1965ರ ಮಿಸ್ ಯೂನಿವರ್ಸ್, 76ನೇ ವಯಸ್ಸಲ್ಲೀಗ ಹೇಗೆ ಕಾಣಿಸ್ತಾರೆ ನೋಡಿ

Published : Aug 28, 2023, 02:33 PM IST

ಸೌಂದರ್ಯ ಸ್ಪರ್ಧೆಗಳ ಮನಮೋಹಕ ಜಗತ್ತಿನಲ್ಲಿ, ಕೆಲವರು ಎಂದಿಗೂ ಮರೆಯಾಗದ ಶಾಶ್ವತ ಪ್ರಭಾವ ಬೀರುತ್ತೆ. ಅದರಲ್ಲೂ ಮಿಸ್ ಯೂನಿವರ್ಸ್ ವಿಜೇತೆ ಅಪಾಸ್ರಾ ಹೊಂಗ್ಸಕುಲಾ ಎವರ್ ಗ್ರೀನ್ ಸೌಂದರ್ಯಕ್ಕೆ ಹೆಸರುವಾಸಿಯಾದ ಬ್ಯೂಟಿ ಕ್ವೀನ್.   

PREV
15
1965ರ ಮಿಸ್ ಯೂನಿವರ್ಸ್, 76ನೇ ವಯಸ್ಸಲ್ಲೀಗ ಹೇಗೆ ಕಾಣಿಸ್ತಾರೆ ನೋಡಿ

ಅಪಾಸ್ರಾ ಹೊಂಗ್ಸಕುಲಾ (Apasra Hongsakula) ತಮ್ಮ 18ನೇ ವಯಸ್ಸಿನಲ್ಲಿ ಮಿಸ್ ಯೂನಿವರ್ಸ್ ಆದವರು. ಇದೀಗ ತಮ್ಮ ತಮ್ಮ 76ನೇ ವಯಸ್ಸಿನಲ್ಲೂ ಅಪಾಸ್ರಾ 30 ರ ಯುವತಿಯಂತೆ ಅದ್ಭುತ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. 1965ರಲ್ಲಿ, ಅವರು ಪ್ರತಿಷ್ಠಿತ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದರು. ಅವರ ಅದ್ಭುತ ಸೌಂದರ್ಯಕ್ಕೆ ಸೋಲದವರೇ ಇಲ್ಲ. ಇದೀಗ 76ನೇ ವಯಸ್ಸಿನಲ್ಲಿ, ಅಪಾಸ್ರಾ ಹೊಂಗ್ಸಕುಲಾ ವಯಸ್ಸೇ ಆಗಿಲ್ವೇನೋ ಎನ್ನುವಂತೆ ಅದ್ಭುತವಾಗಿ ಕಾಣಿಸುತ್ತಿದ್ದಾರೆ. 
 

25

ಅಪಾಸ್ರಾ ಥೈಲ್ಯಾಂಡ್ ನ ಮೊದಲ ಮಿಸ್ ಯೂನಿವರ್ಸ್ ವಿಜೇತೆ
ಅಪಾಸ್ರಾ ಹೊಂಗ್ಸಕುಲಾ ಥೈಲ್ಯಾಂಡ್‌ನ ಮೊದಲ ಮಿಸ್ ಯೂನಿವರ್ಸ್ (Miss Universe) ವಿಜೇತೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಜಾಗತಿಕ ವೇದಿಕೆಯಲ್ಲಿ ತನ್ನ ರಾಷ್ಟ್ರವನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿದ್ದಂತೆ ಆಕೆಯ ಆಕರ್ಷಕ ಸೌಂದರ್ಯ ಎಲ್ಲರ ಮನಸ್ಸನ್ನು ಗೆದ್ದಿತು. 1965 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ಪಡೆದ ಅಪಾಸ್ರಾ ಅವರ ವಿಜಯವು ಥೈಲ್ಯಾಂಡ್ ಗೆ ಅಪಾರ ಗೌರವ ತಂದಿತ್ತು. 

