ಹೊಸ ವರ್ಷದಲ್ಲಿ ತ್ವಚೆಯ ಆರೋಗ್ಯಕ್ಕಾಗಿ ಮಿಸ್ ಮಾಡದೆ ಇದನ್ನ ಮಾಡಿ

Published : Dec 31, 2022, 06:01 PM IST

ಹೊಸ ವರ್ಷ ಪ್ರಾರಂಭವಾಗಲಿದೆ. ಹಾಗಾಗಿ ಆರೋಗ್ಯದ ಜೊತೆಗೆ ಚರ್ಮದ ಆರೈಕೆಗಾಗಿ ನಿಮಗೆ ನೀವು ಕೆಲವು ಭರವಸೆಗಳನ್ನು ನೀಡಬೇಕು. ಹೌದು, ಆರೋಗ್ಯಕರ ಚರ್ಮಕ್ಕಾಗಿ ಪ್ರತಿದಿನ ಈ ಸಲಹೆಗಳನ್ನು ಅನುಸರಿಸಿ, ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು.

PREV
17
ಹೊಸ ವರ್ಷದಲ್ಲಿ ತ್ವಚೆಯ ಆರೋಗ್ಯಕ್ಕಾಗಿ ಮಿಸ್ ಮಾಡದೆ ಇದನ್ನ ಮಾಡಿ

ನಮ್ಮನ್ನು ನಾವು ಆರೋಗ್ಯವಾಗಿ ಮತ್ತು ಸುಂದರವಾಗಿಡಲು ನಾವು ಏನೇನೋ ಮಾಡುತ್ತೇವೆ. ದುಬಾರಿ ಚಿಕಿತ್ಸೆಗಳಿಂದ ಹಿಡಿದು ಸೌಂದರ್ಯವರ್ಧಕಗಳವರೆಗೆ, ಆದರೆ ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಆಳವಾಗಿ ಸಂಬಂಧಿಸಿದ ಅತ್ಯಂತ ಮೂಲಭೂತ ವಿಷಯಗಳನ್ನು ಮರೆತುಬಿಡುತ್ತೇವೆ. ಇಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಚರ್ಮ ಆರೋಗ್ಯಕರವಾಗಿ (healthy skin), ಹೊಳೆಯುವಂತೆ ಮತ್ತು ದೀರ್ಘಕಾಲದವರೆಗೆ ಯೌವನಯುತವಾಗಿರುತ್ತೆ.

27

ಆರೋಗ್ಯಕರ ಆಹಾರ ಸೇವಿಸಿ: ತಪ್ಪು ಆಹಾರದಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಮುಖದ ಹೊಳಪು ಮಸುಕಾಗುತ್ತದೆ. ಹೊಳೆಯುವ ಚರ್ಮಕ್ಕೆ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ನೀವು ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು, ಸಾಕಷ್ಟು ನೀರು ಕುಡಿಯಬೇಕು. ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ.

37

ಪ್ರತಿದಿನ 7-8 ಗಂಟೆಗಳ ಕಾಲ ನಿದ್ರೆ ಮಾಡಿ: ಸಾಕಷ್ಟು ನಿದ್ರೆಯನ್ನು ಪಡೆಯದಿದ್ದರೆ, ಆಗ ಆರೋಗ್ಯ ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ.  ಇದು ಚರ್ಮವು ತನ್ನ ಹೊಳಪನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಹೊಳೆಯುವ ಚರ್ಮವನ್ನು ಬಯಸಿದರೆ, ಸಾಕಷ್ಟು ನಿದ್ರೆ ಮಾಡಿ. 

47

ಮೇಕಪ್ ತೆಗೆದುಹಾಕಿ:  ನೀವು ಮೇಕಪ್ ಮಾಡಿದರೆ, ರಾತ್ರಿ ಮಲಗುವ ಮೊದಲು ಮುಖವನ್ನು ಸ್ವಚ್ಛಗೊಳಿಸಿ. ಮೇಕಪ್ ಅನ್ನು ತೆಗೆದುಹಾಕದಿದ್ದರೆ, ಅದು ಚರ್ಮದ ಹಾನಿಗೆ ಕಾರಣವಾಗಬಹುದು. ಆದ್ದರಿಂದ, ಪ್ರತಿದಿನ ಮಲಗುವ ಮೊದಲು ಮುಖವನ್ನು ಸ್ವಚ್ಛಗೊಳಿಸಿ. ಸ್ವಲ್ಪವೂ ಮೇಕಪ್ ಇರದಂತೆ ನೋಡಿಕೊಂಡರೆ, ಸ್ಕಿನ್ ಆರೋಗ್ಯಯುತವಾಗಿರುತ್ತೆ.

57

ಮೇಕಪ್ ಬ್ರಷ್ ನ ಶುಚಿತ್ವದ ಬಗ್ಗೆ ಕಾಳಜಿ ವಹಿಸಿ: ಕೊಳಕು ಮೇಕಪ್ ಬ್ರಷ್ ಗಳು ಮತ್ತು ಸ್ಪಂಜುಗಳನ್ನು ಬಳಸಿದರೆ, ಅದು ಮುಖದ ಮೇಲೆ ಮೊಡವೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೇಕಪ್ ಬ್ರಷ್ ಗಳು ಮತ್ತು ಸ್ಪಂಜುಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

67

ಫೇಸ್ ಮಾಸ್ಕ್ ಹಚ್ಚಿಕೊಳ್ಳಿ: ಆರೋಗ್ಯಕರ ಚರ್ಮವನ್ನು ಬಯಸಿದರೆ, ವಾರಕ್ಕೆ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿಕೊಳ್ಳಿ. ಮೊದಲಿಗೆ ಮುಖವನ್ನು ತಣ್ಣೀರಿನಿಂದ ಕ್ಲೀನ್ ಮಾಡಿ, ನಂತರ ಫೇಸ್ ಮಾಸ್ಕ್ ಹಚ್ಚಿ. ಫೇಸ್ ಮಾಸ್ಕ್ ಹಚ್ಚೋದರಿಂದ ಮುಖದ ಮೇಲಿನ ಕೊಳೆ ದೂರವಾಗಿ, ಮುಖ ಸ್ವಚ್ಚವಾಗುತ್ತೆ.

77

ಸನ್ ಸ್ಕ್ರೀನ್ ಕ್ರೀಮ್ ಬಳಸಿ: ಮನೆಯಿಂದ ಹೊರಬರುವಾಗ ಚರ್ಮದ ಮೇಲೆ ಸನ್ ಸ್ಕ್ರೀನ್ ಕ್ರೀಮ್ ಹಚ್ಚಲು ಮರೆಯಬೇಡಿ. ನಿಮ್ಮ ಚರ್ಮಕ್ಕೆ ಅನುಗುಣವಾಗಿ ಸನ್ ಸ್ಕ್ರೀನ್ ಲೋಷನ್ ಆಯ್ಕೆ ಮಾಡಬಹುದು. ಇದು ಟ್ಯಾನಿಂಗ್ ಸಮಸ್ಯೆಯಿಂದ ರಕ್ಷಿಸುತ್ತದೆ. ಮನೆಯೊಳಗೆ ಇದ್ದಾಗಲೂ ಸನ್ ಸ್ಕ್ರೀನ್ ಬಳಸುವುದು ಉತ್ತಮ. 

Read more Photos on
click me!

Recommended Stories