ಜಗತ್ತಿನ ಅತೀ ದುಬಾರಿ ಹೈಹೀಲ್ಸ್‌ಗಳಿವು: ಇವುಗಳ ಬೆಲೆಗೆ ದೊಡ್ಡ ಆಸ್ತಿಯನ್ನೇ ಕೊಳ್ಬಹುದು...!

First Published Nov 29, 2023, 1:17 PM IST

ಮಹಿಳಾ ಫ್ಯಾಷನ್‌ ಲೋಕದಲ್ಲಿ ಹೈ ಹೀಲ್ಡ್‌ಗೆ ಎಲ್ಲಿಲ್ಲದ ಮಹತ್ವವಿದೆ. ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡುವ ಪ್ರತಿಯೊಬ್ಬ ಮಾಡೆಲ್‌ಗಳ ಅಚ್ಚುಮೆಚ್ಚಿನ ಪಾದರಕ್ಷೆ ಎಂದರೆ ಅದು ಹೈ ಹೀಲ್ಡ್‌.  ಮಾಡೆಲ್‌ಗಳ ಬೆಕ್ಕಿನ ನಡಿಗೆಗೆ ತನ್ನದೇ ಆದ ಮೆರುಗು ನೀಡುತ್ತದೆ ಈ ಹೈಹೀಲ್ಡ್‌. ಇಂತಹ ಹೈ ಹೀಲ್ಡ್‌ಗಳು ಎಷ್ಟು ದುಬಾರಿ? ಜಗತ್ತಿನ ಅತೀ ದುಬಾರಿ ಎನಿಸಿರುವ ಕೆಲ ಹೈ ಹೀಲ್ಡ್‌ಗಳ ಬೆಲೆ ಕೇಳಿದರೆ ನೀವು ಹೌಹಾರೋದು ಪಕ್ಕಾ. ಇವುಗಳ ಬೆಲೆಗೆ ಒಂದು ದೊಡ್ಡದಾದ ಬಂಗಲೆಯನ್ನೇ ಕೊಳ್ಳಬಹುದು. ಇಂತಹ ಕೆಲ ದುಬಾರಿ ಹೈ ಹೀಲ್‌ಗಳ ವಿವರ ಇಲ್ಲಿದೆ ನೋಡಿ.

ಆಂಟೋನಿಯೊ ವಿಯೆಟ್ರಿ ಮೂನ್ ಸ್ಟಾರ್ ಶೂಸ್: ಇದರ ಬೆಲೆ ಬರೋಬ್ಬರಿ 19.9 ಮಿಲಿಯನ್ ಡಾಲರ್ ಅಂದರೆ 1 657 620 409 ,  ಇದು ಸರ್ವಕಾಲಕ್ಕೂ ಜಗತ್ತಿನ ಅತೀ ದುಬಾರಿ ಎನಿಸಿದ ಹೈ ಹೀಲ್‌ ಪಾದರಕ್ಷೆ ಎನಿಸಿದ್ದು,  ಇದರ ಹಿಮ್ಮಡಿಯನ್ನು ಬಂಗಾರದಿಂದ ಮಾಡಲಾಗಿದೆ. ಮುಂಭಾಗದಲ್ಲಿ 30 ಕ್ಯಾರೆಟ್‌ನ ವಜ್ರಗಳನ್ನು ಕೂರಿಸಲಾಗಿದೆ. 1576ರ ಉಲ್ಕಾಶಿಲೆಯಿಂದ ಇದನ್ನು ಮಾಡಲಾಗಿದ್ದು, ಇದನ್ನು ಜಗತ್ತಿನ ಮೊದಲ 24 ಕ್ಯಾರೆಟ್‌ ಬಂಗಾರದ ಪಾದರಕ್ಷೆ ಎಂದೂ ಗುರುತಿಸಲಾಗಿದೆ.

