ಯಂಗ್ ಆಗಿ ಕಾಣಬೇಕಾ? ಬೆಳಗ್ಗೆ 8 ಗಂಟೆಯ ಮೊದಲು ಈ ಕೆಲಸ ಮಾಡಿ!
First Published | Aug 17, 2022, 5:51 PM ISTನಿಮ್ಮ ಮುಖವು ಫ್ರೆಶಾಗಿದ್ದರೆ ಮತ್ತು ನೀವು ಎಜರ್ಜಿಟಿಕ್ ಆಗಿದ್ರೆ, ನಿಮ್ಮ ದಿನವು ಖಂಡಿತವಾಗಿಯೂ ತುಂಬಾ ಚೆನ್ನಾಗಿರುತ್ತೆ ಅಲ್ವಾ? ಆದರೆ ಪ್ರತಿಯೊಬ್ಬರ ಸಮಸ್ಯೆಯೆಂದರೆ ಸಮಯ ಕಡಿಮೆ ಮತ್ತು ಕೆಲಸ ಹೆಚ್ಚು, ಹಾಗಾಗಿ ತಮ್ಮ ಸ್ಕಿನ್ ಕಡೆಗೆ ಗಮನ ಹರಿಸಲು ಅವರಿಗೆ ಸಾಧ್ಯವಾಗೋದಿಲ್ಲ. ಹಾಗಾಗಿ, ಚರ್ಮದ ಬಗ್ಗೆ ಕಾಳಜಿ ವಹಿಸಲು ಏನು ಮಾಡಬೇಕು, ಹೇಗೆ ಇಟ್ಟುಕೊಳ್ಳೋದು ಎಂದು ಎಲ್ಲರ ಪ್ರಶ್ನೆ. ಆದಕ್ಕಾಗಿ ಕೆಲವು ಸುಲಭ ಸಲಹೆಗಳನ್ನು ಹೇಳಲಿದ್ದೇವೆ, ಅದನ್ನು ನೀವು ಅನುಸರಿಸಬಹುದು ಮತ್ತು ಕೆಲವೇ ವಸ್ತುಗಳೊಂದಿಗೆ ಹೆಚ್ಚು ಸಮಯ ತೆಗೆದುಕೊಳ್ಳದೆ ನಿಮ್ಮ ಮುಖದ ಬಗ್ಗೆ ವಿಶೇಷ ಕಾಳಜಿ ವಹಿಸಬಹುದು.