40ರ ನಂತರ ಸಾರಿ ಸ್ಟೈಲಿಂಗ್ ಹೇಗಿರಬೇಕು ? ಬಾಲಿವುಡ್ ನಟಿ ವಿದ್ಯಾ ಬಾಲನ್ ಟಿಪ್ಸ್

First Published | May 31, 2022, 3:38 PM IST

ಸೀರೆ (Saree) ಭಾರತೀಯ ನಾರಿಗೊಪ್ಪುವ ದಿರಿಸು. ಸಂಸ್ಕೃತಿಯ ಪ್ರತೀಕ. ಸೀರೆಯ ನೆರಿಗೆ, ಪಲ್ಲು ಹೆಣ್ಣಿನ ಸೌಂದರ್ಯ (Beauty)ವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿಯೇ ಹೆಣ್ಣುಮಕ್ಕಳು (Woman) ಹೆಚ್ಚಾಗಿ ಸೀರೆಯನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಸೀರೆ ಉಡುವುದೇನೋ ಸರಿ. ಆದರೆ ಟ್ರೆಂಡ್‌ಗೆ (Trend) ತಕ್ಕಂತೆ ಸ್ಟೈಲಿಶ್ (Stylish) ಆಗಿರಬೇಕಲ್ವಾ. ಅದಕ್ಕಾಗಿ ಇಲ್ಲಿದೆ ಕೆಲವೊಂದು ಟಿಪ್ಸ್.

ಬಾಲಿವುಡ್ (Bollywood) ತಾರೆ ಮತ್ತು ಅತ್ಯುತ್ತಮ ನಟರಲ್ಲಿ ಒಬ್ಬರಾದ ವಿದ್ಯಾ ಬಾಲನ್ (Vidya balan) ಅವರು ತಮ್ಮ ವಿಶಿಷ್ಟವಾದ ಸೀರೆ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಭಿನ್ನ-ವಿಭಿನ್ನ ಸೀರೆಯನ್ನು ಧರಿಸಿ ಅವರು ಸಾರ್ವಜನಿಕ ಕಾರ್ಯಕ್ರಮ, ಫಿಲ್ಮ್ ಪ್ರಮೋಷನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. 

ಕಲರ್ ಮತ್ತು ಪ್ರಿಂಟ್
ನಿಮ್ಮ ವಾರ್ಡ್‌ರೋಬ್‌ಗೆ ಡಿಫರೆಂಟ್ ಕಲರ್‌ ಮತ್ತು ಪ್ರಿಂಟ್‌ನ ಸೀರೆಯನ್ನು ಸೇರಿಸಿಕೊಳ್ಳಿ. ಟೈಗರ್ ಪ್ರಿಂಟ್‌ನ ಈ ಸೀರೆಯನ್ನು ನೋಡಿ. ಎಷ್ಟು ಆಕರ್ಷಕವಾಗಿದೆ ಮತ್ತು ತಕ್ಷಣಕ್ಕೆ ಗಮನ ಸೆಳೆಯುತ್ತದೆ. ಇದು ಸಂಪೂರ್ಣ ಲುಕ್‌ನ್ನು ಇನ್ನಷ್ಟು ಎಲಿಗೆಂಟ್ ಮಾಡುತ್ತೆ. ಬನ್ ಹೇರ್‌ಸ್ಟೈಲ್ ಜೊತೆಗೆ ಹೆವಿ ಇಯರಿಂಗ್ಸ್ ಸಖತ್ ಲುಕ್ ನೀಡುತ್ತದೆ. 
 

Tap to resize

ಬೋಲ್ಡ್ ಲುಕ್‌
ಸೀರೆಯನ್ನ ಧರಿಸುವಾಗ ಮೈಗೊಪ್ಪುವಂತೆ ಉಟ್ಟುಕೊಳ್ಳಿ. ಬೋಲ್ಡ್‌ ಪ್ರಿಂಟ್, ಡಿಸೈನ್ ಸೆಲೆಕ್ಟ್ ಮಾಡುವುದನ್ನು ಮರೆಯಬೇಡಿ. ಹಿಂದಿನ ಕಾಲದಂತೆ ಸಂಪೂರ್ಣವಾಗಿ ಸೆರಗು ಹೊದ್ದುಕೊಳ್ಳದೆ, ಹಾಫ್ ಸ್ಟೈಲ್ ಫಾಲೋ ಮಾಡಿ. ಇದು ಸೀರೆಯಲ್ಲಿ ಸಂಪೂರ್ಣ ಬೋಲ್ಡ್ ಲುಕ್ ನೀಡುತ್ತದೆ.