ಜಡಾ ದುಬೈ ಪ್ಯಾಶನ್ ಡೈಮಂಡ್ ಸ್ಟಿಲೆಟೊಸ್: ವಿಶ್ವದ ಅತ್ಯಂತ ದುಬಾರಿ ಶೂಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ ಇದರ ಬೆಲೆ 17 ಮಿಲಿಯನ್ ಡಾಲರ್‌, ಜಡಾ ದುಬೈ ಶೂ. ಜಗತ್ತಿನ ಹಲವು ಮಾನ ನಿರ್ಮಿತ ಅಧ್ಬುತಗಳಿಗೆ ಹೆಸರಾಗಿರುವ ದುಬೈನಲ್ಲಿ ಇದನ್ನು ತಯಾರಿಸಲಾಗಿದ್ದು, ಇದರ ತಯಾರಿಗೆ ಸುಮಾರು 9 ತಿಂಗಳು ಹಿಡಿದಿದೆಯಂತೆ. ಇದು 15 ಕ್ಯಾರೆಟ್ ಶುದ್ಧ ವಜ್ರದಿಂದ ತಯಾರಿಸಲಾಗಿದ್ದು,ಈ ಹೀಲ್ಡ್‌ ಧರಿಸಿದವರ ಕಾಲನ್ನು ಈ ವಜ್ರಗಳು ಅಲಂಕರಿಸುತ್ತವೆ.  118  ವಜ್ರಗಳೂ ಈ ಹೈ ಹೀಲ್‌ ಈ ಶೂವನ್ನು ಸುತ್ತುವರೆದಿವೆ. 

Latest Videos


ಡೆಬ್ಬಿ ವಿಂಗ್ಹ್ಯಾಮ್ ಡೈಮಂಡ್ ಸ್ಟಿಲೆಟೊಸ್: ಯುಕೆ ಡಿಸೈನರ್ ಡೆಬ್ಬಿ ವಿಂಗ್‌ಹ್ಯಾಮ್ ಸೃಷ್ಟಿಸಿದ ಈ ವಿಂಟೇಜ್ ಹೀಲ್ಸ್‌ಗಳು ಲಕ್ಸುರಿಯಸ್ ಶೂಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಈ ಹೈಹೀಲ್ ಶೂ ದರ 15.1 ಮಿಲಿಯನ್ ಡಾಲರ್, 3 ಕ್ಯಾರೆಟ್ ಅಪರೂಪದ ಗುಲಾಬಿ ಬಣ್ಣದ ವಜ್ರ ಹಾಗೂ ಒಂದು ಕ್ಯಾರೆಟ್‌ನ ನೀಲಿ ವಜ್ರಗಳನ್ನು ಇದು ಒಳಗೊಂಡಿದೆ. ಈ ಒಂದೊಂದು ವಜ್ರಕ್ಕೆ 128 ಕೆ ಯುಎಸ್‌ಡಿ ಡಾಲರ್‌ ಬೆಲೆ ಇದೆ. ಇದರಲ್ಲೇ ಊಹಿಸಿಕೊಳ್ಳಿ ಈ ಶೂ ಎಷ್ಟೊಂದು ದುಬಾರಿ ಎಂಬುದು. ಗಟ್ಟಿ  ಚಿನ್ನದ ಝಿಪ್‌ ಹಾಗೂ ಶೂನ ಅಡಿಭಾಗವನ್ನು 24  ಕ್ಯಾರೆಟ್ ಬಂಗಾರದಿಂದ ಅಲಂಕರಿಸಲಾಗಿದೆ. ಜೊತೆಗೆ 18 ಕ್ಯಾರೆಟ್ ಚಿನ್ನದ ದಾರದಿಂ  ಹೊಲಿಗಯಲಾಗಿದೆ.

