ಕೇನ್ಸ್‌ನಲ್ಲಿ ಗುಲಾಬಿ ಚಿಟ್ಟೆಯಂತೆ ಎಲ್ಲರ ಗಮನ ಸೆಳೆದ ರೌಟೇಲಾ; ಈಕೆ ಇಂದ್ರಲೋಕದ ಊರ್ವಶಿಯೇ ಹೌದೆಂದ್ರು ಜನ

First Published | May 16, 2024, 7:02 PM IST

ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಊರ್ವಶಿ ರೌಟೇಲಾ ಗುಲಾಬಿ ಬಣ್ಣದ ರಫೆಲ್ ಡ್ರೆಸ್‌ನಲ್ಲಿ ಚಿಟ್ಟೆಯಂತೆ ಕಾಣುತ್ತಾ ಎಲ್ಲರ ಗಮನ ಸೆಳೆದರು. 

ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬುಧವಾರ ನಟಿ ಊರ್ವಶಿ ರೌಟೇಲಾ ಗುಲಾಬಿ ಬಣ್ಣದ ರಫೆಲ್ ಡ್ರೆಸ್‌ನಲ್ಲಿ ಚಿಟ್ಟೆಯಂತೆ ಕಾಣುತ್ತಾ ಎಲ್ಲರ ಗಮನ ಸೆಳೆದರು. 

ಊರ್ವಶಿ ರೌಟೇಲಾ ಕೇನ್ಸ್ 2024 ರಲ್ಲಿ ತಮ್ಮ ಮಾದಕ ನೋಟದಿಂದ ಇಂಟರ್ನೆಟ್‌ನಲ್ಲಿ ಸೆನ್ಸೇಶನ್ ಹುಟ್ಟು ಹಾಕಿದ್ದಾರೆ.  ಬಾಲಿವುಡ್ ನಟಿ ಸತತ ಮೂರನೇ ವರ್ಷ ಕ್ಯಾನೆಸ್ ರೆಡ್ ಕಾರ್ಪೆಟ್ ಮೇಲೆ ನಡೆದರು. 

Tap to resize

ರೆಡ್ ಕಾರ್ಪೆಟ್‌ನಲ್ಲಿ ಸಂಚಲನ ಮೂಡಿಸಿದ ಪಿಂಕ್ ಫ್ಯಾಶನ್ ಗೌನನ್ನು ಖ್ಯಾತರಾದ ಖಲೀದ್ ಮತ್ತು ಮರ್ವಾನ್ ವಿನ್ಯಾಸಗೊಳಿಸಿದ್ದಾರೆ. 

ಈ ಸಂಬಂಧ ಫೋಟೋಗಳನ್ನು ತನ್ನ ಸೋಷ್ಯಲ್ ಮೀಡಿಯಾದಲ್ಲಿ ಊರ್ವಶಿ ಹಂಚಿಕೊಂಡಿದ್ದಾರೆ. ಪಿಂಕ್ ಬಣ್ಣದ ಗೌನ್‌ನೊಂದಿಗೆ ದೊಡ್ಡ ರೆಕ್ಕೆಯಂಥ ರಫೆಲ್ ಫ್ಯಾಶನ್, ತೆರೆದ ತೊಡೆ, ಕೈಗೆ ಪಿಂಕ್ ಗ್ಲೌಸ್, ಪಿಂಕ್ ಹೀಲ್ಸ್, ತಲೆಗೆ ಪಿಂಕ್ ಹೇರ್‌ಬ್ಯಾಂಡ್ ಧರಿಸಿ ನಟಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. 

ಊರ್ವಶಿ ರೌಟೇಲಾ  2022ರಲ್ಲಿ ತನ್ನ ತಮಿಳು ಚೊಚ್ಚಲ ಚಿತ್ರ ದಿ ಲೆಜೆಂಡ್‌ನ ಪೋಸ್ಟರ್ ಬಿಡುಗಡೆಗಾಗಿ ಮೊದಲ ಬಾರಿ ಕೇನ್ಸ್‌ನಲ್ಲಿ ಭಾಗವಹಿಸಿದರು.

ಕಳೆದ ವರ್ಷ, ಊರ್ವಶಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ನೇರಳೆ ತುಟಿಗಳಿಂದ ಸ್ಫೂರ್ತಿ ಪಡೆದು ನೀಲಿ ತುಟಿಗಳೊಂದಿಗೆ ನಗೆ ಬೀರಿದ್ದರು. 

ಕಳೆದ ವರ್ಷ, ಊರ್ವಶಿ ತನ್ನ ಮೊಸಳೆ ನೆಕ್ಲೇಸ್ ಧರಿಸಿ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದಾಗ ಸಾಕಷ್ಟು ಮೀಮ್ಸ್‌ಗೆ ಆಹ್ವಾನವಿತ್ತಿದ್ದರು. ಅಷ್ಟೇ ಅಲ್ಲ, ಇದು ತನ್ನದೇ ಕಾರಣಕ್ಕಾಗಿ ಕೆಲ ವಿವಾದಕ್ಕೂ ಕಾರಣವಾಗಿತ್ತು. 

ಒಂದೆರಡು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಊರ್ವಶಿ ರೌಟೇಲಾ, ಸಿಂಗ್ ಸಾಬ್ ದಿ ಗ್ರೇಟ್, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4 ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. 

ಅವರು ಕೆಲವು ಜನಪ್ರಿಯ ಸಂಗೀತ ವೀಡಿಯೊಗಳ ಭಾಗವಾಗಿದ್ದಾರೆ. ಅವರು ರಣದೀಪ್ ಹೂಡಾ ಅವರೊಂದಿಗೆ ವೆಬ್-ಸರಣಿ ಇನ್ಸ್‌ಪೆಕ್ಟರ್ ಅವಿನಾಶ್‌ನಲ್ಲಿ ನಟಿಸಿದ್ದಾರೆ.

Latest Videos

click me!