ಪಾಲಕ್ (spinach) ತಿನ್ನುವವರು ಪ್ರತಿ ಬಾರಿಯೂ ಅದರ ಪ್ರಯೋಜನಗಳನ್ನು ಕೌಂಟ್ ಮಾಡಬಹುದು. ಪಾಲಕ್ ಸೊಪ್ಪು ಹೆಚ್ಚಿನ ಪೌಷ್ಠಿಕಾಂಶದಿಂದ ಕೂಡಿದೆ. ಇದು ದೇಹವನ್ನು ಪೋಷಿಸುವುದಲ್ಲದೆ, ಚರ್ಮ (Skin) ಮತ್ತು ಕೂದಲಿಗೂ (Hair) ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನೋದು ಮಾತ್ರವಲ್ಲ, ಮುಖಕ್ಕೆ ಹಚ್ಚೋದರಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು.
ಪಾಲಕ್ ಸೊಪ್ಪಿನಲ್ಲಿ ಫೈಬರ್ (Fibre), ಪ್ರೋಟೀನ್ (Proteins), ವಿಟಮಿನ್ ಎ (Vitamin A), ವಿಟಮಿನ್ ಸಿ ಮತ್ತು ವಿಟಮಿನ್-ಕೆ ಸಮೃದ್ಧವಾಗಿದೆ. ಇದರೊಂದಿಗೆ, ಇದು ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಸಿಯಮ್ನ ನಿಧಿಯಾಗಿದೆ, ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.
ಮೊಸರು-ಪಾಲಕ್ ಫೇಸ್ ಮಾಸ್ಕ್ (curd and spinach facepack)
ಈ ಮಾಸ್ಕ್ ತಯಾರಿಸಲು, ನಿಮಗೆ ಪಾಲಕ್ ಮತ್ತು ಮೊಸರು ಬೇಕು. ಐದು ಎಲೆಗಳಿಗೆ, ಮೂರು ಟೀಸ್ಪೂನ್ ಮೊಸರನ್ನು ತೆಗೆದುಕೊಳ್ಳಬಹುದು.
ಈ ಎರಡು ವಸ್ತುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಕನಿಷ್ಠ 5 ನಿಮಿಷಗಳ ಕಾಲ ಇರಿಸಿ.
15 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಈ ಪೇಸ್ಟ್ ನೊಂದಿಗೆ, ಮುಖದ ವರ್ಣದ್ರವ್ಯವು ಕ್ರಮೇಣ ಕಡಿಮೆಯಾಗುತ್ತದೆ.
ಜೇನುತುಪ್ಪ-ಪಾಲಕ್ ಮಾಸ್ಕ್
ಪಾಲಕ್ ಸೊಪ್ಪಿನ ನಾಲ್ಕು ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿ. ಇದಕ್ಕೆ ಒಂದು ಟೀಸ್ಪೂನ್ ಜೇನುತುಪ್ಪ (honey), ಒಂದು ಟೀಸ್ಪೂನ್ ತೆಂಗಿನಕಾಯಿ ಮತ್ತು ಅಷ್ಟೇ ಪ್ರಮಾಣದ ಆಲಿವ್ ಎಣ್ಣೆಯನ್ನು (olive oil) ಸೇರಿಸಿ. ಒಂದು ಟೀ ಚಮಚ ನಿಂಬೆ ರಸವನ್ನು ಸಹ ಸೇರಿಸಿ.
ಅವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ.
ಮುಖವನ್ನು ತೊಳೆಯುವ ಮೊದಲು, ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿದ ಟವೆಲ್ ಅನ್ನು ಮುಖದ ಮೇಲೆ ಹಾಕಿ ಮತ್ತು ಅದನ್ನು ಹಬೆ ಮುಖಕ್ಕೆ ಸರಿಯಾಗಿ ಹರಡುವಂತೆ ಮಾಡಿ.