ಸ್ಟುವರ್ಟ್ ವೈಟ್ಜ್‌ಮನ್ ರೀಟಾ ಹೇವರ್ತ್ ಹೀಲ್ಸ್:  ಶೂಗಳ ಸಂಗ್ರಹದ ಹುಚ್ಚು ಹೊಂದಿದ್ದವರು ಹಾಲಿವುಡ್ ಸಿನಿಮಾಗಳ ಅಭಿಮಾನಿಯೂ ಆಗಿದ್ದರೆ ಅವರು ಖಂಡಿತ ಈ  ಶೂ ತಮ್ಮಲ್ಲೂ ಇರಬೇಕು ಎಂದು ಆಸೆ ಪಡುತ್ತಾರೆ. ಐಷಾರಾಮಿ ಬ್ರಾಂಡ್ ಸ್ಟುವರ್ಟ್ ವೈಟ್ಜ್‌ಮನ್‌ ಅತ್ಯಂತ ದುಬಾರಿ ಹೈ ಹೀಲ್ ಶೂ ರೀಟಾ ಹೇವರ್ತ್ ಹೀಲ್ಸ್  ಇದಾಗಿದೆ.  ವಜ್ರಗಳು, ಮಾಣಿಕ್ಯ ಮತ್ತು ನೀಲಮಣಿಗಳನ್ನು ಒಳಗೊಂಡಿರುತ್ತವೆ. ಹಿಮ್ಮಡಿಯನ್ನು ಕಂದು ಬಣ್ಣದ ಸ್ಯಾಟಿನ್‌ನಿಂದ ನಿರ್ಮಿಸಲಾಗಿದ್ದು, ಈ ಶೂಗಳು ಬ್ರಾಂಡೆಂಡ್ ಜೊತೆ ಕ್ಲಾಸಿಯಾಗಿ ಕಾಣಿಸುತ್ತವೆ. ಈ ಒಂದು ಜೊತೆ ಶೂವಿನ ದರ 3 ಮಿಲಿಯನ್ ಡಾಲರ್

ಹ್ಯಾರಿ ವಿನ್‌ಸ್ಟನ್ ರೂಬಿ ಹೈ ಹೀಲ್ ಶೂ: ಇದರ ದರವೂ 3 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 25,00,84,350 ರೂ. ಇದು ಹಾಲಿವುಡ್ ಸಿನಿಮಾಗಳಿಂದ ಪ್ರಭಾವಿತವಾಗಿ ನಿರ್ಮಾಣವಾದ ಅತ್ಯಂತ ಆಕರ್ಷಕ ಹೈ ಹೀಲ್ ಶೂ. The Wizard Of Oz ಸಿನಿಮಾದ ಡೊರೊಥಿ ಪಾತ್ರಧಾರಿಯಿಂದ ಸ್ಪೂರ್ತಿ ಪಡೆದು ಈ ಶೂ ನಿರ್ಮಾಣವಾಗಿದೆ. ಈ ಕೆಂಪು ಬಣ್ಣದ ಶೂಗಳನ್ನು ಸಂಪೂರ್ಣ ನಿಜವಾದ ಮಾಣಿಕ್ಯದಿಂದ ನಿರ್ಮಿಸಿದ್ದಾರೆ ವಿನ್ಯಾಸಕಾರ ರೊನಾಲ್ಡ್ ವಿನ್‌ಸ್ಟನ್, ಇದರ ನಿರ್ಮಾಣಕ್ಕೆ 50 ಕ್ಯಾರೆಟ್‌ನ ವಜ್ರ  ಹಾಗೂ 4500 ಕ್ಯಾರೆಟ್‌ನ ಮಾಣಿಕ್ಯಗಳನ್ನು ಬಳಸಲಾಗಿದೆ.

