ನೀತಾ ಅಂಬಾನಿ ಲಕ್ಸುರಿಯಸ್ ಹ್ಯಾಂಡ್‌ಬಾಗ್ ಬೆಲೆ ಭರ್ತಿ 3.2 ಕೋಟಿ ರೂ! ಅಂಥದ್ದೇನಿದೆ ಅದ್ರಲ್ಲಿ!

Published : Jun 24, 2023, 09:46 AM IST

ಜಗತ್ತಿನ ದುಬಾರಿ ವಸ್ತುಗಳ ದೊಡ್ಡ ಕಲೆಕ್ಷನ್ ನೀತಾ ಅಂಬಾನಿ  ಬಳಿ ಇದೆ. ಅದರಲ್ಲೂ ನೀತಾ ಅಂಬಾನಿ ಹಲವು ಕಾರ್ಯಕ್ರಮಗಳಲ್ಲಿ ದುಬಾರಿ ಹ್ಯಾಂಡ್‌ ಬ್ಯಾಗ್‌ ಹಿಡಿದುಕೊಂಡಿರುವುದನ್ನು ನೋಡಬಹುದು. ಇತ್ತೀಚೆಗೆ ನೀತಾ ಅಂಬಾನಿ ಕಾರ್ಯಕ್ರಮವೊಂದರಲ್ಲಿ ಡಿಫರೆಂಟ್ ಹ್ಯಾಂಡ್ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದರು. ಈ ಚೀಲದ ಬೆಲೆ ಕೇಳಿದ್ರೆ ನೀವು ತಲೆಸುತ್ತಿ ಬೀಳೋದು ಗ್ಯಾರಂಟಿ.

PREV
16
ನೀತಾ ಅಂಬಾನಿ ಲಕ್ಸುರಿಯಸ್ ಹ್ಯಾಂಡ್‌ಬಾಗ್ ಬೆಲೆ ಭರ್ತಿ 3.2 ಕೋಟಿ ರೂ! ಅಂಥದ್ದೇನಿದೆ ಅದ್ರಲ್ಲಿ!

ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಷಾರಾಮಿ ಲೈಫ್‌ಸ್ಟೈಲ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. 59ನೇ ವಯಸ್ಸಿನಲ್ಲಿಯೂ ಸಹ, ನೀತಾ ತಮ್ಮ ಫ್ಯಾಷನ್ ಸೆನ್ಸ್‌ನಿಂದ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಅದರಲ್ಲೂ ಬಿಲಿಯನೇರ್ ಪತ್ನಿಯ ಆಸೇಸರೀಸ್‌ ಕಲೆಕ್ಷನ್ ಕೋಟಿಗಟ್ಟಲೆ ಬೆಲೆಬಾಳುತ್ತದೆ. 

26

ಜಗತ್ತಿನ ದುಬಾರಿ ವಸ್ತುಗಳ ದೊಡ್ಡ ಕಲೆಕ್ಷನ್ ನೀತಾ ಅಂಬಾನಿ  ಬಳಿ ಇದೆ. ಅದರಲ್ಲೂ ನೀತಾ ಅಂಬಾನಿ ಹಲವು ಕಾರ್ಯಕ್ರಮಗಳಲ್ಲಿ ದುಬಾರಿ ಹ್ಯಾಂಡ್‌ ಬ್ಯಾಗ್‌ ಹಿಡಿದುಕೊಂಡಿರುವುದನ್ನು ನೋಡಬಹುದು. ಇತ್ತೀಚೆಗೆ ನೀತಾ ಅಂಬಾನಿ NMACC ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಫರೆಂಟ್ ಹ್ಯಾಂಡ್ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದರು. ಈ ಚೀಲದ ಬೆಲೆ ಕೇಳಿದ್ರೆ ನೀವು ತಲೆಸುತ್ತಿ ಬೀಳೋದು ಗ್ಯಾರಂಟಿ.