ಆಸೆಸ್ಸೀರಿಸ್
ಆಕರ್ಷಕ, ಕಾಸ್ಟ್ಲೀ ಸೀರೆಯುಟ್ಟರಷ್ಟೇ ಸಾಲದು. ಅದನ್ನು ಸರಿಯಾದ ಕಿವಿಯೋಲೆ, ನೆಕ್ಲೇಸ್ ಜೊತೆ ಪ್ಯಾರ್‌ಪ್ ಮಾಡಿಕೊಳ್ಳಿ. ಇದು ಸಿಂಪಲ್ ಸೀರೆಯ ಲುಕ್‌ನ್ನೇ ಗ್ರ್ಯಾಂಡ್ ಆಗಿ ಬದಲಾಯಿಸುತ್ತದೆ. ಸೀರೆ ಗ್ರ್ಯಾಂಡ್ ಇದ್ದರೆ ಕೆಲವೊಮ್ಮೆ ಆಸೆಸ್ಸೇರಿಸ್‌ ಅಗತ್ಯವಿರುವುದಿಲ್ಲ.
 

ಡಿಫರೆಂಟ್ ಪ್ರಿಂಟ್‌ನ ಸಾರಿ
ವಿದ್ಯಾ ಬಾಲನ್ ಭಿನ್ನ-ವಿಭಿನ್ನ ಸೀರೆಯನ್ನು ಧರಿಸಿ ಅವರು ಸಾರ್ವಜನಿಕ ಕಾರ್ಯಕ್ರಮ, ಫಿಲ್ಮ್ ಪ್ರಮೋಷನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಡಿಫರೆಂಟ್ ಪ್ರಿಂಟ್‌ನ ಸಾರಿಗಳನ್ನು ಮಹಿಳೆಯರು ನಲವತ್ತು ವರ್ಷದ ನಂತರ ಉಟ್ಟುಕೊಳ್ಳುವುದರಿಂದ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ.

ಬ್ಯೂಟಿ ಬೈ ಜರಿ
ಬ್ಯೂಟಿ ಬೈ ಜರಿ, ವಿದ್ಯಾ ಬಾಲನ್ ಹಲವು ಬಾರಿ ಅನುಸರಿಸುತ್ತಾರೆ. ಮೂಲತಃ ದಕ್ಷಿಣಭಾರತದವಾರದ ವಿದ್ಯಾ ಬಾಲನ್ ಜರಿ ಪ್ರೀತಿಗೆ ಸ್ವಲ್ಪ ಹೆಚ್ಚಾಗಿಯೇ ಇದೆ. ಹಲವು ಕಾರ್ಯಕ್ರಮಗಳಲ್ಲಿ ಅವರು ಬನಾರಸಿ, ಕಾಂಜೀವರಂ ಸೀರೆ ಉಟ್ಟು ಕಾಣಿಸಿಕೊಳ್ಳುತ್ತಾರೆ. ನಿಮ್ಮ ವಾರ್ಡ್‌ರೋಬ್‌ನಲ್ಲೂ ಮಸ್ಟ್ ಆಂಡ್ ಶುಡ್ ಇಂಥಾ ಸೀರೆಗಳಿರಲಿ

ನೆಕ್‌ಲೈನ್
ಆಕರ್ಷಕ ಸೀರೆ ಧರಿಸಿದರಷ್ಟೇ ಸಾಲದು. ಬ್ಲೌಸ್‌ನ ನೆಕ್‌ಲೈನ್ ಸಹ ಆಕರ್ಷಕವಾಗಿರಬೇಕು. ಸೀರೆ ತುಂಬಾ ಚೆನ್ನಾಗಿದ್ದು, ನೆಕ್‌ಲೈನ್ ಚೆನ್ನಾಗಿರದಿದ್ದರೆ ಸಂಪೂರ್ಣ ಲುಕ್ ಬೋರಿಂಗ್ ಅನಿಸಿಬಿಡುತ್ತದೆ. ಹೀಗಾಗಿ ನೆಕ್‌ಲೈನ್ ಯಾವಾಗಲೂ ಡಿಫರೆಂಟ್ ಆಗಿರುವಂತೆ ನೋಡಿಕೊಳ್ಳಿ.

Latest Videos

click me!