ಸ್ಟುವರ್ಟ್ ವೈಟ್ಜ್‌ಮನ್ ಅವರ ಸಿಂಡ್ರೆಲ್ಲಾ ಶೂಗಳ ಬೆಲೆ 2 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ16.48 ಕೋಟಿ, ಸಿಂಡ್ರೆಲ್ಲಾ ಶೂಗಳು ಹೇಗಿತ್ತು ಎಂಬ ಬಹುತೇಕರ ಕಲ್ಪನೆಗೆ ಸ್ಟುವರ್ಟ್ ವೈಟ್ಜ್‌ಮನ್ ಈ ಹೈ ಹೀಲ್ ಶೂಗಳ ಮೂಲಕ ಜೀವ ತುಂಬಿದರು. ಆಕರ್ಷಣೆಯ ಜೊತೆ ಕ್ಲಾಸಿ ಆಗಿರುವ ಈ ಶೂಗಳನ್ನು ಸಂಪೂರ್ಣ ವಜ್ರಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿ 55 ಕ್ಯಾರೆಟ್‌ನ 565 ಡೈಮಂಡ್‌ಗಳನ್ನು ಬಳಸಲಾಗಿದೆ. ಕಂಟ್ರಿ ಸಿಂಗರ್ ಅಲಿಸನ್ ಕ್ರೌಸ್ ಅವರು 2004ರ ಆಸ್ಕರ್ ಪ್ರಶಸ್ತಿ ವೇಳೆ ಈ 2 ಮಿಲಿಯನ್‌ನ ಶೂ ಧರಿಸಿದ್ದರು.

ಸ್ಟುವರ್ಟ್ ವೈಟ್ಜ್‌ಮನ್ ಅವರ ಟಾಂಜಾನೈಟ್ ಹೀಲ್ಸ್ : ಇದರ ದರ ಬರೋಬ್ಬರಿ 2 ಮಿಲಿಯನ್ ಡಾಲರ್. 1960 ರ ದಶಕದ ಮಧ್ಯಭಾಗದಲ್ಲಿ ಕಿಲಿಮಂಜಾರೋ ಪರ್ವತದಲ್ಲಿ ಪತ್ತೆಯಾದ ನಿಜವಾದ ಟಾಂಜಾನೈಟ್ ರತ್ನದ ಕಲ್ಲುಗಳನ್ನು ಈ ಹೈ ಹೀಲ್‌ನ ನಿರ್ಮಾಣದಲ್ಲಿ ಬಳಸಲಾಗಿದೆ. ವೈಟ್ಜ್‌ಮನ್ ಅತ್ಯಂತ ದುಬಾರಿ ಶೂ ಬ್ರ್ಯಾಂಡ್‌ಗಳಲ್ಲಿ ಇದು ಒಂದಾಗಿದೆ. ಬೆಳ್ಳಿ ವಜ್ರಗಳು ಹಾಗೂ ಟಾಂಜಾನೈಟ್ ರತ್ನದ ಕಲ್ಲುಗಳನ್ನು ಇದು ಒಳಗೊಂಡಿದೆ.  ಪ್ಲಾಟಿನಂ ಚೌಕಟ್ಟನ್ನು ಇದು ಹೊಂದಿದ್ದು, ಹಿಮ್ಮಡಿಯ ಮುಂಭಾಗದ ಪಟ್ಟಿಗಳಲ್ಲಿ 28 ಕ್ಯಾರೆಟ್‌ ವಜ್ರಗಳಿವೆ. ಪಾದದ ಮೇಲಿರುವ ದಾರ 200 ಕ್ಯಾರೆಟ್ ಟಾಂಜಾನೈಟ್ ಹೊಂದಿದೆ

