ಬ್ಲ್ಯಾಕ್‌ ಡ್ರೆಸ್‌ನಲ್ಲಿ ಮಾದಕ ಫೋಸ್ ಕೊಟ್ಟ ನಟಿ ಅನುಪಮಾ, ಹಾಟೆಸ್ಟ್‌ ಎಂದು ಹೊಗಳಿದ ಫ್ಯಾನ್ಸ್!

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಆಗಾಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ, ಲೇಟೆಸ್ಟ್ ಆಗಿ ಬ್ಲ್ಯಾಕ್ ಬ್ಲೌಸ್ ಆಂಡ್ ಸ್ಕರ್ಟ್ ಹಾಕಿ ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕಿದ್ದಾರೆ. ನೆಟ್ಟಿಗರು ಹಾಟಿ ಎಂದು ಕಾಮೆಂಟ್ ಮಾಡಿದ್ದಾರೆ.

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಆಗಾಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ, ಲೇಟೆಸ್ಟ್ ಆಗಿ ಬ್ಲ್ಯಾಕ್ ಬ್ಲೌಸ್ ಆಂಡ್ ಸ್ಕರ್ಟ್ ಹಾಕಿ ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕಿದ್ದಾರೆ. 

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್‌ ಸದ್ಯ ತೆಲುಗು ಚಿತ್ರರಂಗದಲ್ಲೇ ಫುಲ್ ಬಿಝಿಯಾಗಿದ್ದಾರೆ. ನಟಿ ಅನುಪಮಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲೂ ನಟಿ ಫುಲ್‌ ಆಕ್ಟಿವ್ ಆಗಿದ್ದಾರೆ.


ಮನೋಜ್ಞ ಅಭಿನಯ ಹಾಗೂ ಸೌಂದರ್ಯದಿಂದಲೇ ಅಭಿಮಾನಿಗಳ ಮನಗೆದ್ದವರು ಅನುಪಮಾ ಪರಮೇಶ್ವರನ್​. ಸೋಷಿಯಲ್ ಮೀಡಿಯಾದಲ್ಲಿ ಸೀರೆಯುಟ್ಟು ಹಬ್ಬದ ಸಂದರ್ಭದಲ್ಲಿ ಶುಭಾಶಯ ಕೋರುತ್ತಾರೆ. ಮಾತ್ರವಲ್ಲ ಜೀನ್ಸ್, ಮಾಡರ್ನ್ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಕೊಟ್ಟು ಹುಡುಗರ ನಿದ್ದೆಕೆಡಿಸುತ್ತಾರೆ.

ಅದರಲ್ಲೂ ಇತ್ತೀಚಿಗೆ ಅನುಪಮಾ ಶೇರ್ ಮಾಡಿರೋ ಫೋಟೋಸ್ ಸಖತ್‌ ಸ್ಟೈಲಿಶ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಬ್ಲ್ಯಾಕ್‌ ನೆಟ್ಟೆಡ್‌ ಟಾಪ್‌ ಹಾಗೂ ಕಾಫಿ ಕಲರ್‌ನ ಶೈನಿಂಗ್‌ ಸ್ಕರ್ಟ್ ಹಾಕಿ ಅನುಪಮಾ ಸ್ಟೈಲಿಶ್ ಫೋಸ್ ಕೊಟ್ಟಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಮೈ ಹಾರ್ಟ್‌ಬೀಟ್, ಮೈ ಲವ್‌, ಹಾಟಿ,ಲವ್ ಯು ಎಂದೆಲ್ಲಾ ಕಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು ಅಡ್ವಾನ್ಸ್ ಹ್ಯಾಪಿ ಬರ್ತ್‌ಡೇ ಅನು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಅನುಪಮಾ ಪರಮೇಶ್ವರನ್‌ 2015ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಮಲಯಾಳಂ ಚಿತ್ರ 'ಪ್ರೇಮಂ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲ ಸಿನಿಮಾವೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. 

ಬಳಿಕ ಅನುಪಮಾ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್‌ ಆಗಾಗ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಜೊತೆ ಮಾತನಾಡುತ್ತಾರೆ. ಅಭಿಮಾನಿಗಳು ಮುಂದಿಡುವ ಡಿಮ್ಯಾಂಡ್‌ಗಳಿಗೆ ಉತ್ತರ ನೀಡುತ್ತಾರೆ. ಎಲ್ಲರಿಗೂ ತಪ್ಪದೆ ಪ್ರತಿಕ್ರಿಯೆ ನೀಡುತ್ತಾರೆ.

Latest Videos

click me!