ಲೆಗ್ಗಿಂಗ್ಸ್‌ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

First Published | Mar 30, 2021, 3:38 PM IST

ಈ ಫ್ಯಾಷನ್ ಯುಗದಲ್ಲಿ ಎಲ್ಲವೂ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಲೆಗ್ಗಿಂಗ್ಸ್‌ ತುಂಬಾ ವರ್ಸಟೈಲ್‌ ಹಾಗೂ ಹೆಚ್ಚಾಗಿ ಬಳಕೆ ಮಾಡುವ ಡ್ರೆಸ್ ಆಗಿದೆ. ಇದನ್ನು ಕುರ್ತಾ, ಟ್ಯೂನಿಕ್‌ ಅಥವಾ ಇತರ ಡ್ರೆಸ್‌ಗಳ ಜೊತೆಗೆ ಧರಿಸಬಹುದು. ಇದು ಆರ್ಟಿಫಿಶಿಯಲ್‌ ಲೆದರ್‌, ಮ್ಯಾಶ್‌, ಲಾಯ್‌ಕ್ರಾ, ಕಾಟನ್ ಸ್ಪೆಂಡೆಕ್ಸ್‌ ಮೊದಲಾದ ಫ್ಯಾಬ್ರಿಕ್‌ನಲ್ಲಿ ಬರುತ್ತದೆ. ಇದು ಧರಿಸಿಲು ತುಂಬಾ ಕಂಫರ್ಟೆಬಲ್‌ ಆಗಿರುವುದರಿಂದ ಎಲ್ಲಾ ರೀತಿಯ ವಯೋಮಾನದವರು ಸಹ ಇದನ್ನು ಧರಿಸುತ್ತಾರೆ.

ಲೆಗ್ಗಿಂಗ್ಸ್ ಖರೀದಿಸುವಾಗ ಕೆಲವೊಂದು ವಿಷಯಗಳನ್ನು ಗಮನಿಸಬೇಕು. ಇಲ್ಲವಾದರೆ ಲೆಗ್ಗಿಂಗ್ಸ್‌ ದೇಹಕ್ಕೆ ಫಿಟ್‌ ಆಗುವುದಿಲ್ಲ ಯಾವ ಡ್ರೆಸ್ ಜೊತೆಗೆ ಲೆಗ್ಗಿಂಗ್ಸ್‌ ಧರಿಸಬೇಕು, ಇಂತಹ ಕ್ವಾಲಿಟಿ ಬೇಕು, ಖರೀದಿಸುವ ಮುನ್ನ ಯಾವೆಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ನೋಡೋಣ...
undefined
ಲೆಗ್ಗಿಂಗ್ಸ್‌ನ ಉದ್ದ ನೋಡಿ: ಲೆಗ್ಗಿಂಗ್ಸ್‌ನ ಉದ್ದ ಸರಿಯಾಗಿದೆಯೇ ನೋಡಿಕೊಳ್ಳಿ, ಇಲ್ಲವಾದರೆ ಅದು ಶಾರ್ಟ್ಸ್‌ನಂತೆ ಕಾಣುತ್ತದೆ.
undefined

