ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಜನಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ಎಲ್ಲರೂ ಭಕ್ತಿ ಭಾವದಿಂದ ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಸಂಪ್ರದಾಯಿಕ ಧಿರಿಸು ಧರಿಸಿ ಕಂಗೊಳಿಸಿದ ಬಾಲಿವುಡ್ ತಾರೆಯರ ಫೋಟೋಗಳು ಇಲ್ಲಿವೆ.
ಇಲ್ಲಿ ಕತ್ರೀನಾ ಕೈಫ್, ಶಿಲ್ಪಾ ಶೆಟ್ಟಿ, ಕೃತಿ ಸನನ್ ಸೀರೆ ಧರಿಸಿ ಮಿಂಚಿದ್ದರೆ, ಶ್ರದ್ಧಾ ಕಪೂರ್, ರಶ್ಮಿಕಾ ಮಂದಣ್ಣ ಸಂಪ್ರದಾಯಿಕ ಚೂಡಿಧಾರ್ ದರಿಸಿ ಮಿಂಚಿದ್ದಾರೆ. ಅವರ ಸುಂದರ ಫೋಟೋಗಳು ಇಲ್ಲಿವೆ.
27
ಮಾಧುರಿ ದೀಕ್ಷಿತ್ ಹೂವಿನ ಡಿಸೈನ್‌ಗಳಿರುವ ಸೀರೆಯಲ್ಲಿ ಈ ನವರಾತ್ರಿಗೆ ಕಂಗೊಳಿಸಿದ್ದಾರೆ. . ಹಸಿರು, ನಸುಗೆಂಪು ಮತ್ತು ಕೆಂಪು ಬಣ್ಣಗಳಿಂದ ಕೂಡಿದ ಈ ಸೀರೆಯು ಹಲವು ಬಣ್ಣಗಳ ಮಿಶ್ರಣವಾಗಿದ್ದು, ಧಕ್ ಧಕ್ ಬೆಡಗಿಯ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡಿದವು. ಇದಕ್ಕೆ ನೇತಾಡುವ ಝುಮ್ಕಿ ಧರಿಸಿದ್ದಾರೆ ಮಾಧುರಿ.
37
ಹಾಗೆಯೇ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ಕಾರ್ಯಕ್ರಮವೊಂದಕ್ಕೆ ಕಂಗೊಳಿಸುವ ಸಲ್ವಾರ್ ಸೂಟ್ ಧರಿಸಿದ್ದು, ಹಬ್ಬದ ಕಳೆಗೆ ಮತ್ತಷ್ಟು ರಂಗು ನೀಡಿದರು.
47
ನಟಿ ಕೃತಿ ಸನನ್ ಅವರು ತರುಣ್ ತಹಿಲಿಯಾನಿ ಅವರು ಡಿಸೈನ್ ಮಾಡಿದ್ದ ಅತೀ ಸುಂದರವಾದ ಸೀರೆಯನ್ನು ಧರಿಸಿ ಮಿಂಚಿದ್ದಾರೆ. ಬಹಳ ಸಂಕೀರ್ಣವಾದ ಕಸೂತಿ ಕೆಲಸವನ್ನು ಹೊಂದಿರುವ ಈ ಸೀರೆಗೆ ಮ್ಯಾಚ್ ಆಗುವಂತಹ ಬ್ಲೌಸ್ ಧರಿಸಿ ಅವರು ನವವಧುವಿನಂತೆ ಮಿಂಚುತ್ತಿದ್ದರು. ಈ ಬ್ಲೌಸ್‌ನ ಕೈಗಳಲ್ಲಿ ತೂಗಾಡುವ ಮಣಿಗಳ ಡಿಸೈನ್ ಅವರ ಸೌಂದರ್ಯಕ್ಕೆ ಇನ್ನಷ್ಟು ಕಳೆ ನೀಡಿದವು. ಇದಕ್ಕೆ ಅವರು ರೆಡ್ ಕಲರ್ ಜೆಮ್ ಸ್ಟೋನ್ ನೆಕ್ಲೇಸ್ ಧರಿಸಿದ್ದರು.
57
ಹಾಗೆಯೇ ನಟಿ ಕತ್ರೀನಾ ಕೈಫ್ ಅವರು ಕೂಡ ತರುಣ್ ತಹ್ಲಿಯಾನಿ ಅವರು ಡಿಸೈನ್ ಮಾಡಿದ ಸೀರೆ ಧರಿಸಿದ್ದು, ಕೆಂಪು ಹಾಗೂ ತಿಳಿ ಕೇಸರಿ ಮಿಶ್ರಿತ ಈ ಸೀರೆ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದವು. ಇದಕ್ಕೆ ಅವರು ಚಿನ್ನದ ಝುಮ್ಕಿ ಹಾಗೂ ಚಿನ್ನದ ಬಳೆ ಧರಿಸಿದ್ದರು.
67
ಇನ್ನು ನಮ್ಮ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಹಬ್ಬದ ದಿನದ ಸೀರೆಗೂ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿದ್ದಾರೆ. ಹಲವು ಕಸೂತಿ ಕೆಲಸವಿರುವ ಬ್ಲೌಸ್‌ಗೆ ಅವರು ಅದಕ್ಕೆ ತಿಳಿ ನೀಳಿ ನೀಲಿ ಬಣ್ಣದ ಸೀರೆ ಧರಿಸಿದ್ದು, ಈ ಸೀರೆಯ ಬಾರ್ಡರ್‌ನಲ್ಲಿ ತೋರಣದಂತಹ ಡಿಸೈನ್ ಒಳಗೊಂಡಿತ್ತು.
77
ಇನ್ನು ಸ್ತ್ರೀ-2 ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಶಿಲ್ಪಾ ಶೆಟ್ಟಿ ಹಳದಿ ಬಣ್ಣದ ಸಹರಾ ಸೂಟ್ ಮೂಲಕ ತಮ್ಮ ಎಂದಿನ ಸಿಂಪಲ್ ಲುಕ್‌ನಲ್ಲಿ ಕಂಗೊಳಿಸಿದ್ದರು. ಸಿಂಪಲ್ ಲುಕ್‌ನಲ್ಲೂ ಶೈನ್ ಆಗ್ಬಹುದು ಅನ್ನೋದನ್ನ ಶ್ರದ್ಧಾ ತೋರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.