ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಜನ ಏನೇನೋ ಮಾಡ್ತಾರೆ. ಮಾರ್ಕೆಟ್ ನಲ್ಲಿ ಸಿಗೋ ಯಾವ ಕ್ರೀಮ್ ಬಿಡದೆ ಹಚ್ಚೋರು ತುಂಬಾ ಜನ ಇರ್ತಾರೆ. ಆದ್ರೆ, ಖರ್ಚಿಲ್ಲದೆ ಕೂಡ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಅದೇನು ಅಂತಂದ್ರೆ ಮೊಸರು. ಕೇವಲ ಮೊಸರು ಹಚ್ಚಿದ್ರೂ ಮುಖ ಗ್ಲೋ ಆಗುತ್ತೆ. ಹೇಗೆ ಅಂತ ತಿಳ್ಕೊಳ್ಳೋಣ...
24
ಮುಖದ ಮೇಲೆ ಟ್ಯಾನ್ ಆಗಿದ್ರೆ
ಮೊಸರಿನಿಂದ ಮುಖಕ್ಕೆ ಮಸಾಜ್ ಮಾಡಬೇಕು. 3 ಚಮಚ ಮೊಸರಿಗೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ನೀರಿನಿಂದ ಮುಖ ತೊಳೆದ್ರೆ ಸಾಕು.
ಗುಲಾಬಿ ನೀರು & ಮೊಸರು: ಮುಖದ ಮೇಲೆ ಟ್ಯಾನ್ ಆಗಿದ್ರೆ ಅಥವಾ ಏನಾದ್ರೂ ರ‍್ಯಾಶಸ್ ಇದ್ರೆ, ಮೊಸರು & ಗುಲಾಬಿ ನೀರು ಮಿಕ್ಸ್ ಮಾಡಿ ಮುಖಕ್ಕೆ ಪ್ಯಾಕ್ ಹಾಕಿ. 15 ನಿಮಿಷ ಬಿಟ್ಟು ನೀರಿನಿಂದ ಮುಖ ತೊಳ್ಕೊಳಿ.
34
ಬಿಸಿಲಿಗೆ ಕಪ್ಪಾದ ಚರ್ಮಕ್ಕೆ
ಬಿಸಿಲಿಗೆ ಕಪ್ಪಾದ ಚರ್ಮಕ್ಕೆ ಮೊಸರು & ಅರಿಶಿನ ಪ್ಯಾಕ್ ಹಚ್ಚಿ. 3 ಚಮಚ ಮೊಸರಿಗೆ ಅರ್ಧ ಚಮಚ ಅರಿಶಿನ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ವಾರಕ್ಕೆ 2-3 ಸಲ ಹಚ್ಚಬಹುದು.
ಮೊಸರು & ಜೇನುತುಪ್ಪ: 2 ಚಮಚ ಮೊಸರಿಗೆ 1 ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಿಂದ ಮುಖ ತೊಳ್ಕೊಳಿ.
ಮೊಸರು & ನಿಂಬೆರಸ: ಎಣ್ಣೆ ಚರ್ಮಕ್ಕೆ ಒಳ್ಳೇದು. 1 ಚಮಚ ಮೊಸರಿಗೆ ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಿಂದ ಮುಖ ತೊಳ್ಕೊಳಿ.
44
ಮೊಸರಿನ ಲಾಭಗಳು
ಟೊಮೆಟೊ ಪೇಸ್ಟ್ & ಮೊಸರು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳ್ಕೊಳಿ.
ಮೊಸರು & ಕಡ್ಲೆಹಿಟ್ಟು: ಸ್ವಲ್ಪ ಮೊಸರು & ಕಡ್ಲೆಹಿಟ್ಟು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳ್ಕೊಳಿ.
ಮೊಸರಿನ ಲಾಭಗಳು: ಡೆಡ್ ಸ್ಕಿನ್ ತೆಗೆಯುತ್ತೆ, ಚರ್ಮಕ್ಕೆ ಹೊಳಪು ನೀಡುತ್ತೆ, ಚರ್ಮಕ್ಕೆ ತೇವಾಂಶ ನೀಡುತ್ತೆ, ಕಪ್ಪು ಕಲೆಗಳನ್ನ ಕಡಿಮೆ ಮಾಡುತ್ತೆ.