ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ವಿಶ್ವ ಸುಂದರಿ ಕರೊಲಿನಾ, ಮಿಸ್‌ವರ್ಲ್ಡ್‌ಗೆ ಸಿನಿ ಶೆಟ್ಟಿ ಸಾಥ್!

Published : Aug 27, 2023, 07:22 PM IST

ಜಮ್ಮು ಮತ್ತು ಕಾಶ್ಮೀರ ಬದಲಾಗಿದೆ. ಹಲವು ಕಾರ್ಯಕ್ರಮಗಳು ಕಾಶ್ಮೀರದಲ್ಲಿ ನಡೆಯುತ್ತಿದೆ. ಇದೀಗ ಮಿಸ್‌ ವರ್ಲ್ಡ್ ಸುಂದರಿಗಳ ಕಾರ್ಯಕ್ರಮವೊಂದು ಕಾಶ್ಮೀರದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಮಿಸ್‌  ವರ್ಲ್ಡ್ ಕರೊಲಿನಾ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಿಸ್ ವರ್ಲ್ಡ್ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. 

PREV
16
ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ವಿಶ್ವ ಸುಂದರಿ ಕರೊಲಿನಾ, ಮಿಸ್‌ವರ್ಲ್ಡ್‌ಗೆ ಸಿನಿ ಶೆಟ್ಟಿ ಸಾಥ್!

ಉಗ್ರರ ನೆರಳಿನಿಂದ ಹೊರಬಂದಿರುವ ಕಾಶ್ಮೀರ ಇದೀಗ ನಳನಳಿಸುತ್ತಿದೆ. ಜಿ20 ಸಭೆ ಕಾಶ್ಮೀರದಲ್ಲಿ ಆಯೋಜನೆಗೊಂಡಿದೆ. ಇದೀಗ ಮಹಿಳಾ ಸಬಲೀಕರಣ ಕುರಿತು ಕಾರ್ಯಕ್ರಮ ಕಾಶ್ಮೀರದಲ್ಲಿ ಆಯೋಜಿಸಲಾಗಿದೆ.

26

ಈ ಕಾರ್ಯಕ್ರಮದಲ್ಲಿ ವಿಶ್ವ ಸುಂದರಿ ಕರೊಲಿನಾ ಬಿಲವಾಸ್ಕಾ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊದಲ ವಿಶ್ವ ಸುಂದರಿ ಅನ್ನೋ ಹೆಗ್ಗಳಿಕೆಗೆ ಕರೊಲಿನಾ ಪಾತ್ರರಾಗಲಿದ್ದಾರೆ.

36

PME ಎಂಟರ್ಟೈನ್ಮೆಂಟ್, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕರೊಲಿನಾ ಜೊತೆ ಹಲವು ವಿಶ್ವ ಸುಂದರಿಯರು ಪಾಲ್ಗೊಳ್ಳುತ್ತಿದ್ದಾರೆ.
 

46

ಈ ಕಾರ್ಯಕ್ರಮದಲ್ಲಿ ಕರೊಲಿನಾ ಜೊತೆಗೆ ಮಿಸ್  ವರ್ಲ್ಡ್ ಇಂಡಿಯಾ ಸಿನಿ ಶೆಟ್ಟಿ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಮಿಸ್ ವರ್ಲ್ಡ್ ವಿಜೇತ ಕೆರಿಬಿಯಾದ ಎಮ್ಮಿ ಪೆನ್ನಾ ಕೂಡ ಪಾಲ್ಗೊಳ್ಳುತ್ತಿದ್ದಾರೆ

56

71ನೇ ವಿಶ್ವ ಸುಂದರಿ ಸ್ಪರ್ಧೆ ಈ ಭಾರಿ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ಈ ವರ್ಷದ ಅಂತ್ಯದಲ್ಲಿ ಪ್ರತಿಷ್ಠಿತ ಸ್ಪರ್ಧೆ ನಡೆಯಲಿದೆ. ಇದಕ್ಕೂ ಮೊದಲು ಇದೀಗ ಕರೊಲಿನಾ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.

66

ಜಿ20 ವರ್ಕಿಂಗ್ ಗ್ರೂಪ್ ಟೊರಿಸಂ ಕಾರ್ಯಕ್ರಮ ನಡೆದ ತಿಂಗಳುಗಳ ಅಂತರದಲ್ಲಿ ಇದೀಗ ವಿಶ್ವ ಸುಂದರಿಗಳ ಕಾರ್ಯಕ್ರಮ ಕಾಶ್ಮೀರದಲ್ಲಿ ನಡೆಯುತ್ತಿದೆ. ಇದೀಗ ಬದಲಾದ ಕಾಶ್ಮೀರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ.

Read more Photos on
click me!

Recommended Stories