ನ್ಯೂಸ್ ಪೇಪರ್ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಪುತ್ರಿ, ಐಶ್ವರ್ಯ ನಮ್ಮ ಕ್ರಶ್ ಎಂದ ಫ್ಯಾನ್ಸ್!

First Published | May 31, 2024, 3:50 PM IST

ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಸೌಂದರ್ಯ, ಫ್ಯಾಶನ್, ನಾಯಕತ್ವ ಗುಣಕ್ಕೆ ಅಭಿಮಾನಿಗಳ ಬಳಗವೇ ಇದೆ. ಶಿಕ್ಷಣ ಸಂಸ್ಥೆ ಸೇರಿ ಹಲವು ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಐಶ್ವರ್ಯ ಇದೀಗ ನ್ಯೂಸ್ ಪೇಪರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಬಾರಿ ಸಂಚಲನ ಸೃಷ್ಟಿಸಿದ್ದಾರೆ.
 

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಐಶ್ವರ್ಯ ಡಿಕೆಎಸ್ ಹೆಗ್ಡೆ ಸಾಮಾಜಿಕ ಸೇವೆಯಲ್ಲಿ, ಉದ್ಯಮಿಯಾಗಿ, ಫ್ಯಾಶನ್ ಜಗತ್ತಿನಲ್ಲಿ ಭಾರಿ ಜನಪ್ರಿಯತೆಗಳಿಸಿದ್ದಾರೆ. ಐಶ್ವರ್ಯ ಸೌಂದರ್ಯ, ನಾಯಕತ್ವ ಸೇರಿದಂತೆ ಹಲವು ಕಾರಣಗಳಿಂದ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
 

ಇದೀಗ ಐಶ್ವರ್ಯ ಡಿಕೆಎಸ್ ಹೆಗ್ಡೆ ಹೊಸ ಫ್ಯಾಶನ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಸ್ ಪೇಪರ್ ರೀತಿ ಕಾಣುವ ಡ್ರೆಸ್‌ನಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ. 
 

Tap to resize

ಶಿಕ್ಷಣ ಸಂಸ್ಥೆಗಳ ಕಾರ್ಯಾಗಾರ ನಡೆಸಿಕೊಟ್ಟ ಐಶ್ವರ್ಯ ತಮ್ಮ ಫ್ಯಾಶನ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸುದ್ದಿ ಪತ್ರಿಕೆ ರೀತಿಯಲ್ಲಿರುವ ಡ್ರೆಸ್ ಹಾಕಿ ಭಾರಿ ಮೆಚ್ಚುಗೆ ಗಳಿಸಿದ್ದಾರೆ.
 

ಇಂಗ್ಲೀಷ್ ಸುದ್ದಿ ಪತ್ರಿಕೆ ಹೋಲುವ ಡ್ರೆಸ್ ಧರಿಸಿದ ಐಶ್ವರ್ಯ, ಮತ್ತಷ್ಟು ಮುದ್ದಾಗಿ ಕಾಣಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ಐಶ್ವರ್ಯ ಪ್ರತಿ ಬಾರಿ ಹೊಸ ಹೊಸ ಡಿಸೈನ್, ಭಿನ್ನ ಫ್ಯಾಶನ್ ಮೂಲಕ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಐಶ್ವರ್ಯ ತಮ್ಮದೇ ಸ್ವಂತ ಟಾಪ್ ಬ್ರ್ಯಾಂಡ್ ಹೊಂದಿದ್ದಾರೆ.
 

Aisshwarya DKS Hegde

ಚಿಲ್ಲೋಸಫಿ ಅನ್ನೋ ಉಡುಪು ಉತ್ಪನ್ನದ ಮಾಲಕಿಯಾಗಿರುವ ಐಶ್ವರ್ಯ, ಚಿಲ್ಲೋಸಫಿಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಈ ಫ್ಯಾಶನ್ ಬ್ರ್ಯಾಂಡ್ ಐಶ್ವರ್ಯಗೆ ಒಪ್ಪುವ ಡ್ರೆಸ್ ನೀಡಿ ಮತ್ತೆ ಸದ್ದು ಮಾಡಿದೆ.
 

2018ರಲ್ಲಿ ಚಿಲ್ಲೋಸಫಿ ಅನ್ನೋ ಫ್ಯಾಶನ್ ಬ್ರ್ಯಾಂಡ್ ಹುಟ್ಟುಹಾಕಿದ್ದಾರೆ. ಚಿಲ್ಲೋಸಫಿ ಹಲವು ರೀತಿಯ ಟಾಪ್‌ಗಳನ್ನು ವಿವಿದ ವಿನ್ಯಾಸದಲ್ಲಿ ನೀಡುತ್ತಿದೆ. 
 

ಫ್ಯಾಶನ್ ಬ್ರ್ಯಾಂಡ್ ಜೊತೆ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾ ಮಹತ್ತರ ಜವಾಬ್ದಾರಿಯನ್ನು ಐಶ್ವರ್ಯ ಹೊತ್ತುಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯಾವಾಗಿದ್ದಾರೆ.
 

Latest Videos

click me!