ಹಳೆಯ ಸ್ವೆಟರ್ ಎಸೆಯೋ ಬದಲು ಈ ರೀತಿ ಬಳಸಿ

Published : Dec 17, 2022, 11:48 AM ISTUpdated : Dec 17, 2022, 12:16 PM IST

ನೀವು ಹಳೆಯ ಸ್ವೆಟರ್ ಅನ್ನು ಎಸೆಯುವ ಬಗ್ಗೆ ಯೋಚಿಸುತ್ತಿದ್ದರೆ, ಅದರ ಬದಲು ನೀವು ಅದನ್ನು ಮತ್ತೆ ಈ ರೀತಿಯಲ್ಲಿ ಬಳಸಬಹುದು. ಹಳೆಯ ಸ್ವೆಟರ್ ನಿಂದ ಇನ್ನೇನು ಮಾಡಬಹುದು ಎಂದು ಯೋಚಿಸುತ್ತಿದ್ದರೆ, ಇದನ್ನ ನೀವು ಓದಿ. ನಿಮ್ಮ ಮನೆಗೆ ಬೇಕಾಗುವಂತಹ ವಸ್ತುಗಳನ್ನು ಸ್ವೆಟರ್ ನಿಂದ ಸುಲಭವಾಗಿ ನೀವೇ ತಯಾರಿಸಬಹುದು.

PREV
16
ಹಳೆಯ ಸ್ವೆಟರ್ ಎಸೆಯೋ ಬದಲು ಈ ರೀತಿ ಬಳಸಿ

ಚಳಿಗಾಲ ಪ್ರಾರಂಭವಾಗಿದೆ, ಹಾಗಾಗಿ ನಿಮ್ಮ ವಾರ್ಡ್ರೋಬ್ನಲ್ಲಿ ಅನೇಕ ಸ್ವೆಟರ್ಗಳು (sweater in wardrobe) ಇರೋದು ಸಾಮಾನ್ಯ, ಅವುಗಳಲ್ಲಿ ಕೆಲವು ಹಳೆಯದಾಗಿರುತ್ತವೆ ಮತ್ತು ನೀವು ಅವುಗಳನ್ನು ಬಳಸದಿರಬಹುದು, ಆದರೆ ನೀವು ಅವುಗಳನ್ನು ಎಸೆಯುವ ಬದಲು ಈ ಸ್ವೆಟರ್ಗಳನ್ನು ವಿಭಿನ್ನ ರೀತಿಯಲ್ಲಿ ಬಳಸಬಹುದು. ಈ ಲೇಖನದಲ್ಲಿ, ನಿಮ್ಮ ಹಳೆಯ ಸ್ವೆಟರ್ ಅನ್ನು ನೀವು ಮತ್ತೆ ಹೇಗೆ ಬಳಸಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ. ಈ ವಿಧಾನಗಳು ನಿಮ್ಮ ದೈನಂದಿನ ಮನೆಕೆಲಸಗಳಲ್ಲಿ ಸಹ ಸಹಾಯಕವಾಗಬಹುದು.

26

ಉಲ್ಲನ್ ದಿಂಬಿನ ಹೊದಿಕೆ ಮಾಡಿ: ಹಳೆಯ ಸ್ವೆಟರ್ ಗಳ ಅತ್ಯುತ್ತಮ ಬಳಕೆ ಉಣ್ಣೆಯ ದಿಂಬಿನ ಕವರ್ ತಯಾರಿಸುವುದು. ಇದು ನಿಮ್ಮ ಮಲಗುವ ಕೋಣೆ, ಸೋಫಾ ಅಥವಾ ಕೆಲಸದ ಕುರ್ಚಿಗೆ ಸೂಕ್ತವಾಗಿದೆ. ಸ್ವೆಟರ್ ಎಷ್ಟು ದೊಡ್ಡದಾಗಿದೆ ಅನ್ನೋದರ ಮೇಲೆ ಎಷ್ಟು ಕುಶನ್ ಕವರ್ ಗಳನ್ನು ತಯಾರಿಸಲಾಗುತ್ತದೆ ಅನ್ನೋದು ನಿಂತಿದೆ.

