ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಅತ್ತೆಯ ಪಾತ್ರ ಮಾಡುವ ಕಾವೇರಿ ಪಾತ್ರಧಾರಿಯನ್ನು ನೀವೆಲ್ಲಾ ನೋಡಿರ್ತೀರಾ. ಸೊಸೆ ಹಾಗೂ ಇಡೀ ಮನೆಯವರನ್ನು ಡಾಮಿನೇಟ್ ಮಾಡುವ ಅತ್ತೆಯ ಪಾತ್ರವಿದು. ಸೀರಿಯಲ್ನಲ್ಲಿ ಯಾವಾಗ್ಲೂ ಸೀರೆಯುಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಆದರೆ, ಇನ್ ರಿಯಲ್ನಲ್ಲಿ ಕಾವೇರಿ ಪಾತ್ರ ಮಾಡೋ ಸುಷ್ಮಾ ನಾಣಯ್ಯ ಎಷ್ಟು ಮಾಡರ್ನ್ ಆಗಿದ್ದಾರೆ ನೋಡಿದ್ದೀರಾ? ಸಖತ್ ಸ್ಟೈಲಿಶ್ ಡ್ರೆಸ್ನಲ್ಲಿ ಸುಷ್ಮಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಾತ್ರವಲ್ಲ ಕುಟುಂಬದ ಜೊತೆಗಿರೋ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಸುಷ್ಮಾ ನಾಣಯ್ಯ ಕಿರುತೆರೆ ನಟಿ ಹಾಗೂ ರಂಗಭೂಮಿ ಕಲಾವಿದೆ. ಮೂಲತಃ ಮೈಸೂರಿನವರು. ರಂಗಭೂಮಿ ಕಲಾವಿದೆಯಾಗಿಯಾಗಿರುವ ಇವರು ಈವರೆಗೂ ಸುಮಾರು 12ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಖ್ಯಾತ ಭರತನಾಟ್ಯ ಕಲಾವಿದರಾದ ಉಷಾ ನಾಣಯ್ಯ ಹಾಗೂ ದಿವಂಗತ ಅಲೆಮಡಾ ನಾಣಯ್ಯ ಅವರ ಪುತ್ರಿ ಸುಷ್ಮಾ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ಪದವೀಧರೆ. ಸದ್ಯಕ್ಕೆ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್. ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಪೊಸೆಸಿವ್ ಅತ್ತೆಯ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಸುಷ್ಮಾ, ಗಂಡ ಹಾಗೂ ಹೆಣ್ಣು ಮಗುವಿನ ಜೊತೆ ಫೋಟೋಗೆ ಫೋಸ್ ನೀಡಿದ್ದು ಇದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪಿಂಕ್ ಸೀರೆಯಲ್ಲಿ ಸುಷ್ಮಾ ಮುದ್ದಾಗಿ ಕಾಣಿಸುತ್ತಿದ್ದಾರೆ.
ಕೇವಲ ಕಲಾವಿದರಾಗಿ ಮಾತ್ರವಲ್ಲದೆ ಮೇಕಪ್ ಆರ್ಟಿಸ್ಟ್ ಆಗಿಯೂ ಸುಷ್ಮಾ ನಾಣಯ್ಯ ಒಳ್ಳೆಯ ಹೆಸರು ಮಾಡಿದ್ದಾರೆ. ಅವರ ಇನ್ಸ್ಟಾಗ್ರಾಂ ಐಡಿ 'ಮೇಕಪ್ ಬೈ ಸುಷ್ಮಾ ನಾಣಯ್ಯ' ಎಂಬುದಾಗಿದೆ.
ಆಗಾಗ ತಾವು ಮೇಕಪ್ ಮಾಡಿದ ಸುಂದರವಾದ ಬ್ರೈಡಲ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕೆ ಹಲವು ಲೈಕ್ಸ್, ಕಾಮೆಂಟ್ ಬರುತ್ತವೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ನ ಅಮ್ಮ, ಅತ್ತೆ ಕಾವೇರಿ ಪಾತ್ರಕ್ಕೆ ದಿನ ಬೆಳಗಾದ್ರೆ ವೀಕ್ಷಕರು ಹಿಡಿಶಾಪ ಹಾಕ್ತಿದ್ದಾರೆ. ಯಾರಿಗೂ ಕಾವೇರಿ ತರದ ತಾಯಿ ಸಿಗೋದು ಬೇಡ ಅಂತ ವೀಕ್ಷಕರು ಬೇಡಿಕೊಳ್ಳೋ ಲೆವೆಲ್ಗೆ ಹೋಗಿದ್ದಾರೆ.