ಈ ಟವೆಲ್ ಸಹಾಯದಿಂದ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.
ಈ ಪೇಸ್ಟ್ ನ ಬಳಕೆಯು ಮೊಡವೆಗಳನ್ನು (pimple) ಸಹ ಕಡಿಮೆ ಮಾಡುತ್ತದೆ.
ಕಡಲೆ ಹಿಟ್ಟು -ಪಾಲಕ್ ಮಾಸ್ಕ್
ಪಾಲಕ್ ಪೇಸ್ಟ್ ನಲ್ಲಿ ಕಡಲೆ ಹಿಟ್ಟು (besan) ಮತ್ತು ಮೊಸರನ್ನು ಮಿಶ್ರಣ ಮಾಡಿ.
ಈ ಪೇಸ್ಟ್ ಅನ್ನು ಸ್ವಲ್ಪ ದಪ್ಪವಾಗಿರಿಸಿ, ಇದು ಮುಖವನ್ನು ಟೈಟ್ ಮಾಡುತ್ತೆ.
ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
ಕಡಲೆ ಹಿಟ್ಟು ಒಣಗಲು ಪ್ರಾರಂಭಿಸಿದಾಗ, ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಈ ಮಾಸ್ಕ್ ಮುಖವನ್ನು ಎಕ್ಸ್ಫೋಲಿಯೇಟ್ (exfoliate) ಮಾಡುತ್ತದೆ. ಸತ್ತ ಚರ್ಮವು (dead skin) ಹೊರಬರುತ್ತದೆ ಮತ್ತು ಫ್ರೀ ರಾಡಿಕಲ್ಗಳನ್ನು ಸಹ ನಿವಾರಿಸುತ್ತದೆ.
ಕೂದಲಿಗೂ ಪ್ರಯೋಜನಕಾರಿ
ಪಾಲಕ್ ಮಾಸ್ಕ್ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿದೆ ಅನ್ನೋದು ಈಗಾಗಲೇ ಗೊತ್ತಾಗಿದೆ ಅಲ್ವಾ? ಅದರ ಜೊತೆ ಜೊತೆಗೆ ಇದು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಅದರ ಹೇರ್ ಮಾಸ್ಕ್ (hair mask) ತಯಾರಿಸಲು ಏನು ಮಾಡಬಹುದು ನೋಡೋಣ:
ಪಾಲಕ್ ನ ದೊಡ್ಡ ಎಲೆಗಳನ್ನು ತೆಗೆದುಕೊಳ್ಳಿ. ಇವುಗಳನ್ನು ಪೇಸ್ಟ್ ಮಾಡಿ ಮತ್ತು ಅದಕ್ಕೆ ಹರಳೆಣ್ಣೆ (castor oil), ಜೇನುತುಪ್ಪ ಮತ್ತು ನಿಂಬೆ ಸೇರಿಸಿ. ಎಲ್ಲಾ ಮೂರು ವಸ್ತುಗಳನ್ನು ಒಂದು ಚಮಚದಿಂದ ಬೆರೆಸಬೇಕು.
ಈ ಪೇಸ್ಟ್ ಹಚ್ಚಿ ಕೂದಲಿನ ಬೇರುಗಳನ್ನು ಚೆನ್ನಾಗಿ ಮಸಾಜ್ ಮಾಡಿ. ನಂತರ ಕೂದಲಿನ ಉದ್ದಕ್ಕೆ ಮಸಾಜ್ ಮಾಡಿ.
ಅರ್ಧ ಗಂಟೆಯ ನಂತರ, ಗಿಡಮೂಲಿಕೆ ಶಾಂಪೂ (herbal shampoo) ಬಳಸಿ ತಲೆಯನ್ನು ತೊಳೆಯಿರಿ.
ಕೂದಲು ಹೊಳೆಯುತ್ತದೆ ಮತ್ತು ಕೂದಲು ಬಲವಾಗಿರುತ್ತದೆ.