ಫ್ಯಾಷನ್ ಡಿಸೈನರ್ (fashion designer) ಸಬ್ಯಸಾಚಿ ಮುಖರ್ಜಿ ತಮ್ಮ ಬ್ರೈಡಲ್ ಕಲೆಕ್ಷನ್ ಗಾಗಿ ಪ್ಲಸ್ ಸೈಜ್ ನ ಮಾಡೆಲ್ ಗಳನ್ನು ಆಯ್ಕೆ ಮಾಡಿದಾಗ, ಜನರು ಈ ಕ್ರಮವನ್ನು ಶ್ಲಾಘಿಸಿದರು. ಯಾಕಂದ್ರೆ ನಾವು ಗಮನಿಸಿದ ಹಾಗೆ ಯಾವಗಲೂ ರ್ಯಾಂಪ್ ಮೇಲೆ ನಡೆಯೋ ಸೂಪರ್ ಮಾಡೆಲ್ ಗಳು ತುಂಬಾನೆ ತೆಳ್ಳಗಿರುತ್ತಾರೆ. ಅವರ ಮುಖದಲ್ಲಿ ಯಾವುದೆ ಭಾವನೆ ಕೂಡ ಇರೋದಿಲ್ಲ, ರ್ಯಾಂಪ್ ಮೇಲೆ ಮಾಡೆಲ್ ನಗುತ್ತಿದ್ದರೆ, ಮಾಡೆಲಿಂಗ್ ವೃತ್ತಿಯ ಪ್ರಕಾರ ಅದನ್ನು ತಪ್ಪು ಎಂದು ಪರಿಗಣಿಸಲಾಗುತ್ತದೆ.