Latest Videos


ಲೆಗ್ಗಿಂಗ್ಸ್‌ನ ಫಿಟ್ಟಿಂಗ್‌ : ಸ್ಕಿನ್ನಿ ಲೆಗ್‌ ಫೀಟ್‌ ಲೆಗ್ಗಿಂಗ್ಸ್‌ ಖರೀದಿಸುವಾಗ ಅದರ ಉದ್ದ ಮತ್ತು ಫಿಟ್ಟಿಂಗ್‌ ಮೇಲೆ ಗಮನ ಇರಲಿ. ಜೊತೆಗೆ ಸ್ಟ್ರೆಚಿಂಗ್‌ ಇರುವ ಫರ್ಮ್ ಲೆಗ್ಗಿಂಗ್ಸ್‌ ಖರೀದಿಸಿ.
undefined
ಸರಿಯಾದ ಅಂಡರ್‌ವೇರ್‌ ಆಯ್ಕೆ : ಲೆಗ್ಗಿಂಗ್ಸ್‌ ಧರಿಸುವ ವೇಳೆ ಧರಿಸುವ ಅಂಡರ್‌ವೇರ್‌ ಮೇಲೆ ಗಮನ ಹರಿಸಬೇಕು. ಹೆಚ್ಚು ಟೈಟ್‌ ಆದ ಅಂಡರ್‌ವೇರ್‌ ಧರಿಸಬೇಡಿ. ಯಾಕೆಂದರೆ ಅದರ ಲೈನ್ ಕಾಣಿಸುತ್ತದೆ. ಲೆಗ್ಗಿಂಗ್ಸ್‌ ಜೊತೆ ಸೀಮ್‌ಲೆಸ್‌ ಅಂಡರ್‌ವೇರ್‌ ಧರಿಸಿ.
undefined
ಆ್ಯಂಕಲ್‌ ಬೂಟ್ಸ್‌ ಅಥವಾ ಸ್ನೀಕರ್ಸ್‌ : ನಿಮ್ಮ ಲೆಗ್ಗಿಂಗ್ಸ್‌ನ್ನು ಸ್ಟೈಲಿಶ್‌ ಮಾಡಲು ಆ್ಯಂಕಲ್‌ ಬೂಟ್ಸ್‌ ಅಥವಾ ಸ್ನೀಕರ್ಸ್‌ ಖರೀದಿ ಮಾಡಿ. ನೀ ಹೈ ಬೂಟ್ಸ್‌ ಕೂಡ ಲೆಗ್ಗಿಂಗ್ಸ್‌ ಜೊತೆ ಚೆನ್ನಾಗಿ ಕಾಣುತ್ತದೆ.
undefined
ಪಾಶ್‌ ಕಲರ್‌ ಮತ್ತು ಲೆದರ್‌ ಲೆಗ್ಗಿಂಗ್ಸ್‌ : ಲೆಗ್ಗಿಂಗ್ಸ್‌ ಖರೀದಿ ಮಾಡುವಾಗ ಸ್ಟೈಲಿಶ್‌ ಆದ ನಿಯಾನ್‌ ಬಣ್ಣದ ಅಥವಾ ಪಾಪ್‌ ಕಲರ್‌ ಹಾಗೂ ಲೆದರ್‌ ಲೆಗ್ಗಿಂಗ್ಸ್‌ ಖರೀದಿಸಿ.
undefined
ಶಾರ್ಟ್‌ ಟಾಪ್‌ ಧರಿಸಬೇಡಿ : ಲೆಗ್ಗಿಂಗ್ಸ್‌ ಜೊತೆ ಶಾರ್ಟ್‌ ಟಾಪ್‌ ಧರಿಸಬೇಡಿ. ಇದರಿಂದ ಲುಕ್ ಹಾಳಾಗುತ್ತದೆ. ಲೆಗ್ಗಿಂಗ್ಸ್‌ ಜೊತೆಗೆ ಟ್ಯೂನಿಕ್‌ ಅಥವಾ ಲಾಂಗ್‌ ಶರ್ಟ್‌ ಕ್ಯಾರಿ ಮಾಡಿ.
undefined
ಅಂಕಲ್ ಲೆಂಗ್ತ್ ಲೆಗ್ಗಿಂಗ್ಸ್‌ : ಇದು ಇತ್ತೀಚಿಗೆ ಹೆಚ್ಚು ಟ್ರೆಂಡ್‌ನಲ್ಲಿದೆ. ಇದರ ಜೊತೆಗೆ ಲಾಂಗ್ ಕುರ್ತಾ ಚೆನ್ನಾಗಿ ಕಾಣುತ್ತದೆ. ಸಣ್ಣ ಟಾಪ್ ಧರಿಸುವುದಾದರೆ ಅದರ ಕ್ವಾಲಿಟಿ ಬಗ್ಗೆ ನೆನಪಿನಲ್ಲಿಡಿ.
undefined
click me!