ಮನೆಯಲ್ಲಿ ಐಬ್ರೋಗೆ ಸುಂದರ ಶೇಪ್ ಕೊಡೋದು ಹೇಗೆ?

Suvarna News   | Asianet News
Published : Aug 30, 2021, 02:30 PM ISTUpdated : Aug 30, 2021, 02:32 PM IST

ಹುಬ್ಬುಗಳ ಆಕಾರ ಸರಿಯಾಗಿದ್ದರೆ ಮುಖದ ನೋಟವೇ ಬದಲಾಗುತ್ತದೆ. ಮುಖದ ಲ್ಲಾ ಫೀಚರ್‌ಗಳು ಹೆಚ್ಚು ತೀಕ್ಷ್ಣಮತ್ತು ಸ್ವಚ್ಛವಾಗಿ ಕಾಣುತ್ತವೆ. ಆದರೆ, ಹುಬ್ಬುಗಳಿಗೆ ಸರಿಯಾದ ಆಕಾರ ನೀಡುವುದು ಸುಲಭವಲ್ಲ. ಆದರೆ ಸ್ವಲ್ಪ ಟ್ರಿಕ್ ಮತ್ತು ಕೆಲವು ಸಣ್ಣ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನೀವು ನಿಮ್ಮ ಹುಬ್ಬುಗಳನ್ನು ಸರಿಯಾಗಿ ರೂಪಿಸಬಹುದು.

PREV
18
ಮನೆಯಲ್ಲಿ ಐಬ್ರೋಗೆ ಸುಂದರ ಶೇಪ್ ಕೊಡೋದು ಹೇಗೆ?

ಹುಬ್ಬಿಗೆ ಸರಿಯಾದ ಆಕಾರ ನೀಡಲು ಮೊದಲ ಹಂತ
ಹುಬ್ಬುಗಳಿಗೆ ಸರಿಯಾದ ಆಕಾರವನ್ನು ನೀಡುವ ಮೊದಲ ಹಂತವೆಂದರೆ ಅವುಗಳನ್ನು ಸರಿಯಾಗಿ ಬ್ರಷ್ ಮಾಡುವುದು ಮತ್ತು ಹುಬ್ಬುಗಳನ್ನು ರೂಪಿಸಲು  ಬಯಸುವ ದಿಕ್ಕಿನಲ್ಲಿಯೇ ಬ್ರಷ್ ಮಾಡುವುದು.ಇದಕ್ಕಾಗಿ  ಸ್ಪುಲಿಯನ್ನು ಬಳಸಬಹುದು. ಅಥವಾ ಬೇಬಿ ಟೂತ್ ಬ್ರಷ್ ನಿಂದ  ಹುಬ್ಬುಗಳನ್ನು ಬ್ರಷ್ ಮಾಡಬಹುದು. ಹೀಗೆ ಮಾಡುವುದರಿಂದ  ಹುಬ್ಬುಗಳ ಮೇಲಿನ ಉದ್ದವಾದ ಕೂದಲನ್ನು ಸ್ಪಷ್ಟವಾಗಿ ಕಾಣಿಸುತ್ತವೆ, ಅದನ್ನು ಟ್ರಿಮ್ ಮಾಡಬೇಕಾಗುತ್ತದೆ.

28

ಹಂತ  ಎರಡು
ಈಗ ನಿಮಗೆ ತೆಳುವಾದ ಮತ್ತು ಸಣ್ಣ ಕತ್ತರಿಯ ಅಗತ್ಯವಿದೆ, ಇದರಿಂದ  ಹುಬ್ಬುಗಳ ಕೂದಲನ್ನು ಟ್ರಿಮ್ ಮಾಡಬಹುದು. ಕೂದಲನ್ನು ಟ್ರಿಮ್ ಮಾಡುವಾಗ ಕೂದಲನ್ನು ಕೆಳಗಿನಿಂದ ಮೇಲಕ್ಕೆ ಕತ್ತರಿಸಿ. ಈ ರೀತಿ ಕತ್ತರಿಯಿಂದ ಕತ್ತರಿಸಿದಾಗ ಹುಬ್ಬುಗಳು ದಪ್ಪವಾಗಿ, ಸುಂದರವಾಗಿ ಕಾಣಿಸುತ್ತದೆ.  ಈ ಮಧ್ಯೆ, ಸ್ಪಲ್ (ದುಂಡಗಿನ ಹುಬ್ಬುಗಳ ಬ್ರಷ್) ಸಹಾಯದಿಂದ ಕೂದಲನ್ನು ಮೇಲಕ್ಕೆ ತಳ್ಳಿ.

38

ಬ್ರಶ್ ಸಹಾಯದಿಂದ ಕೂದಲನ್ನು ಮೇಲಕ್ಕೆ ತಳ್ಳುವುದರಿಂದ ಐಬ್ರೋ ದಟ್ಟವಾಗಿ ಕಾಣಿಸುತ್ತದೆ. ಇದರಿಂದ ಲುಕ್ ಚೆನ್ನಾಗಿ ಕಾಣಿಸುತ್ತದೆ. ಆದರೆ  ಕೂದಲನ್ನು ಮೇಲಿನಿಂದ ಕೆಳಕ್ಕೆ ಕತ್ತರಿಸಿದರೆ, ಅಥವಾ ಕೂದಲನ್ನು ನೇರವಾಗಿ ಕತ್ತರಿಸಿದರೆ, ಇದರಿಂದ ಹುಬ್ಬುಗಳು ದಪ್ಪವಾಗಿ ಕಾಣುವುದಕ್ಕಿಂತ ಹಗುರವಾಗಿ ಕಾಣುತ್ತವೆ. ಇದು ಐಬ್ರೋ ಇಲ್ಲದಂತಹ ಲುಕ್ ನೀಡುತ್ತದೆ. ಮುಖ ಡಲ್ ಆಗಿ ಕಾಣಿಸುತ್ತದೆ. 

48

ಕಾಮನ ಬಿಲ್ಲಿನಂತೆ ಕಾಣಲು 
ಹುಬ್ಬುಗಳಲ್ಲಿ ಕಮಾನು ತಯಾರಿಸಲು  ಟ್ವಿಜರ್ ಮತ್ತು ಪ್ಲಕರ್ ಅನ್ನು ಬಳಸಬಹುದು. ಅವು ಹುಬ್ಬುಗಳನ್ನು ಕಮಾನು ಮಾಡಲು ಮತ್ತು ಅದರ ಸುತ್ತಲಿನ ಹೆಚ್ಚುವರಿ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುವ ವಿವಿಧ ಸಾಧನಗಳಾಗಿವೆ.
ಅವುಗಳನ್ನು ಬಳಸುವ ಮೊದಲು, ಹುಬ್ಬುಗಳ ಸರಿಯಾದ ಆಕಾರವನ್ನು  ಮನಸ್ಸಿನಲ್ಲಿಇರಿಸಿಕೊಳ್ಳಿ, ಇದರಿಂದ ಅದಕ್ಕೆ ಅನುಗುಣವಾಗಿ ಹುಬ್ಬುಗಳಿಂದ ಹೆಚ್ಚುವರಿ ಕೂದಲನ್ನು ತೆಗೆದುಹಾಕಬಹುದು.

58

ರೇಜರ್ ಗಳ ಬಳಕೆ
ಈಗ ರೇಜರ್ ಬಳಸಿ ಅಥ
ವಾ ಡರ್ಮಪ್ಲಾನಿಂಗ್ ಬ್ಲೇಡ್ ಬಳಸಿ  ಮುಖದ ಮೇಲಿನ ಹುಬ್ಬುಗಳ ಸುತ್ತಲಿನ ಹೆಚ್ಚುವರಿ ಕೂದಲನ್ನು ತೆಗೆಯಿರಿ. ಹೀಗೆ ಮಾಡುವುದರಿಂದ ಹುಬ್ಬುಗಳ ಜಾಗವು ಸ್ಪಷ್ಟವಾಗುತ್ತದೆ ಮತ್ತು ಮುಖವು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ. ಆದರೆ ರೇಜರ್ ಬಳಕೆ ಮಾಡುವಾಗ ತುಂಬಾನೆ ಜಾಗರೂಕತೆ ಅಗತ್ಯವಾಗಿದೆ. ಯಾಕೆಂದರೆ ಸ್ವಲ್ಪ ಕೈ ತಪ್ಪಿದರೂ ಇಡಿ ಐಬ್ರೋ ಹಾಳಾಗುವ ಸಾಧ್ಯತೆ ಇದೆ. 

