Published : Aug 30, 2024, 01:28 PM ISTUpdated : Aug 30, 2024, 02:14 PM IST
ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬಳು ಬಿಕಿನಿ ಫೋಟೋಶೂಟ್ ಗೆ ಮುಂದಾಗಿದ್ದು, ಪೊಲೀಸರು ಅಡ್ಡಿ ಪಡಿಸಿದ್ದಾರೆ. ಇದಕ್ಕೆ ಆಕೆ ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರು? ಎಂದು ಖಾರವಾಗಿ ಬರೆದುಕೊಂಡಿದ್ದಾಳೆ.
ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಸ್ತ್ರೀವಾದಿ, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬಳು ಬಿಕಿನಿ ಫೋಟೋಶೂಟ್ ಗೆ ಮುಂದಾಗಿದ್ದು, ಪೊಲೀಸರು ಅಡ್ಡಿ ಪಡಿಸಿದ್ದಾರೆಂದು ಆಕೆ ಇನ್ಟಾಗ್ರಾಮ್ ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾಳೆ.
26
ಖ್ಯಾತಿ ಶ್ರೀ ಎಂಬಾಕೆ ಈ ಆರೋಪ ಮಾಡಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳೀಯರು ಪೊಲೀಸರಿಂದ ಅಡ್ಡಿಪಡಿಸಿದ್ದಾರೆಂಬುದು ತಾನು ಬಿಕಿನಿಯಲ್ಲಿ ತೆಗೆದಿರುವ ಫೋಟೋಗಳನ್ನು ಹಾಕಿ ಆರೋಪಿಸಿದ್ದಾಳೆ.
36
ಪಡುಕೆರೆ ಬೀಚ್‌ನಲ್ಲಿ ನನಗೆ ಕಹಿ ಅನುಭವವಾಗಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ಮಾಹಿತಿ ಹಂಚಿಕೊಂಡಿರುವ ಯುವತಿ, ಬಟ್ಟೆ ಬದಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇಲ್ಲದೇ ಹೋದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ ಎಂದು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾಳೆ.
46
ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರು? ಬೀಚ್ ಸಾರ್ವಜನಿಕ ಪ್ರದೇಶ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಎಂದು ಯುವರಿ ಖ್ಯಾತಿ ಶ್ರೀ ಪ್ರಶ್ನೆ ಮಾಡಿದ್ದಾಳೆ.
56
ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಜಾಲತಾಣದಲ್ಲಿ ಉಡುಪಿ ಪೊಲೀಸರಿಗೆ ಯುವತಿ ಪ್ರಶ್ನೆ ಹಾಕಿದ್ದಾಳೆ. ಈಕೆಗೆ ಮದುವೆಯಾಗಿದ್ದು ಗಂಡನೇ ಈಕೆಯ ಫೋಟೋಗ್ರಾಫರ್ ಆಗಿದ್ದಾನೆ. ಇನ್ಟಾದಲ್ಲಿ ಆಕೆಗೆ 7ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ.
66
ಮಾಲ್‌ವೊಂದರಲ್ಲಿ ಫೋಟೋ ತೆಗೆಯಿಸಿಕೊಳ್ಳಲು ಬಂದ ಫ್ಯಾನ್ ಒಬ್ಬ, ಹೆಗಲ ಮೇಲೆ ಕೈ ಹಾಕೋ ಬದಲು ಎದೆ ಮೇಲೆ ಕೈ ಬರೋ ಹಾಗೆ ಇಡುತ್ತಾನೆ. ಇದಕ್ಕೆ ಆಕ್ರೋಶಗೊಂಡ ಕ್ಯಾಥಿಶ್ರೀ, ಕೈಯನ್ನು ಸೊಂಟದ ಮೇಲೆ ಇರಿಸಿಕೊಂಡು ಫೋಟೋಗೆ ಫೋಸ್ ನೀಡಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಕೆ ತನ್ನ ಟ್ಟಿಟ್ಟರ್ ಅಕೌಂಟ್ ನಲ್ಲಿ ಸ್ತ್ರೀವಾದಿ, ವರ್ಣವಿರೋಧಿ, ಕೋಮುವಾದದ ಶತ್ರು ಎಂದು ಬರೆದುಕೊಂಡಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.