ಸೀರೆಯಲ್ಲಿ ನವತರುಣಿಯಂತೆ ಕಂಗೊಳಿಸಿದ 50ರ ಹರೆಯದ ಮಲೈಕಾ ಆರೋರಾ

ಬಾಲಿವುಡ್‌ ನಟಿ ಮಲೈಕಾ ಅರೋರಾ ಅವರ ಫ್ಯಾಷನ್ ಆಯ್ಕೆಗಳು ಸದಾ ಸ್ಟೈಲಿಶ್‌, ಅನೇಕರನ್ನು ಇನ್ಸ್‌ಫೈರ್ ಮಾಡುವ ಅವರ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ಜೆನ್ ಕಿಡ್‌ಗಳು ಇಷ್ಟಪಡುತ್ತಾರೆ.

ಪಾಪರಾಜಿ ಕ್ಯಾಮರಾಗಳಿಗೆ ಸದಾ ಜಿಮ್‌  ಸೂಟ್‌ನಲ್ಲೇ ಕಾಣಿಸಿಕೊಳ್ಳುವ ಬಾಲಿವುಡ್ ಬ್ಯೂಟಿ ಮಲೈಕಾ ಆರೋರಾ ಈಗ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಸಾರಿಯಲ್ಲಿ ನವ ತರುಣಿಯಂತೆ ಕಂಗೊಳಿಸುತ್ತಿದ್ದಾರೆ.

ತಮ್ಮ 50ರ ಹರೆಯದಲ್ಲೂ ಹದಿಹರೆಯದ ಹುಡುಗಿಯಂತೆ ಫಿಟ್‌ನೆಸ್ ಮೆಂಟೇನ್ ಮಾಡುತ್ತಿರುವ ಮಲೈಕಾ ಯಾವತ್ತೂ ಜಿಮ್‌ಗೆ ಹೋಗೋದನ್ನ ತಪ್ಪಿಸೋದೆ ಇಲ್ಲ. 


ಈಗ ಅವರು ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM)ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮತ್ತೊಮ್ಮೆ ತಮ್ಮ ಸ್ಟೈಲ್ ಗೇಮ್ ಹೆಚ್ಚಿಸಿದ್ದಾರೆ. 

ಪ್ರತಿಷ್ಠಿತ ಸಮಾರಂಭದಲ್ಲಿ ಮಲೈಕಾ ಅವರು ಮನೀಶ್ ಮಲ್ಹೋತ್ರಾ ಅವರ ಕಸ್ಟಮ್ ವಿನ್ಯಾಸದ ಪ್ಯೂಟರ್ ಟ್ಯೂಲ್ ಸ್ವರೋವ್ಸ್ಕಿ ಸೀರೆ ಧರಿಸಿದ್ದರು. 

ಈ ಹೊಳೆಯುವ ಸೀರೆಯು ನಟಿಗೆ ಮತ್ಯಕನ್ಯೆಯ ಲುಕ್ ನೀಡಿದೆ. ಈ ಮಿನುಗುವ ಸ್ವರೋವ್ಸ್ಕಿ ಸೀರೆಯೂ ಹೊಳೆಯುವ ಹರಳುಗಳಿಂದ ಅಲಂಕರಿಸಲ್ಪಟ್ಟಿದೆ. ಸಂಪ್ರದಾಯಿಕ ಶೈಲಿಯಲ್ಲಿ ಸೀರೆ ಉಟ್ಟ ಮಲೈಕಾ ಇದಕ್ಕೆ ಸ್ಲೀವ್‌ಲೆಸ್ ಬ್ಲೌಸ್ ಧಿರಿಸಿ ಎಲ್ಲರ ಟೆಂಪ್ರೇಚರ್ ಹೆಚ್ಚಿಸಿದರು.

ಅಲ್ಲದೇ ಈ ಸೀರೆಗೆ ಮ್ಯಾಚ್ ಆಗುವಂತೆ ಮಲೈಕಾ ಚೋಕರ್ ನೆಕ್ಲೇಸ್, ಸ್ಟಟಿಕದ ಉಂಗುರ ಧರಿಸಿದರು. ಜೊತೆಗೆ ಕಣ್ಣಿಗೆ ಸ್ಮೋಕಿ ಪಿಂಕ್ ಐಶ್ಯಾಡೋ ಮೇಕಪ್ ಮಾಡಿಕೊಂಡಿದ್ದು, ತುಟಿಗೆ ಕಂದು ಬಣ್ಣದ ಲಿಪ್‌ಸ್ಟಿಕ್ ಧರಿಸಿದ್ದರು. 

Latest Videos

click me!