68

ಹಣೆಯ ಮೇಲಿನ ಕೂದಲು, ತಲೆಬುರುಡೆಯಿಂದ ಈ ಹೆಚ್ಚುವರಿ ಕೂದಲನ್ನು ಸಹ ನೀವು ತೆಗೆದುಹಾಕಬಹುದು. ಇದಕ್ಕಾಗಿ ಸಿಪ್ಪೆಯಿರುವ ವ್ಯಾಕ್ಸ್  ಸ್ಟ್ರಿಪ್ ಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಈ ಕೂದಲುಗಳನ್ನು ಮೇಣದ ಮೂಲಕ ತೆಗೆಯಿರಿ. ಆದರೆ ಹುಬ್ಬುಗಳ ಕೂದಲು ಅಥವಾ ತಲೆಯ ಕೂದಲು ಅಂಟಿಕೊಳ್ಳದಂತೆ ಅತ್ಯಂತ ಕಾಳಜಿಯಿಂದ ಇದನ್ನು ಮಾಡಿ. ಇಲ್ಲವಾದರೆ ಹೆಚ್ಚು ನೋವಾಗುತ್ತದೆ. 

78


ಹಂತ 5
ನಿಮ್ಮ ಕೂದಲನ್ನು ಮತ್ತೊಮ್ಮೆ ಸ್ಪುಲ್ ಅಥವಾ ಬೇಬಿ ಟೂತ್ ಬ್ರಷ್ ನಿಂದ ಬ್ರಷ್ ಮಾಡಿ ಮತ್ತು ಎಲ್ಲಿಯೂ ಹೆಚ್ಚುವರಿ ಕೂದಲು ಉಳಿಸಲಾಗಿಲ್ಲವೇ ಎಂದು ಪರಿಶೀಲಿಸಿ. ಅವುಗಳನ್ನು ಎಚ್ಚರಿಕೆಯಿಂದ ಟ್ರಿಮ್ ಮಾಡಿ ಅಥವಾ ಅವು ಇದ್ದಲ್ಲಿ ಅವುಗಳನ್ನು ಪ್ಲಕರ್ ನಿಂದ ತೆಗೆಯಿರಿ. ಈಗ ಐಬ್ರೋಗೆ ಸರಿಯಾದ ಶೇಪ್ ಬರುತ್ತದೆ. ಮುಖವೂ ಹೊಳೆಯುವಂತಾಗುತ್ತದೆ. 

88

ಹಂತ 6
ಈಗ ಹುಬ್ಬುಗಳಿಗೆ ಅಲೋವೆರಾ ಜೆಲ್ ಅಥವಾ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಇದಕ್ಕೆ ಎರಡರಿಂದ ಮೂರು ಹನಿ ಎಣ್ಣೆ ಸಾಕು. ಹೀಗೆ ಮಾಡುವುದರಿಂದ ಹುಬ್ಬುಗಳ ಕೂದಲು ಕೂಡ ಸೆಟ್ ಆಗುವುದರಿಂದ ಮತ್ತು ಹೆಚ್ಚುವರಿ ಕೂದಲನ್ನು ತೆಗೆದ ಸ್ಥಳದಿಂದ ಚರ್ಮವನ್ನು ಶಮನಗೊಳಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಸಹ ಇದು ಸಹಾಯ ಮಾಡುತ್ತದೆ. 

click me!

Recommended Stories