ಅಬ್ಬಬ್ಬಾ..ಅಂಬಾನಿ ಸೊಸೆ ಧರಿಸಿದ್ದ ಚಿನ್ನ, ಬೆಳ್ಳಿ ಕಸೂತಿಯ ಮಿರಿ ಮಿರಿ ಮಿಂಚೋ ಸೀರೆ ಬೆಲೆ ಇಷ್ಟೊಂದಾ?

First Published | Apr 4, 2024, 9:07 PM IST

ಅಂಬಾನಿ ಕುಟುಂಬದ ಕಿರಿಯ ಸೊಸೆ  ರಾಧಿಕಾ ಮರ್ಚೆಂಟ್, ಫ್ಯಾಷನ್‌ ಲೋಕವನ್ನು ಬೆರಗುಗೊಳಿಸುವಂತಹ ಬಟ್ಟೆಗಳನ್ನು ಧರಿಸುತ್ತಾರೆ. ಅಂಬಾನಿ ಸೊಸೆ ಇತ್ತೀಚಿಗೆ ಸಂಪೂರ್ಣವಾಗಿ ಮಿನುಗುವ ಸೀರೆಯನ್ನು ಧರಿಸಿದ್ದು, ಬಾಲಿವುಡ್ ದಿವಾಗಳ ಗಮನವನ್ನೂ ಸೆಳೆಯಿತು. ಆದ್ರೆ ರಾಧಿಕಾ, ಮಿರಿ ಮಿರಿ ಮಿಂಚುವಂತೆ ಮಾಡಿದ ಈ ಸೀರೆಯ ಬೆಲೆ ಎಷ್ಟು ಗೊತ್ತಾ?

ಅಂಬಾನಿ ಕುಟುಂಬದ ಕಿರಿಯ ಸೊಸೆ  ರಾಧಿಕಾ ಮರ್ಚೆಂಟ್  ಬಟ್ಟೆಯ ಆಯ್ಕೆ ವಿಚಾರದಲ್ಲಿ ಫ್ಯಾಷನ್‌ ಲೋಕವನ್ನು ಬೆರಗುಗೊಳಿಸುವಂತಹ ಬಟ್ಟೆಗಳನ್ನು ಧರಿಸುತ್ತಾರೆ.  ಮೂರು ದಿನಗಳ ಕಾಲ ನಡೆದ ರಾಧಿಕಾ-ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಧರಿಸಿದ ಬಟ್ಟೆಗಳು ಒಂದಕ್ಕಿಂತ ಒಂದು ಸುಂದರವಾಗಿತ್ತು. 

ಕೇವಲ ಪ್ರಿ ವೆಡ್ಡಿಂಗ್‌ಗೆ ಮಾತ್ರವಲ್ಲ ಇತರ ಸಮಾರಂಭ, ಪಾರ್ಟಿಗಳಿಗೂ ರಾಧಿಕಾ ಮರ್ಚೆಂಟ್ ತುಂಬಾ ದುಬಾರಿಯಾದ, ಆಕರ್ಷಕ ಸೀರೆ, ಡ್ರೆಸ್ ಧರಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಹಾಗೆಯೇ ಇತ್ತೀಚಿಗೆ ರಾಧಿಕಾ ಮರ್ಚೆಂಟ್ ಬ್ಲಶ್ ಪಿಂಕ್ ಸೀಕ್ವಿನ್ಡ್ ಸೀರೆಯಲ್ಲಿ ಸ್ಲೀವ್‌ಲೆಸ್ ಬ್ಲೌಸ್‌ನೊಂದಿಗೆ ಕಾಣಿಸಿಕೊಂಡಿದ್ದರು. 

Tap to resize

ಸಂಪೂರ್ಣವಾಗಿ ಮಿನುಗುವ ಈ ಸೀರೆ ಅದ್ಭುತವಾಗಿದ್ದು, ಬಾಲಿವುಡ್ ದಿವಾಗಳ ಗಮನವನ್ನೂ ಸೆಳೆಯಿತು. ಆದ್ರೆ ಅಂಬಾನಿ ಸೊಸೆಯನ್ನು ಮಿರಿ ಮಿರಿ ಮಿಂಚುವಂತೆ ಮಾಡಿದ ಈ ಸೀರೆಯ ಬೆಲೆ ಎಷ್ಟು ಗೊತ್ತಾ?