ಸ್ಟುವರ್ಟ್ ವೈಟ್ಜ್‌ಮನ್  ಅವರ ವಿಝಾರ್ಡ್ ಆಫ್ ಓಜ್ ರೂಬಿ ಸ್ಟಿಲೆಟೊಸ್ : ಈ ಹೈ ಹೀಲ್ ಶೂ ದರ 1.6 ಮಿಲಿಯನ್ ಡಾಲರ್. ಇದನ್ನು ಕೂಡ  ದಿ ವಿಝಾರ್ಡ್ ಆಫ್ ಓಜ್‌ನ ಡೊರೊಥಿ ಪಾತ್ರಧಾರಿಯ ಚಪ್ಪಲಿಗಳಿಂದ ಪ್ರಭಾವಿತಗೊಂಡು ನಿರ್ಮಿಸಲಾಗಿದೆ. ಇದು ಅಮೂಲ್ಯವಾದ 642 ಬರ್ಮಾ ಮಾಣಿಕ್ಯಗಳನ್ನು ಹೊಂದಿದೆ. ಚೆರ್ರಿ ಕೆಂಪು ಬಣ್ಣದ ಇನ್ಸೊಲ್‌ನಿಂದ ಡಿಸೈನ್ ಮಾಡಲಾಗಿದ್ದು, ಅರ್ಧ ಪೌಂಡ್ ಪ್ಲಾಟಿನಂ ಅನ್ನು ಕೂಡ ಇದು ಒಳಗೊಂಡಿದೆ.

ಸ್ಟುವರ್ಟ್ ವೈಟ್ಜ್‌ಮನ್ ಅವರ ಮತ್ತೊಂದು ಐಷಾರಾಮಿ ಶೂ ಈ ಪ್ಲಾಟಿನಂ ಗಿಲ್ಡ್  ಇದರ ಬೆಲೆ ಬರೋಬ್ಬರಿ 1.09 ಮಿಲಿಯನ್ ಡಾಲರ್‌, ವಿಶಿಷ್ಟವಾದ ವಿನ್ಯಾಸದ ಜೊತೆ ಇದು ಪಿಯರ್ ಡೈಮಂಡ್‌ನಿಂದ ಎಲ್ಲರ ಆಕರ್ಷಿಸುತ್ತದೆ. ತೆಗೆಯಬಹುದಾದ ಪಟ್ಟಿಯನ್ನು ಇದು ಹೊಂದಿದ್ದು, ಇದನ್ನು ನೆಕ್ಲೇಸ್ ಅಥವಾ ಬ್ರೇಸ್ಲೇಟ್‌ನಂತೆಯೂ ಬಳಸಬಹುದಾಗಿದೆ. ಈ ಹೈ ಹೀಲ್‌ಗಳು 460 ಕ್ವಿಯಾಟ್ ಡೈಮಂಡ್‌ಗಳನ್ನು ಒಳಗೊಂಡಿವೆ. ದುಬಾರಿಯ ಜೊತೆ ಇದರ ಕಲಾತ್ಮಕತೆ ಎಲ್ಲರನ್ನು ಬಹುವಾಗಿ ಆಕರ್ಷಿಸುತ್ತದೆ.

ಸ್ಟುವರ್ಟ್ ವೈಟ್ಜ್‌ಮನ್ ಅವರ ಮತ್ತೊಂದು ಅದ್ಭುತ ಐಷಾರಾಮಿ ಶೂ ಈ ಮೇರಿಲಿನ್ ಮನ್ರೋ  ಇದರ ದರ 1 ಮಿಲಿಯನ್ ಡಾಲರ್, ಸ್ಯಾಟಿನ್ ಬಣ್ಣದ ಗುಲಾಬಿ ಈ ಹೀಲ್ಸ್   ಮೇಲಿದೆ. ಇದರ ಜೊತೆ ಸ್ವರೋವ್ಸ್ಕಿ ಹರಳುಗಳಿದ್ದು, ಈ ಹರಳುಗಳು ಒಂದು ಕಾಲದ  ಅಮೆರಿಕನ್ ನಟಿ ಮಾಡೆಲ್ ಮರ್ಲಿನ್ ಮನ್ರೋಗೆ ಸೇರಿದ್ದ ಕಿವಿಯೋಲೆಗಳಾಗಿವೆ.

click me!