ಬ್ಲೌಸ್ ಡಿಸೈನ್ ಟ್ರೆಂಡಿಯಾಗಿದ್ದಷ್ಟೂ ಸೀರೆಗೆ ಲುಕ್ ಬರುತ್ತದೆ. ಈಗಿನವರಂತೂ ಸೀರೆಯೊಂದನ್ನು ಇಟ್ಟುಕೊಂಡು ಅದೆಷ್ಟು ರೀತಿಯ ಪ್ರಯೋಗ ಮಾಡಿ ಫ್ಯಾಶನ್ ಮೆರೆಯುತ್ತಾರೆಂಬುದನ್ನು ನೋಡಿದರೆ ಆಶ್ಚರ್ಯವಾದೀತು. ಹೆಣ್ಣುಮಕ್ಕಳು ಸೀರೆಯಷ್ಟೇ ಪ್ರಾಮುಖ್ಯತೆಯನ್ನು ಬ್ಲೌಸ್‌ಗಳಿಗೂ ಕೊಡುತ್ತಿದ್ದಾರೆ. ಬ್ಲೌಸ್ ಹಾಗೂ ಸೀರೆಯ ಡಿಸೈನ್‌ಗಳಿಗಾಗಿಯೇ ಕನ್ನಡ ಧಾರಾವಾಹಿಗಳನ್ನು ನೋಡುವ ಮಹಿಳಾ ಮಣಿಗಳ ಸಂಖ್ಯೆಯೂ ದೊಡ್ಡದಿದೆ ಎಂದರೆ ಅತಿಶಯೋಕ್ತಿಯಲ್ಲ. ಹಬ್ಬಕ್ಕೆ ಕೊಂಡ ಸೀರೆಗೆ ಯಾವ ರೀತಿ ಬ್ಲೌಸ್ ಹೊಲಿಸುವುದು ಎಂದು ತಲೆ ಕೆಡಿಸಿಕೊಂಡವರು ನೀವಾಗಿದ್ದರೆ ಇಲ್ಲಿದೆ ನೋಡಿ ಸೀರಿಯಲ್ ನಟಿಯರ ಟ್ರೆಂಡೀ ಬ್ಲೌಸ್ ಡಿಸೈನ್‌ಗಳು.