ಭಾರತದ ಖ್ಯಾತ ಫ್ಯಾಷನ್ ಡಿಸೈನರ್‌ ಮನೀಶ್ ಮಲ್ಹೋತ್ರಾ ಈ ಡ್ರೆಸ್ ಡಿಸೈನ್ ಮಾಡಿದ್ದರು. ಬ್ಲಶ್ ಗುಲಾಬಿ ಬಣ್ಣದ ಸೀರೆಯಲ್ಲಿ ರಾಧಿಕಾ ಅಪ್ಸರೆಯಂತೆ ಕಾಣುತ್ತಿದ್ದರು. ಇದಕ್ಕೆ ಒಪ್ಪುವಂತೆ ವಜ್ರದ ಕಿವಿಯೋಲೆ ಹಾಗೂ ಚೋಕರ್ ಸೆಟ್ ಧರಿಸಿದ್ದು, ಅಂಬಾನಿ ಕಿರಿ ಸೊಸೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿತ್ತು.

ರಾಧಿಕಾ ಮರ್ಚೆಂಟ್ ಸೀಕ್ವಿನ್ ಜಾರ್ಜೆಟ್ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಸೀರೆಯಲ್ಲಿ ಬೆಳ್ಳಿ ಮತ್ತು ಚಿನ್ನದ ಮಿನುಗುಗಳನ್ನು ಕಸೂತಿ ಮಾಡಲಾಗಿತ್ತು. ವಿನ್ಯಾಸಕರ ಅಧಿಕೃತ ವೆಬ್‌ಸೈಟ್‌ನಲ್ಲಿ ಸೀರೆಯ ಬೆಲೆ ರೂ. 2,75,000 ಎಂದು ತಿಳಿಸಲಾಗಿದೆ.

ರಾಧಿಕಾ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. ತಮ್ಮ ಸ್ಟೈಲಿಶ್ ಲುಕ್‌ಗಳಿಗಾಗಿಯೇ ಹೆಸರುವಾಸಿಯಾಗಿದ್ದಾರೆ. ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡರ್ನ್‌ ಡ್ರೆಸ್‌ಗೂ ಜೈ ಅನ್ನೋ ಅಂಬಾನಿ ಕಿರಿ ಸೊಸೆಯ ಬ್ಯೂಟಿ ಯಾವ ಬ್ಯೂಟಿ ಕ್ವೀನ್‌ಗೂ ಕಮ್ಮಿಯಿಲ್ಲ.

ಎಲ್ಲಾ ಸಮಾರಂಭಗಳಲ್ಲಿ ಅವರು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಮಾರಂಭಗಳಿಗೆ ಗ್ರ್ಯಾಂಡ್ ಸ್ಯಾರಿ, ಲೆಹಂಗಾ ಧರಿಸುತ್ತಾರೆ. ತಮ್ಮ ಪ್ರಿ ವೆಡ್ಡಿಂಗ್ ಇವೆಂಟ್‌ನ ಮೂರು ದಿನದ ಕಾರ್ಯಕ್ರಮಕ್ಕೆ ರಾಧಿಕಾ ಕೋಟಿ ಕೋಟಿ ಬೆಲೆಯ ಡ್ರೆಸ್‌, ಲೆಹಂಗಾ ಧರಿಸಿದ್ದಾರೆ.

ರಾಧಿಕಾ ಮರ್ಚೆಂಟ್, 2022ರ ಮೆಟ್ ಗಾಲಾದಲ್ಲಿ ನಟಿ ಬ್ಲೇಕ್ ಲೈವ್ಲಿ ಧರಿಸಿದ್ದ ಉಡುಪನ್ನು ತಮ್ಮ ಮದುವೆ ಕಾರ್ಯಕ್ರಮದಲ್ಲಿ ಆರಿಸಿಕೊಂಡರು. ಪಿಂಕ್ ಆಫ್‌ ಶೋಲ್ಡರ್‌ ಗೌನ್‌ನಲ್ಲಿ ರಾಧಿಕಾ ಅದ್ಭುತವಾಗಿ ಕಾಣುತ್ತಿದ್ದರು. ಇದಕ್ಕೆ ವೈಟ್ ಡೈಮಂಡ್ ಸೆಟ್‌ನ್ನು ಧರಿಸಿದ್ದರು.

ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ, ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.

ಆಕೆಯ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು CEO ಆಗಿದ್ದಾರೆ. ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

Latest Videos

click me!