ಲಿಪ್‌ಸ್ಟಿಕ್‌ ತಯಾರಿಸೋಕೆ ಬ್ಯಾಡಗಿ ಮೆಣಸಿನಕಾಯಿಯೂ ಬೇಕು...!

First Published Aug 22, 2020, 3:42 PM IST

ಹೆಣ್ಣು ಮಕ್ಕಳ ಹ್ಯಾಂಡ್‌ಬ್ಯಾಗ್‌ನಲ್ಲಿ ಬೆಚ್ಚಗೆ ಕುಳಿತಿರುವ ವಸ್ತುಗಳಲ್ಲಿ ಲಿಪ್‌ಸ್ಟಿಕ್‌ ಕೂಡಾ ಒಂದು. ಲಿಪ್‌ಸ್ಟಿಕ್ ತಯಾರಿಸೋದು ಯಾವುದ್ರಿಂದ..? ಮೆಣಸಿನಕಾಯಿ ಹಾಕ್ತಾರೆ ಅಂದ್ರೆ ನಂಬ್ತೀರಾ..? ಲಿಪ್‌ಸ್ಟಿಕ್‌ನಲ್ಲಿ ಅಡಗಿರೋ ನೀವರಿಯದ ಇಂಗ್ರೀಡಿಯೆನ್ಸ್ ಇವು

ಕೆಂಪು ಮೆಣಿಸಿನ ಕಾಯಿ: ಬ್ಯಾಡಗಿ ಮೆಣಸಿನ ಕಾಯಿಯನ್ನು ಲಿಪ್‌ಸ್ಟಿಕ್ ತಯಾರಿಗೆ ಬಳಸಲಾಗುತ್ತದೆ. ಒಲೆಯೋರೆಸಿನ್ ಎಂಬ ತೈಲವನ್ನು ಈ ಮೆಣಸಿನ ಕಾಯಿಯಿಂದಲೇ ತಯಾರಿಸಲಾಗುತ್ತದೆ. ಈ ತೈಲವನ್ನು ಲಿಪ್‌ಸ್ಟಿಕ್ ತಯಾರಿಗೆ ಬಳಸಲಾಗುತ್ತದೆ. 1 ಟನ್ ಬ್ಯಾಡಗಿ ಮೆಣಸಿನ ಕಾಯಿಯಿಂದ 50 ಲೀಟರ್ ತೈಲ ತಯಾರಿಸಬಹುದು.
undefined
ಕೆಂಪು ತುಟಿಗಾಗಿ ಕೊಚಿನೆಲ್ ಡೈ: ಕೊಚಿನೆಲ್ ಎಂಬ ಕೀಟದಿಂದ ನೈಸರ್ಗಿಕ ಡೈ ಸಿಗುತ್ತದೆ. ಇದು ಲಿಪ್‌ಸ್ಟಿಕ್‌ಗೆ ಸರಿಯಾದ ಕೆಂಬಣ್ಣವನ್ನು ಕೊಡುತ್ತದೆ. ಇದನ್ನು ಬಿಸಿನೀರಲ್ಲಿ ಹಾಕಿ ಹುಡಿ ಮಾಡಲಾಗುತ್ತದೆ. ಕಾರ್ಮಿನಿಕ್ ಆಸಿಡ್‌ನ್ನು ಕೊಚಿನೆಲ್‌ನ ದೇಹ ಹಾಗೂ ಮೊಟ್ಟೆಯಿಂದ ತಯಾರಿಸಲಾಗುತ್ತದೆ.
undefined
ಕಲ್ಲಿದ್ದಲು ಟಾರ್:ರಸ್ತೆಗೆ ಬಳಸುವ ಟಾರ್ಲಿಪ್‌ಸ್ಟಿಕ್‌ನಲ್ಲೂ ಬಳಸಲಾಗುತ್ತದೆ. ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತೆಯಾದರೂ ಇದನ್ನು ಹೆಚ್ಚು ಹೊತ್ತು ಹಾಕಿಕೊಂಡಿದ್ದರೆ ಕ್ಯಾನ್ಸರ್‌ಗೂ ಕಾರಣವಾಗಬಹುದು.ಟಾರ್ ಡಾರ್ಕ್ ಶೇಡ್ ಹಾಗೂ ಮ್ಯಾಟ್ ಫಿನಿಶಿಂಗ್‌ಗಾಗಿ ಬಳಸಲಾಗುತ್ತೆ.
undefined
ಎಕ್ಸ್ಟ್ರಾ ಗ್ಲೋಗಾಗಿ ಮೀನಿನ ಚರ್ಮ: ಮೀನಿನ ಮೇಲಿನ ಹೊಳೆಯುವ ಭಾಗವೇ ಗ್ಲೋ ಲಿಪ್‌ಸ್ಟಿಕ್‌ನ ಸೀಕ್ರೆಟ್. ಸಿಲ್ವರ್, ಶೈನೀ ಹೊಳಪಿಗಾಗಿ ಇದನ್ನು ಬಳಸಲಾಗುತ್ತದೆ.
undefined
ಸೀಸ ಅಥವಾ ಲೆಡ್: ಲಿಪ್‌ಸ್ಟಿಕ್‌ನಲ್ಲಿ ಸೀಸ ಬೆರೆಸಲಾಗುತ್ತದೆ ಎಂದು ಎಲ್ಲೂ ಲಿಸ್ಟ್‌ನಲ್ಲಿ ಹಾಕುವುದಿಲ್ಲ. ಆದರೆ ಸೀಸ ಲಿಪ್‌ಸ್ಟಿಕ್‌ನಲ್ಲಿರುತ್ತದೆ. ಅಮೆರಿಕದ ಆಹಾರ ಮತ್ತು ಡ್ರಗ್ಸ್ ಸಂಬಂಧಿಸಿದ ಎಡ್ಮಿನಿಸ್ಟ್ರೇಷನ್ ನಡೆಸಿದ ಸರ್ವೆಯಲ್ಲಿ ಲಿಪ್‌ಸ್ಟಿಕ್‌ನಲ್ಲಿ ಸೀಸ ಬಳಸುವುದು ಸಾಬೀತಾಗಿದೆ.
undefined
click me!