ಕ್ಲಾಸಿಕ್ ರೆಡ್‌ನಿಂದ ನ್ಯೂಡ್ ಶೇಡ್‌ವರೆಗೂ ಈ ಲಿಪ್ ಕಲರ್ ಟ್ರೈ ಮಾಡಲೇ ಬೇಕು

First Published | Sep 2, 2021, 7:24 PM IST

ವರ್ಷದ 365 ದಿನಗಳಲ್ಲೂ ಬೇರೆ ಬೇರೆ ಲಿಪ್ ಸ್ಟಿಕ್ ಬಣ್ಣ ಹಚ್ಚೋದು ನಿಮಗೆ ಇಷೃವಾಗಿದ್ದರೆ, ಖಂಡಿತಾ ಹಚ್ಚಿ, ಕಾಲ ಮಳೆಗಾಲವೇ ಇರಲಿ, ಚಳಿಗಾಲವೇ ಇರಲಿ, ಅದಕ್ಕೆ ಸರಿಯಾದ ಶೇಡ್ ಆಯ್ಕೆ ಮಾಡಿ ಹಚ್ಚೋದು ಕೂಡ ಟ್ರೆಂಡ್. ನಿಮ್ಮ ಮೇಕಪ್ ಲುಕ್‌ಗೆ ಗೆ ಸರಿ ಹೊಂದುವ, ಜೊತೆಗೆ ಬೋಲ್ಡ್ ಮತ್ತು ಬ್ಯೂಟಿಫುಲ್ ಲುಕ್ ನೀಡುವ ಲಿಪ್ಸಿಕ್ ಶೇಡ್‌ಗಳ ಬಗ್ಗೆ ಸ್ವಲ್ಪ ನೋಡೋಣ... 

ಮಳೆಗಾಲ, ಮತ್ತು ಲಿಪ್ ಸ್ಟಿಕ್ ಶೇಡ್ಸ್ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಎಲ್ಲರೂ ಬೋಲ್ಡ್ ಲಿಪ್ ಸ್ಟಿಕ್ ಶೇಡ್ ಗಳನ್ನು ಧರಿಸಲು ಇಷ್ಟಪಡುತ್ತಾರೆ. ವಾರ್ಡ್ರೋಬ್ ಅನ್ನು ಕಂಫರ್ಟೇಬಲ್ ಆಗಿರುವ ಡ್ರೆಸ್‌ಗಳೊಂದಿಗೆ ಭರ್ತಿ ಮಾಡಲು ಈ ಸೀಸನ್‌ಗೆ ಯಾವ ಲಿಪ್ ಸ್ಟಿಕ್ ಶೇಡ್ ಸರಿ ಹೊಂದುತ್ತದೆ ಎಂದು ನೀವು ಯೋಚನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗಾಗಿಯೇ ಸಲಹೆಗಳು... 

ಕ್ಲಾಸಿಕ್ ರೆಡ್ ಲಿಪ್ ಶೇಡ್ ಈ ಸೀಸನ್‌ಗೆ ಹೇಳಿ ಮಾಡಿಸಿದ ಶೇಡ್. ವೈಬ್ರೆಂಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಬಯಸಿದರೆ, ಮಿಸ್ ಮಾಡದೇ ರೆಡ್ ಲಿಪ್ ಶೇಡ್ ಟ್ರೈ ಮಾಡಿ. ಇದು ಎವರ್ ಗ್ರೀನ್ ಶೇಡ್ ಆಗಿದ್ದು, ಯಾವ ಸಮಯದಲ್ಲೂ ತುಂಬಾ ಸುಂದರವಾಗಿ ಕಾಣುತ್ತದೆ.