36

ನೀತಾ ಅಂಬಾನಿ, ರೇಷ್ಮೆ ಆರ್ಗನ್ಜಾ, ಕೈ ಕಸೂತಿಯೊಂದಿಗೆ ಜರ್ದೋಸಿ ಹೂವಿನ ಕೆಲಸವನ್ನು ಒಳಗೊಂಡ ಡ್ರೆಸ್ ಧರಿಸಿದ್ದರು. ಈ ಸಂದರ್ಭದಲ್ಲಿ ಅವರು ಫೌಬರ್ಗ್ ಬಿರ್ಕಿನ್ 20 ವೈಟ್ ಮ್ಯಾಟ್ ಅಲಿಗೇಟರ್ ಹ್ಯಾಂಡ್ ಬ್ಯಾಗ್‌ ಹಿಡಿದುಕೊಂಡಿದ್ದರು. ನೋಡಲು ಸಿಂಪಲ್ ಆಗಿರುವ ಈ ಹ್ಯಾಂಡ್‌ಬ್ಯಾಗ್‌ ಬೆಲೆಗೆ ಹತ್ತಾರು ಅಲ್ಟ್ರಾ ಲಕ್ಸುರಿಯಸ್ ಬಂಗಲೆಗಳನ್ನೇ ಖರೀದಿಸ್ಬೋದು. 

46

ಹೌದು ಸರಳ ವಿನ್ಯಾಸದ ಜೊತೆಗೆ, ಈ ಹ್ಯಾಂಡ್‌ಬ್ಯಾಗ್‌ ಬೆಲೆ ಕೂಡ ತುಂಬಾ ಕಾಸ್ಟ್ಲೀಯಾಗಿದೆ. ಚೀಲದ ಹೊರಭಾಗವನ್ನು ಐದು ವಿಭಿನ್ನ ಅಕ್ಷರಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ವಿಶಿಷ್ಟ ಗುಣಮಟ್ಟದಿಂದಾಗಿ ಚೀಲವು ಸಾಕಷ್ಟು ಜನಪ್ರಿಯವಾಗಿದೆ. ಆದರೆ ಬೆಲೆ ಮಾತ್ರ ಊಹೆಗೂ ನಿಲುಕದ್ದು.

56

ಹೌದು ನೀತಾ ಅಂಬಾನಿ ಹಿಡಿದುಕೊಂಡಿದ್ದ ಈ ಬ್ಯಾಗ್‌ನ ಬೆಲೆ 4,00,000 USD, ಅಂದರೆ ಅಂದಾಜು 3.2 ಕೋಟಿ ರೂ. ನೀತಾ ಅಂಬಾನಿ ತಮ್ಮ ಕಾಸ್ಟ್ಲೀ ಹ್ಯಾಂಡ್‌ ಬ್ಯಾಗ್‌ಗಳಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. 'ಫೆಂಡಿ' ಮತ್ತು 'ಸೆಲೀನ್' ನಿಂದ 'ಹರ್ಮ್ಸ್' ವರೆಗೆ, ನೀತಾ ವಿಶ್ವದ ಅತ್ಯಂತ ದುಬಾರಿ ಕೈಚೀಲಗಳನ್ನು ಹೊಂದಿದ್ದಾರೆ. 

66

ಕೆಲವು ಸಮಯದ ಹಿಂದೆ ನೀತಾ ಅಂಬಾನಿ ಬಾಲಿವುಡ್ ನಟಿಯರಾದ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಜೊತೆಗಿನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಹರ್ಮ್ಸ್ ಬ್ರಾಂಡ್‌ನ ಹಿಮಾಲಯ ಬಿರ್ಕಿನ್ ಬ್ಯಾಗ್ ಅನ್ನು ನೀತಾ ಅಂಬಾನಿ ಹಿಡಿದುಕೊಂಡಿದ್ದರು. ಇದರಲ್ಲಿ ವಜ್ರಗಳು ಮತ್ತು ರತ್ನಗಳನ್ನು ಹೊದಿಸಲಾಗಿತ್ತು. ನೀತಾ ಅಂಬಾನಿ ಅವರ ಈ ಬ್ಯಾಗ್‌ನಲ್ಲಿ 240 ವಜ್ರಗಳನ್ನು ಹೊದಿಸಲಾಗಿದೆ ಎಂದು ತಿಳಿದುಬಂದಿತ್ತು.

Read more Photos on
click me!

Recommended Stories