ಅನ್ನದ ಜೊತೆ ಇದರ ಮಿಕ್ಸ್‌: ಅರ್ಧ ಗಂಟೆಯಲ್ಲಿ ಮೈಯೆಲ್ಲಾ ಫಳ ಫಳ.. ಆಯುರ್ವೇದ ತಜ್ಞರ ಸಲಹೆ ಕೇಳಿ..

Published : Aug 18, 2025, 08:53 PM IST

ಅನ್ನದ ಜೊತೆ ಈ ಒಂದು ಪದಾರ್ಥ ಮಿಕ್ಸ್‌ ಮಾಡಿ ಲೇಪಿಸಿದರೆ ಅರ್ಧ ಗಂಟೆಯಲ್ಲಿ ಮ್ಯಾಜಿಕ್‌ ನೋಡಿ... ಫಳ ಫಳ ಹೊಳೆಯುವ ತ್ವಚೆಗೆ ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ... 

PREV
17
ನೋಡುಗರ ಕಣ್ಣಲ್ಲಿದೆ ಸೌಂದರ್ಯ

ಅಂದ ಎನ್ನುವುದು ನೋಡುಗರ ಕಣ್ಣಿನಲ್ಲಿ ಇರುತ್ತದೆ ಎಂದು ಹೇಳುವುದು ನಿಜವಾದರೂ, ಹಲವರಿಗೆ ಬಿಳಿಯಾಗುವ ಆಸೆ. ಬಣ್ಣ ಬಿಳುಪಿದ್ದ ಮಾತ್ರಕ್ಕೆ ಅದು ಸೌಂದರ್ಯ ಆಗುವುದಿಲ್ಲ ಎನ್ನುವುದು ಅಷ್ಟೇ ದಿಟ. ಕೃಷ್ಣವರ್ಣದ ಅದೆಷ್ಟೋ ಸುಂದರಿಯರು ನಮ್ಮ ಮುಂದೆಯೇ ಇದ್ದಾರೆ.

27
ಶ್ವೇತ ವರ್ಣಕ್ಕೆ ಡಿಮಾಂಡ್​

ಆದರೆ ಬಣ್ಣದ ವಿಷಯ ಬಂದಾಗ ಅದ್ಯಾಕೋ ಬಿಳಿ ಬಣ್ಣಕ್ಕೆ ಅಷ್ಟು ಆದ್ಯತೆ ಕೊಡುವುದು ತಲೆತಲಾಂತರಗಳಿಂದ ನಡೆದು ಬಂದಿದೆ. ಅದಕ್ಕೆ ಇಂಬುಕೊಡುವುದು ಚಿತ್ರ ತಾರೆಯರು ಎನ್ನುವುದೂ ಅಷ್ಟೇ ದಿಟ.ಆದ್ದರಿಂದ ತಮಗೂ ಶ್ವೇತ ವರ್ಣ ಬರಬೇಕು, ಇದಾಗಲೇ ಬಿಳಿ ಬಣ್ಣ ಹೊಂದಿದ್ದರೂ ಅದು ಫಳ ಫಳ ಎನ್ನಬೇಕು ಎನ್ನುವುದು ಬಹುತೇಕ ಮಹಿಳೆಯರ, ಹೆಣ್ಣುಮಕ್ಕಳ ಆಸೆ. ಅಷ್ಟಕ್ಕೂ ಇದು ಹೆಣ್ಣುಮಕ್ಕಳ ಆಸೆ ಎನ್ನುವುದೂ ತಪ್ಪು ಬಿಡಿ

37
ಗಂಡುಮಕ್ಕಳೂ ಮುಂದು

ಇತ್ತೀಚಿನ ದಿನಗಳಲ್ಲಿ ಸೌಂದರ್ಯದ ವಿಷಯ ಬಂದರೆ ಗಂಡುಮಕ್ಕಳು ಹೆಣ್ಣುಮಕ್ಕಳಿಗಿಂತಲೂ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಇದೇ ಕಾರಣಕ್ಕೆ ಪುರುಷರ ಬ್ಯೂಟಿ ಸಲೂನ್‌ಗಳು ಕೂಡ ಹೆಣ್ಣುಮಕ್ಕಳ ಸಲೂನ್‌ಗಳಿಗೆ ಪೈಪೋಟಿ ಒಡ್ಡುವ ರೀತಿಯಲ್ಲಿ ತಲೆ ಎತ್ತಿ ನಿಂತಿವೆ.

47
ಮೈಯೆಲ್ಲಾ ಫಳ ಫಳ ಹೊಳೆಯಬೇಕು

ಆ ವಿಷಯ ಬಿಡಿ. ಆದರೆ ತ್ವಚೆ ಬಿಳಿಯಾಗಿ ಕಾಣಬೇಕು, ಮೈಯೆಲ್ಲಾ ಫಳ ಫಳ ಹೊಳೆಯಬೇಕು ಎನ್ನುವವರಿಗೆ ಖ್ಯಾತ ಆಯುರ್ವೇದ ತಜ್ಞ ಹೇಳಿರುವ ಟಿಪ್ಸ್‌ ಇಲ್ಲಿದೆ ನೋಡಿ...

57
ಅಕ್ಕಿ ಮತ್ತು ಅಲೋವೆರಾ

ಇದಕ್ಕೆ ಬೇಕಿರುವುದು ಅಕ್ಕಿ ಮತ್ತು ಅಲೋವಿರಾ (ಲೋಳೇಸರ) ಅಷ್ಟೇ. ಅಕ್ಕಿಯನ್ನು ತೊಳೆದು ಅನ್ನ ಮಾಡಿಕೊಳ್ಳಬೇಕು. ಆದರೆ ಅದನ್ನು ಪೂರ್ತಿಯಾಗಿ ಬೇಯಿಸಬಾರದು. ಅರ್ಧಂಬರ್ಧ ಬೆಂದ ಬಳಿಕ ಅದಕ್ಕೆ ಅಲೋವಿರಾ ಸೇರಿಸಬೇಕು. ಅದನ್ನು ಮಿಕ್ಸಿಯಲ್ಲ ಅಥವಾ ಕೈಯಲ್ಲಿ ಚೆನ್ನಾಗಿ ಪೇಸ್ಟ್‌ ಮಾಡಿಕೊಳ್ಳಬೇಕು.

67
ಅಡಿಯಿಂದ ಮುಡಿಯವರೆಗೆ ಅರ್ಧ ಗಂಟೆ ಮಸಾಜ್‌

ಅಡಿಯಿಂದ ಮುಡಿಯವರೆಗೆ ಅರ್ಧ ಗಂಟೆ ಮಸಾಜ್‌ ಮಾಡಬೇಕು. ನಿಮಗೆ ಮುಖವಷ್ಟೇ ಸಾಕಿದ್ದರೆ ಮುಖಕ್ಕಷ್ಟೇ ಮಸಾಜ್‌ ಮಾಡಿ. ಮತ್ತರ್ಧ ಗಂಟೆ ಹಾಗೆಯೇ ಬಿಡಬೇಕು. ಬಳಿಕ ಇಡೀ ಶರೀರಕ್ಕೆ ಮಸಾಜ್‌ ಮಾಡಿದ್ದರೆ ಬೆಚ್ಚಿಗಿನ ನೀರಿನಿಂದ ಸ್ನಾನ ಮಾಡಿ, ಮುಖಕ್ಕೆ ಆದರೆ, ಅದೇ ನೀರಿನಿಂದ ಮುಖವನ್ನು ವಾಷ್‌ ಮಾಡಿ.

77
ಮೈಯೆಲ್ಲಾ ಫಳ ಫಳ

ದಿನನಿತ್ಯ ಈ ಟಿಪ್ಸ್‌ ಫಾಲೋ ಮಾಡಿದರೆ ಮೈಯೆಲ್ಲಾ ಬಿಳುಪಾಗುವುದು ಮಾತ್ರವಲ್ಲದೇ, ಕಲೆಯೆಲ್ಲಾ ಹೋಗಿ ಫಳ ಫಳ ಹೊಳೆಯುವುದಾಗಿ ಅವರು ಹೇಳಿದ್ದಾರೆ.

Read more Photos on
click me!

Recommended Stories