Tap to resize

ಪಾಪ್ಪಿ ಪಿಂಕ್ ಲಿಪ್ ಶೇಡ್ ಈ ಸೀಸನ್‌ನಲ್ಲಿ ಸಖತ್ ಆಗಿ ಕಾಣಿಸುವಂತಹ ಲಿಪ್ ಶೇಡ್. ಯಾವುದೇ ಮದುವೆ ಸಮಾರಂಭಗಳಲ್ಲಿ ಎಥ್ನಿಕ್ ಲುಕ್ ಜೊತೆಗೆ ಈ ಶೇಡ್ ಸುಂದರವಾಗಿ ಕಾಣುತ್ತದೆ. ಪಿಂಕ್ ಪ್ರತಿಯೊಂದೂ ಉಡುಗೆಗೂ ಹೊಂದುತ್ತದೆ. ಕೆನ್ನೆ ಮೇಲೆ ಪಿಂಕ್ ಶೇಡ್ ಹಚ್ಚುವ ಮೂಲಕ ಇನ್ನಷ್ಟು ಗ್ಲಾಮರ್ ಲುಕ್ ಪಡೆಯಬಹುದು. 

ಈ ಸೀಸನ್‌ನಲ್ಲಿ ಸೂಕ್ಷ್ಮ ನ್ಯೂಡ್ ಶೇಡ್ ಟ್ರೈ ಮಾಡಬಹುದು. ಇದೂ ಎಲ್ಲಾ ಸೀಸನ್‌ಗೂ, ಎಲ್ಲಾ ಸಂದರ್ಭಕ್ಕೂ ಸೂಕ್ತವಾದಂತಹ ಶೇಡ್. ಮಾರ್ಕೆಟ್‌ನಲ್ಲಿ  ಸುಂದರವಾದ ಕಂದು ಮತ್ತು ನ್ಯೂಷ್ ಶೇಡಿನ ವಿವಿಧ ಲಿಪ್‌ಸ್ಟಿಕ್‌ಗಳಿಂದ ತುಂಬಿದೆ, ಮತ್ತು ಅವು ಸೀಸನ್‌ಗೆ ಸೂಕ್ತ ಆಯ್ಕೆ. ನೀವು ಇದನ್ನು ಟ್ರೈ ಮಾಡಬಹುದು. 

ಬರ್ಗಂಡಿ ಅಥವಾ ಬ್ರಿಕ್ ರೆಡ್ ಶೇಡ್ ಲಿಪ್‌ಸ್ಟಿಕ್ ಸೂಪರ್ ಸೆಕ್ಸಿ ಮತ್ತು ಸುಂದರವಾಗಿ ಕಾಣುತ್ತವೆ. ಅವರು ಸಂಪೂರ್ಣ ಮೇಕಪ್ ಅನ್ನು ಮಿಂಚುವಂತೆ ಮಾಡುತ್ತದೆ. ನೈಟ್ ಪಾರ್ಟಿ, ಗೌನ್, ಪಾರ್ಟಿ ವೇರ್ ಜೊತೆ ಈ ಲಿಪ್‌ಸ್ಟಿಕ್ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ. ಸಖತ್ ಬೋಲ್ಡ್ ಲುಕ್ ಪಡೆಯಲು ನೀವೂ ರೆಡ್ ಲಿಪ್ ಸ್ಟಿಕ್ ಟ್ರೈ ಮಾಡಬಹುದು. 

ಪ್ಲಮ್ ಶೇಡ್ ಲಿಪ್ ಸ್ಟಿಕ್ ಎಲ್ಲಾ ಚರ್ಮದ ಟೋನ್‌ಗಳಲ್ಲಿ ಸುಂದರವಾಗಿ ಕಾಣುತ್ತವೆ. ಈ ಶೇಡ್ಸ್ ಬೋಲ್ಡ್, ನಿರ್ಭೀತ ಮತ್ತು ಸುಂದರವಾಗಿ ಕಾಣುತ್ತವೆ. ಈ ಶೇಡ್ಸ್ ಅನ್ನು ಯಾವುದೇ ಸಂದರ್ಭದಲ್ಲೂ ಧರಿಸಲು ಯೋಚಿಸಬೇಕಾಗಿಲ್ಲ. ಇದು ಖಂಡಿತವಾಗಿಯೂ ನಿಮ್ಮನ್ನು ಸ್ಟೈಲ್ ದಿವಾನಂತೆ ಕಾಣುವಂತೆ ಮಾಡುತ್ತದೆ.

Latest Videos

click me!