ಹಸಿ ಹಾಲಿನ ಜೊತೆ ಇದನ್ನ ಬೆರೆಸಿ ಮುಖಕ್ಕೆ ಹಚ್ಚಿದ್ರೆ, ಆಲಿಯಾ ಭಟ್ ನಂತಹ ಹೊಳಪು ಸಿಗುತ್ತೆ!

Published : Apr 14, 2025, 05:32 PM ISTUpdated : Apr 23, 2025, 03:15 PM IST

ನೀವು ಕೂಡ ಆಲಿಯಾಳಂತೆ ಹೊಳೆಯುವ ತ್ವಚೆಯನ್ನು ಬಯಸಿದ್ರೆ, ಹಸಿ ಹಾಲಿನಲ್ಲಿ ಈ ಒಂದು ವಸ್ತುವನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಆಮೇಲೆ ರಿಸಲ್ಟ್ ನೋಡಿ.       

PREV
16
ಹಸಿ ಹಾಲಿನ ಜೊತೆ ಇದನ್ನ ಬೆರೆಸಿ ಮುಖಕ್ಕೆ ಹಚ್ಚಿದ್ರೆ, ಆಲಿಯಾ ಭಟ್ ನಂತಹ ಹೊಳಪು ಸಿಗುತ್ತೆ!

ಆಲಿಯಾ ಭಟ್ (Alia Bhatt) ಅವರು ಅಪ್ಪಟ ಸುಂದರಿ. ಅವರ ಸುಂದರ ತ್ವಚೆ ನೋಡಿದಾಗ, ಅಯ್ಯೋ ನಾವು ಕೂಡ ಹಾಗೆಯೇ ಇರ್ತಿದ್ರೆ, ಎಷ್ಟು ಚೆನ್ನಾಗಿರ್ತಿತ್ತು ಅನಿಸೋದು ಖಚಿತಾ. ನಿಮಗೂ ಅವರಂತಹ ತ್ಬಚೆ ಬೇಕೇ? ಹಾಗಿದ್ರೆ ಆಲಿಯಾ ಭಟ್ ಅದ್ಭುತ ತ್ವಚೆ ರಹಸ್ಯವನ್ನು ತಿಳಿದುಕೊಳ್ಳಲು ರೆಡೀನಾ? 

26

ಆಲಿಯಾ ಭಟ್‌ರಂತೆ ಹೊಳೆಯುವ ಮತ್ತು ಸುಂದರವಾದ ಚರ್ಮವನ್ನು (beautiful skin) ಪಡೆಯಬೇಕು ಅಂದ್ರೆ ನೀವು ಹಸಿ ಹಾಲನ್ನು ಬಳಸಬೇಕು. ಹಸಿ ಹಾಲು ಮಾತ್ರ ಅಲ್ಲ, ಅದರ ಜೊತೆಗೆ ನೀವು ಏನನ್ನು ಬಳಸಿದ್ರೆ ತ್ವಚೆ ಚೆನ್ನಾಗಿರುತ್ತೆ ನೋಡೋಣ. 
 

36

ಸುಂದರವಾದ ಬಿಳಿಯಾದ ತ್ವಚೆಗಾಗಿ ನಿವು ಕಷ್ಟಪಡಬೇಕಾಗಿಲ್ಲ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ತ್ವಚೆಯ ಅಂದ ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟು.  2 ಟೀ ಚಮಚ ಕಡಲೆ ಹಿಟ್ಟಿನಲ್ಲಿ 2-4 ಹನಿ ರೋಸ್ ವಾಟರ್ ಮತ್ತು ಸ್ವಲ್ಪ ಹಸಿ ಹಾಲು (row milk) ಬೆರೆಸಿ ಪೇಸ್ಟ್ ಮಾಡಿ.

46

ಈಗ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ, ನಿಮ್ಮ ಮುಖದಲ್ಲಿ ತಕ್ಷಣ ಹೊಳಪು ಕಾಣಲು ಆರಂಭಿಸುತ್ತೆ. ಹಾಲು ಮತ್ತು ಕಡಲೆಹಿಟ್ಟಿನಲ್ಲಿ ಮುಖಕ್ಕೆ ಮಾಯಿಶ್ಚರೈಸ್ (moisturiser) ಮಾಡುವ ಹಾಗೂ, ಮುಖಕ್ಕೆ ಹೊಳಪು ನೀಡುವ ಶಕ್ತಿ ಇದೆ. 
 

56

ಇದಲ್ಲದೇ ನೀವು ಹಸಿ ಹಾಲು ಮತ್ತು ಕೇಸರಿಯಿಂದ ಮಾಡಿದ ಫೇಸ್ ಮಾಸ್ಕ್ ಕೂಡ ಬಳಕೆ ಮಾಡಬಹುದು. ಇದರಿಂದ ಚರ್ಮದ ಆರೋಗ್ಯವನ್ನು (healthy skin) ಸುಧಾರಣೆಯಾಗುತ್ತೆ, ಅಲ್ಲದೇ ಸೌಂದರ್ಯ ಹೆಚ್ಚುತ್ತೆ. 
 

66

ಇದಕ್ಕಾಗಿ, ಹಸಿ ಹಾಲಿನಲ್ಲಿ 1-2 ಎಸಳು ಕೇಸರಿ ಮತ್ತು 1 ಚಿಟಿಕೆ ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ಮುಖ ತೊಳೆಯಿರಿ. ಆಲಿಯಾ ಭಟ್ ರಂತಹ ಸುಂದರವಾದ ಕಲೆ ರಹಿತ ತ್ವಚೆ ನಿಮ್ಮದಾಗುತ್ತೆ, 
 

Read more Photos on
click me!

Recommended Stories