ಕೂದಲಿನ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಒಂದಲ್ಲೊಂದು ಸಮಸ್ಯೆ ಕಾಡಿಯೇ ಕಾಡುತ್ತೆ. ಅದನ್ನ ಸರಿಪಡಿಸಲು ನೀವು ಮತ್ತಷ್ಟು ಕೆಮಿಕಲ್ ಯುಕ್ತ ಶ್ಯಾಂಪೂ (Chemical bases shampoo) ಹಾಕಿದ್ರೆ ಅದರಿಂದ ಕೂದಲಿನ ಸ್ಥಿತಿ ಮತ್ತಷ್ಟು ಹದಗೆಡುತ್ತೆ. ಹಾಗಿದ್ರೆ ಈ ಸಮಸ್ಯೆ ಪರಿಹಾರ ಏನು ಅಂತ ಯೋಚನೆ ಮಾಡ್ತಿದ್ದೀರಾ? ಮಾವಿನ ಎಲೆಗಳನ್ನು ಬಳಸಿ ನೋಡಿ.
ಮಾವಿನ ಎಲೆಗಳಲ್ಲಿ ವಿಟಮಿನ್-ಎ, ಸಿ ಮತ್ತು ಬಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಅವು ಆರೋಗ್ಯ ಮತ್ತು ಕೂದಲಿಗೆ ಪ್ರಯೋಜನಕಾರಿ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಈ ಎಲೆಗಳಿಂದ ನೀವು ಹೇರ್ ಮಾಸ್ಕ್ ಗಳನ್ನು ತಯಾರಿಸಬಹುದು. ಮಾವಿನ ಎಲೆಗಳಿಂದ ಹೇರ್ ಪ್ಯಾಕ್ (mango leaves hair mask) ತಯಾರಿಸೋದು ಹೇಗೆ ಮತ್ತು ಅದರ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ.
ಪ್ರತಿಯೊಬ್ಬರೂ ದಪ್ಪ ಉದ್ದ ಮತ್ತು ಹೊಳೆಯುವ ಕೂದಲನ್ನು ಬಯಸುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಲೈಫ್ ಸ್ಟೈಲ್ ತುಂಬಾನೆ ಚೇಂಜ್ ಆಗಿರೋದ್ರಿಂದ ಕೂದಲು ಉದುರುವುದು ಸಾಮಾನ್ಯ. ಕೂದಲಿನ ಬೆಳವಣಿಗೆಗೆ ನೀವು ಅನೇಕ ಪರಿಹಾರಗಳನ್ನು ಪ್ರಯತ್ನಿಸುತ್ತೀರಿ. ಆದರೆ ಕೂದಲಿನ ಶಕ್ತಿಗಾಗಿ ನೀವು ಎಂದಾದರೂ ಮಾವಿನ ಎಲೆಗಳನ್ನು ಬಳಸಿದ್ದೀರಾ?
ಶಾಕ್ ಆಗ್ಬೇಡಿ ಹೌದು, ಮಾವಿನ ಎಲೆಗಳು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಅವು ಕೂದಲಿಗೆ ಅಗತ್ಯವಾದ ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಇ ಅನ್ನು ನೀಡುತ್ತೆ. ಆದ್ದರಿಂದ ಮಾವಿನ ಎಲೆಗಳನ್ನು ಕೂದಲಿಗೆ ಹೇಗೆ ಬಳಸುವುದು ಅನ್ನೋದನ್ನು ತಿಳಿದುಕೊಳ್ಳೋಣ.
ಮಾವಿನ ಎಲೆಗಳಿಂದ ಹೇರ್ ಮಾಸ್ಕ್ ತಯಾರಿಸಿ ಹಚ್ಚೋದ್ರಿಂದ ಕೂದಲಿಗೆ ಒಳ್ಳೆಯ ಹೊಳಪು ಬರುತ್ತೆ, ಜೊತೆಗೆ ಕೂದಲು ಸದೃಢವಾಗಿರುತ್ತೆ. ಮಾವಿನ ಎಲೆಗಳ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಮಾವಿನ ಎಲೆಗಳು, ನೆಲ್ಲಿಕಾಯಿ ಪುಡಿ, ಮೆಹಂದಿ ಪುಡಿ (Henna Powder) ಮತ್ತು ತೆಂಗಿನ ಎಣ್ಣೆ
ತಯಾರಿಸುವ ವಿಧಾನ
ಮೊದಲಿಗೆ ಮಾವಿನ ಎಲೆಗಳನ್ನು ತೊಳೆಯಿರಿ. ಈಗ ಅವುಗಳ ಪೇಸ್ಟ್ ತಯಾರಿಸಿ, ಅದರಲ್ಲಿ ಮೊಸರು, ಆಮ್ಲಾ ಪುಡಿ, ಹೆನ್ನಾ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ. ಈಗ ಇದನ್ನು ಕೂದಲಿಗೆ ಹಚ್ಚಿ, ಸುಮಾರು 20-30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಕೂದಲಿಗೆ ಮಾವಿನ ಎಲೆಗಳ ಪ್ರಯೋಜನಗಳು ಹೀಗಿವೆ
ವಿಟಮಿನ್-ಎ, ವಿಟಮಿನ್-ಸಿ ಈ ಮಾವಿನ ಎಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇವು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಪ್ರಮುಖ ಅಂಶಗಳಾಗಿವೆ. ಅವು ಕೂದಲಿನ ಬೇರುಗಳನ್ನು (strong hair) ಬಲಪಡಿಸುತ್ತವೆ.
ಮಾವಿನ ಎಲೆಗಳಲ್ಲಿರುವ ಪೋಷಕಾಂಶಗಳು ಕೂದಲು ಉದುರುವಿಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾವಿನ ಎಲೆಗಳ ಪೇಸ್ಟ್ ಅನ್ನು ತಲೆಬುರುಡೆಗೆ ಹಚ್ಚುವುದರಿಂದ ಕೂದಲಿನ ತ್ವರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ನೆತ್ತಿಯಲ್ಲಿ ರಕ್ತ ಪರಿಚಲನೆ (blood circulation) ಸುಧಾರಿಸುತ್ತದೆ, ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ.