ಗ್ರೀನ್ ಗೌನ್‌ನಲ್ಲಿ ಮಿಂಚಿದ ಗಿಚ್ಚಿ ಗಿಲಿಗಿಲಿ ಜಾನ್ವಿ, ಯಪ್ಪಾ ಎರಡು ಕೆಜಿ ಮೇಕಪ್ ಇದೆ ಅಂತ ಕಾಲೆಳೆದ ನೆಟ್ಟಿಗರು!

First Published | Jan 21, 2024, 3:55 PM IST

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಸ್ಟ್ರೈಲಿಶ್ ಪೋಟೋಗಳನ್ನು ಇನ್‌ಸ್ಟಾಗ್ರಾಂ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಸದ್ಯ ಗ್ರೀನ್ ಗೌನ್‌ ಧರಿಸಿ ಪೋಸ್ ಕೊಟ್ಟಿದ್ದು, ಫ್ಯಾನ್ಸ್ ಮೇಕಪ್ ಸಿಕ್ಕಾಪಟ್ಟೆ ಓವರ್ ಆಯ್ತು ಅಂತಿದ್ದಾರೆ.

ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಸ್ಟ್ರೈಲಿಶ್ ಪೋಟೋಗಳನ್ನು ಇನ್‌ಸ್ಟಾಗ್ರಾಂ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಸದ್ಯ ಗ್ರೀನ್ ಗೌನ್‌ ಧರಿಸಿ ಪೋಸ್ ಕೊಟ್ಟಿದ್ದಾರೆ.

ಪಾಚಿ ಕಲರ್‌ನ ಸ್ಕರ್ಟ್ ಹಾಗೂ ಬ್ಲೌಸ್‌ನಲ್ಲಿ ಸಿಲ್ವರ್‌ ಡಿಸೈನ್‌ ಇರೋ ಡ್ರೆಸ್‌ ತೊಟ್ಟು ಜಾನ್ವಿ ಮಿಂಚಿದ್ದಾರೆ. ಈ ಸ್ಟೈಲಿಶ್ ಲುಕ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

Tap to resize

ಸೋ ಕ್ಯೂಟ್‌, ನೈಸ್, ಲುಕ್ಕಿಂಗ್ ಗಾರ್ಜಿಯಸ್‌, ಪ್ರೆಟ್ಟೀ ಗರ್ಲ್‌, ಸೂಪರ್, ಹಾಟಿ ಗರ್ಲ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಹಲವರು ಜಾನ್ವಿ ಮೇಕಪ್‌ನ್ನು ಟೀಕಿಸಿದ್ದಾರೆ. ಕೆಲವೊಬ್ಬರು ನಿಪ್ಪಾನ್ ಪೈಂಟ್ ಎಂದಿದ್ದಾರೆ. ಮತ್ತೆ ಕೆಲವರು. ಎರಡು ಕೆಜಿ ಮೇಕಪ್ ಇದೆ, ಮೇಕಪ್ ಓವರ್ ಆಯ್ತು ಎಂದೆಲ್ಲಾ ಟೀಕಿಸಿದ್ದಾರೆ. 

ಇನ್ನು ಹಲವರು ಅಜ್ಜಿಗೆ ಪೈಂಟ್ ಮಾಡ್ಲೇಬೇಕು ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವು ಮಂದಿ ಕಾಮೆಂಟ್ ಮಾಡಿ, 'ನೀವು ನ್ಯಾಚುರಲ್ ಆಗಿ ಚೆನ್ನಾಗಿದ್ದೀರಾ, ಓವರ್ ಮೇಕಪ್ ಮಾಡಿ ಹಾಳ್ ಮಾಡ್ಕೋಬೇಡಿ' ಎಂದು ಸಲಹೆ ನೀಡಿದ್ದಾರೆ.

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿ, ಅಲ್ಲಿಂದ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿ ಜನ ಮೆಚ್ಚುಗೆ ಪಡೆದವರು ಜಾನ್ವಿ. ಡಿಫರೆಂಟ್‌ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರ್ತಾರೆ. 

ಕಲರ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಂತರ ಜಾನ್ವಿ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದರು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಸುಮ್ಮನಿದ್ದ ಜಾನ್ವಿ ಕೊನೆಯಲ್ಲಿ ಎರಡನೇ ಸ್ಥಾನ ಪಡೆದು ಟ್ರೋಫಿ ಗೆದ್ದಿದ್ದರು.

ಸದ್ಯ ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾ 'ಅಧಿಪತ್ರ' ಚಿತ್ರದಲ್ಲಿ ಜಾಹ್ನವಿ ನಾಯಕಿ ಪಾತ್ರ ಮಾಡಲಿದ್ದಾರೆ. ಕೆ.ಆರ್ ಸಿನಿ ಕಂಬೈನ್ಸ್‌ ಬ್ಯಾನರ್ ಅಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಈ ಚಿತ್ರವನ್ನು ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಟ್ರೆಡಿಶನಲ್ ಲುಕ್‌ನಲ್ಲೂ ಜಾನ್ವಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಪೋಸ್ಟ್ ಮಾಡ್ತಿರುತ್ತಾರೆ.

Latest Videos

click me!