35

ಅಪಾಸ್ರಾ 76ನೇ ವಯಸ್ಸಿನಲ್ಲೂ ಯಂಗ್ ಆಗಿ ಕಾಣಿಸ್ತಾರೆ
76 ವರ್ಷ ವಯಸ್ಸಿನ ಅಪಾಸ್ರಾ ಹೊಂಗ್ಸಕುಲಾ ಇಂದಿಗೂ ಸಹ 30ರ ಹರೆಯದವರಂತೆ ಕಾಣಿಸುತ್ತಾರೆ ಅವರ ಎವರ್ ಗ್ರೀನ್ ಬ್ಯೂಟಿ (evergreen beauty)ಮತ್ತು ಹೊಳಪು ಅವಳ ವಯಸ್ಸನ್ನು ಧಿಕ್ಕರಿಸುವ ಮೋಡಿಗೆ ಅನೇಕರನ್ನು ವಿಸ್ಮಯಗೊಳಿಸುತ್ತದೆ. ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮೊಮ್ಮಗನೊಂದಿಗೆ ಫೋಟೋ ಹಂಚಿಕೊಂಡಿದ್ದು, ನೋಡಿದವರು "ಅಜ್ಜಿ ತುಂಬಾ ಯಂಗ್ ಕಾಣುತ್ತಾಳೆ" ಎಂದು ಕಾಮೆಂಟ್ ಮಾಡದೆ ಇರಲು ಸಾಧ್ಯವಾಗಲಿಲ್ಲ. ಏಜ್ ಜಸ್ಟ್ ಎ ನಂಬರ್ ಅನ್ನೋದನ್ನು ಇವರು ನಿರೂಪಿಸಿದ್ದಾರೆ. 

45

ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆಯೇ?
ಅಪಾಸ್ರಾ ಈ ವಯಸ್ಸಲ್ಲೂ ಯುವತಿಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ (plastic surgery) ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರ ಮ್ಯಾನೇಜರ್ ಅವರ ವಿಚಿತ್ರ ಮತ್ತು ದುಬಾರಿ ಚಿಕಿತ್ಸೆಗಳ ಬಗ್ಗೆ ಸುತ್ತುತ್ತಿರುವ ವದಂತಿಗಳಿಗೆ ಅಂತ್ಯ ಹಾಡಿದರು,  ಅವರ ಪ್ರಕಾರ, ಅಪಾಸ್ರಾ ಮಾಡಿದ ಏಕೈಕ ಬದಲಾವಣೆಯೆಂದರೆ ಅವಳ ಕೇಶವಿನ್ಯಾಸದಲ್ಲಿ ಬದಲಾವಣೆ, ಇದರಿಂದ ಆಕೆಯ ಲುಕ್ ಬದಲಾಯಿತು ಎಂದು ಹೇಳಲಾಗಿದೆ. 

55

ಅಪಾಸ್ರಾ ಇನ್ನೂ ಯಂಗ್ ಆಗಿ ಕಾಣಿಸಲು ಕಾರಣಗಳು ಅನೇಕ ಇವೆ. ಆರೋಗ್ಯಕರ ಆಹಾರ, (healthy food) ನಿಯಮಿತ ವ್ಯಾಯಾಮ ಮತ್ತು ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್  ಬಳಸುವುದು ಅವರು ಮಿಸ್ ಮಾಡದೇ ಫಾಲೋ ಮಾಡುವ ರೂಟೀನ್ ಆಗಿದೆ.. ಇದರಿಂದಾಗಿ ಅವರು ಎವರ್ ಗ್ರೀನ್ ಆಗಿದ್ದು, ಕನ್ನಡಿಯಂತೆ ಹೊಳೆಯುವ .ತ್ವಚೆಯನ್ನು ಹೊಂದಿದ್ದಾರೆ. 

Read more Photos on
click me!

Recommended Stories