

 ಸೌಂದರ್ಯ ಮತ್ತು ಯೋಗಕ್ಷೇಮ ವ್ಯವಹಾರವು ಪ್ರಸ್ತುತ HUL ನ ಅತಿದೊಡ್ಡ ಲಾಭ ಉತ್ಪಾದಕವಾಗಿದೆ. ಭಾರತದ 2,000 ಕೋಟಿ ರೂ. ಸನ್‌ಸ್ಕ್ರೀನ್ ಮಾರುಕಟ್ಟೆಯಲ್ಲಿ, HUL ಸುಮಾರು ನಾಲ್ಕನೇ  ಒಂದು ಭಾಗದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೆ ಆನ್‌ಲೈನ್ ಮಾರಾಟದಲ್ಲಿ ಹೊನಾಸಾದ ಮಾಮಅರ್ಥ್ ಮತ್ತು ಡರ್ಮಾ ಕಂಪನಿ ಸೇರಿದಂತೆ ಹಲವಾರು D2C ಬ್ರ್ಯಾಂಡ್‌ಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ.

Read more Photos on
click me!

Recommended Stories