ಇಟಲಿಯ ಮಿಲನ್ ಫ್ಯಾಷನ್ ವೀಕ್ ನಂತರದ ಪಾರ್ಟಿಯಲ್ಲಿ ಮಿಂಚಿ, ವಿದೇಶಿ ಡಿಸೈನರ್‌ ಹೊಗಳಿದ ರಶ್ಮಿಕಾ ಮಂದಣ್ಣ

Published : Sep 23, 2024, 08:15 PM IST

ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಮಿಲನ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ್ದಾರೆ. ವಸ್ತ್ರ ವಿನ್ಯಾಸಕಿ  ಡೊನಾಟೆಲ್ಲಾ ವರ್ಸೇಸ್ ಅವರೊಂದಿಗೆ ಕಾಣಿಸಿಕೊಂಡ ರಶ್ಮಿಕಾ, ವರ್ಸೇಸ್ ಶೋನಲ್ಲಿ ವಿಶೇಷವಾಗಿ ಗಮನ ಸೆಳೆದರು.  ವರ್ಸೇಸ್ ಡಿಸೈನ್‌ಗಳಲ್ಲಿ ರಶ್ಮಿಕಾ ಅವರ ಸ್ಟೈಲಿಶ್ ಲುಕ್‌ಗಳು  ಗಮನ ಸೆಳೆದಿತ್ತು. ರಶ್ಮಿಕಾ ವಿಶ್ವ ಪ್ರಸಿದ್ಧ ವಸ್ತ್ರ ವಿನ್ಯಾಸಕಿ ಡೊನಾಟೆಲ್ಲಾ ಅವರನ್ನು ಹಾಡಿ ಹೊಗಳಿದ್ದಾರೆ.

PREV
16
ಇಟಲಿಯ ಮಿಲನ್ ಫ್ಯಾಷನ್ ವೀಕ್ ನಂತರದ ಪಾರ್ಟಿಯಲ್ಲಿ ಮಿಂಚಿ, ವಿದೇಶಿ ಡಿಸೈನರ್‌ ಹೊಗಳಿದ ರಶ್ಮಿಕಾ ಮಂದಣ್ಣ

ಕಳೆದ ವಾರ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಮಿಲನ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದರು.  ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎರಡನೇ ಬಾರಿಗೆ ಈ ಶೋ ನಲ್ಲಿ ಭಾಗವಹಿಸಿದ್ದು, ಮಿಲನ್ ಫ್ಯಾಷನ್ ವೀಕ್ ಮತ್ತು Versace show ನಲ್ಲಿ ಭಾಗವಹಿಸಿದ್ದರು. 

26

ಇದೀಗ ಸೆಪ್ಟೆಂಬರ್ 21 ರಂದು, ಮಿಲನ್ ಫ್ಯಾಶನ್ ವೀಕ್  ನಂತರ ನಡೆದ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ತನ್ನ ಅದ್ಭುತವಾದ   OOTN ನೊಂದಿಗೆ ಕಾಣಿಸಿಕೊಂಡರು.   ಡಿಸೈನರ್ ಡೊನಾಟೆಲ್ಲಾ ವರ್ಸೇಸ್ ಡೀಸೈನ್ ಮಾಡಿರುವ  ಬಟ್ಟೆ ಧರಿಸಿದ್ದರು. ಇಟಾಲಿಯನ್ ಐಷಾರಾಮಿ ಫ್ಯಾಶನ್ ಹೌಸ್ ವರ್ಸೇಸ್‌ನ  ಮುಖ್ಯಸ್ಥೆಯಾಗಿರುವ ಡೊನಾಟೆಲ್ಲಾ ವರ್ಸೇಸ್ ರಶ್ಮಿಕಾಳೊಂದಿಗಿರುವ ಫೋಟೋ ಹಂಚಿಕೊಂಡಿದ್ದಾರೆ.

36

ಡೊನಾಟೆಲ್ಲಾ ವರ್ಸೇಸ್ Instagram ನಲ್ಲಿ ಕೆಲವು ವಿಶೇಷವಾದ  ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ ಅವರೊಂದಿಗಿರುವ ಸ್ಟನ್ನಿಂಗ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಗ್ಲಿಟ್ಜಿ ಈವೆಂಟ್‌ಗಾಗಿ ರಶ್ಚಿಕಾ ಬಿಳಿ-ಕ್ರೀಂ ಬಣ್ಣ ಮಿಶ್ರಿತ ಬ್ಲೇಜರ್ ಉಡುಪನ್ನು ಧರಿಸಿದ್ದಾರೆ. ಈ ಉಡುಪು  ಸೊಗಸಾದ ಲ್ಯಾಪಲ್ಸ್, ಚೌಕಾಕಾರದ ಪ್ಯಾಡ್ಡ್ ಭುಜಗಳು, ಉದ್ದನೆಯ ತೋಳುಗಳು ಮತ್ತು ವೋಗಿಶ್ ಕೋಟ್ ಪಾಕೆಟ್ಸ್ ಒಳಗೊಂಡಿದ್ದು, ರಶ್ಚಿಕಾಗೆ ತುಂಬಾ ಚೆನ್ನಾಗಿ ಹೊಂದುತ್ತಿದೆ. ಇದಕ್ಕೆ ಸರಿಯಾಗಿ ಕಪ್ಪು ಬಣ್ಣದ ಬ್ಯಾಗ್ ಹಿಡಿದಿದ್ದಾರೆ.