36

ಕಪ್ ವರ್ಮರ್  (Cup Warmer): ನೀವು ಹಳೆಯ ಸ್ವೆಟರ್ ನ ತೋಳುಗಳನ್ನು ಸಣ್ಣ ಭಾಗಗಳಾಗಿ ಕತ್ತರಿಸಬಹುದು. ಇದನ್ನು ಬಳಸಿ ಕಪ್ ಗೆ ಕಪ್ ವಾರ್ಮರ್ ತಯಾರಿಸಬಹುದು. ಇದು ದ್ರವವನ್ನು ಒಳಗೆ ಬೆಚ್ಚಗಿಡುತ್ತದೆ ಮತ್ತು ಅದೇ ಸಮಯದಲ್ಲಿ ಇದು ತುಂಬಾ ಬಿಸಿಯಾದ ಕಪ್ ಎತ್ತಲು ಸಹಾಯ ಮಾಡುತ್ತದೆ. ನೀವು ಇದನ್ನು ಗ್ಲಾಸ್ ಗಾಗಿಯೂ ತಯಾರಿಸಬಹುದು. ಇದು ಮಕ್ಕಳಿಗೆ ಸಹ ಉಪಯುಕ್ತವಾಗಿರುತ್ತದೆ. ಮಕ್ಕಳ ಹಾಲಿನ ಲೋಟವು ತುಂಬಾ ಬಿಸಿಯಾಗಿದ್ದರೂ, ಅದರ ಸಹಾಯದಿಂದ, ಮಕ್ಕಳು ಲೋಟ ಹಿಡಿಯಲು ಸಾಧ್ಯವಾಗುತ್ತದೆ.

46

ಬೂಟ್ ಟಾಪರ್ (Boot Toper): ಇದು ಸ್ಟೈಲಿಶ್ ಆಗಿ ಕಾಣುತ್ತದೆ ಮತ್ತು ಪಾದಗಳನ್ನು ಬೆಚ್ಚಗಾಗಿಸಲು ಸಹ ಬಳಸಬಹುದು. ವಾಸ್ತವವಾಗಿ, ಅನೇಕ ಬಾರಿ ಬೂಟುಗಳಿಂದಾಗಿ, ಪಾದಗಳು ನೋಯುತ್ತವೆ ಅಥವಾ ಚರ್ಮದ ಸಹ ಎದ್ದು ಬರುತ್ತೆ. ಬೂಟ್ ಗಳ ರಬ್ಬರ್ ಟಾಪ್ ಗಳು ಗಟ್ಟಿಯಾಗಿರುವುದರಿಂದ ಮತ್ತು ಅವುಗಳಿಂದಾಗಿ ಪಾದ ನೋವು ಉಂಟಾಗುತ್ತೆ. ಅದಕ್ಕಾಗಿ ನೀವು ಸ್ವೆಟರ್ ನ ಕೈಗಳನ್ನು ಕತ್ತರಿಸಿ. ಅದರ ಬಲಿಗಳನ್ನು ಸ್ಟಿಚ್ ಮಾಡಿ. ಪಾದ ಹಿಮ್ಮಡಿ ಮುಚ್ಚುವಂತೆ ಧರಿಸಬಹುದು.

56

ಕುರ್ಚಿಯ ಅಲಂಕಾರಕ್ಕೆ; ನೀವು ಹಳೆಯ ಸ್ವೆಟರನ್ನು ಚೌಕಾಕಾರಕ್ಕೆ ಕತ್ತರಿಸಿ ಅದನ್ನು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಅಥವಾ ನಿಮ್ಮ ಕೆಲಸದ ಕುರ್ಚಿಯ ಮೇಲೆ ಇಡಬಹುದು. ಚಳಿಗಾಲದ ದಿನಗಳಲ್ಲಿ ಇದು ಸಾಕಷ್ಟು ಆರಾಮದಾಯಕವಾಗಿ ಕಾಣುತ್ತದೆ. ಚಳಿಗಾಲದಲ್ಲಿ, ಕುರ್ಚಿಗಳು ತಣ್ಣಗಾಗುತ್ತವೆ. ಆ ಟೈಮ್ ಲ್ಲಿ ಸ್ವೆಟರ್ ಬೆಚ್ಚನೆಯ ಅನುಭವ ನೀಡುತ್ತೆ.

66

ಲೇಯರಿಂಗ್ (Layering): ಇನ್ನು ಸ್ವೆಟರ್ ಹಳೆಯದಾಗಿದ್ದರೆ, ಅಥವಾ ಟೈಟ್ ಆಗಿದ್ದರೆ ಅದನ್ನು ಬಿಸಾಕುವ ಬದಲು ನೀವು ಲೇಯರಿಂಗ್ ಸ್ಟೈಲ್ ಮಾಡಬಹುದು. ಅದಕ್ಕಾಗಿ ಟೀ ಶರ್ಟ್ ಧರಿಸಿ, ಅದರ ಮೇಲೆ  ಶರ್ಟ್ ಧರಿಸಿ, ಅದರ ಮೇಲೆ ನೀವು ಬಟರ್ ಹಾಕದೆ ಸ್ಟೈಲಿಶ್ ಆಗಿ ಸ್ವೆಟರ್ ಧರಿಸಬಹುದು. ಇದು ಟೈಟ್ ಕೂಡ ಆಗಲ್ಲ, ಜೊತೆಗೆ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತೆ.

Read more Photos on
click me!

Recommended Stories