46

ಮಿಲನ್ ಫ್ಯಾಷನ್ ವೀಕ್ ಮತ್ತು Versace show ಈವೆಂಟ್ ನಲ್ಲಿ ಕೂಡ ಡೊನಾಟೆಲ್ಲಾ ವರ್ಸೇಸ್ ಅವರೇ ಡಿಸೈನ್ ಮಾಡಿದ ಬಟ್ಟೆ ಧರಿಸಿದ್ದರು. ರಶ್ಮಿಕಾ ಧರಿಸಿದ್ದ ಡ್ರೆಸ್ ಫ್ಯಾಷನ್ ಈವೆಂಟ್ ನಲ್ಲಿ ಭಾರೀ ಗಮನ ಸೆಳೆದಿತ್ತು. ಕಪ್ಪು ಬಣ್ಣದ ಸ್ಲೀವ್ ಲೆಸ್ ಕ್ರಾಸೆಟ್ ಕ್ರಾಪ್ ಟಾಪ್ (croset top)  ಟೋರ್ನ್ ಜೀನ್ಸ್ ಧರಿಸಿ, ಕೈನಲ್ಲಿ ಕೆಂಪು ಬಣ್ಣದ ಹ್ಯಾಂಡ್‌ ಬ್ಯಾಗ್ ಹಿಡಿದು  ಮಿಂಚಿದ್ದು ಭಾರೀ ಮೆಚ್ಚುಗೆ ಪಡೆದಿತ್ತು.  ರಶ್ಮಿಕಾ ಬಿಂದಾಸ್ ಪೋಸ್, ಲುಕ್, ನಗು, ಸ್ಟೈಲ್ ಹುಡುಗರ ಹೃದಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.

56

ಈ ಬಗ್ಗೆ ಬರೆದುಕೊಂಡಿರುವ ನಟಿ ರಶ್ಚಿಕಾ ಮಂದಣ್ಣ, ಇಲ್ಲಿ ಸಂತೋಷ, ಬಣ್ಣಗಳು, ಬೆಳಕು, ಆಶಾವಾದ ಎಲ್ಲವೂ ಇತ್ತು. ನಾನು ಬೇರೆಯವರಂತೆ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಕಾರ್ಯಕ್ರಮದ ಭಾಗವಾಗಲು ನನಗೆ ಪರಿಪೂರ್ಣವಾಗಿದೆ ಎಂದು ನಾನು ಭಾವಿಸಿದೆ. ಡೊನಾಟೆಲ್ಲಾ ವರ್ಸೇಸ್ ನೀವು ಮಹಿಳೆಯರ ಶಕ್ತಿ ಕೇಂದ್ರವಾಗಿರುವವರು. ನಿಮ್ಮನ್ನು ಭೇಟಿಯಾಗಲು ಸಾಧ್ಯ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ನೀವು ಶಕ್ತಿ ಮತ್ತು ಪ್ರೀತಿ. ನಾನು ನಿಜವಾಗಿಯೂ ನಿನ್ನನ್ನು ಭೇಟಿಯಾದಾಗ, ನಾನು ಮೊದಲು ಯೋಚಿಸಿದ್ದಕ್ಕಿಂತಲೂ ಹೆಚ್ಚು. ಧನ್ಯವಾದಗಳು, ನಾವು ಮತ್ತೆ ಭೇಟಿಯಾಗುವವರೆಗೂ ನಿಮಗೆ ಎಲ್ಲಾ ಪ್ರೀತಿ ಮತ್ತು ಸಂತೋಷ ಮತ್ತು ಅಪ್ಪುಗೆ ಇರಲಿದೆ ಎಂದು ಡಿಸೈನರ್ ಬಗ್ಗೆ ಖುಷಿಯಿಂದ ಬರೆದುಕೊಂಡಿದ್ದಾರೆ. 
 

66

ರಶ್ಮಿಕಾ ಮಂದಣ್ಣ  ಸೌಂದರ್ಯದ ಸಾಮರ್ಥ್ಯಗಳ ಹೊರತಾಗಿಯೂ ಅವರೊಬ್ಬ ಫ್ಯಾಷನ್ ಉದ್ಯಮದಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಅವರ ವೃತ್ತಿಜೀವನವು ಅಷ್ಟೇ ಗಮನಾರ್ಹವಾಗಿದೆ.   ಪುಷ್ಪ 2: ದಿ ರೂಲ್‌ನಲ್ಲಿ ಶ್ರೀವಲ್ಲಿಯಾಗಿ ಮಿಂಚಿದ್ದಾರೆ. ರಶ್ಮಿಕಾ ಮಂದಣ್ಣ   ಕೇವಲ ಫ್ಯಾಷನ್ ಐಕಾನ್ ಅಲ್ಲ ಆದರೆ ಬಾಲಿವುಡ್ ಮತ್ತು ಜಾಗತಿಕ ಫ್ಯಾಷನ್  ಐಕಾನ್ ಎಂಬುದರಲ್ಲಿ ಎರಡು ಮಾತಿಲ್ಲ. ಮಿಲನ್ ಫ್ಯಾಶನ್ ವೀಕ್ 2024 ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 23 ರವರೆಗೆ ನಡೆದಿದೆ.

Read more Photos on
click me!

Recommended Stories